ಪ್ರಮುಖ ಸುದ್ದಿಗಳು
ಮಹಿಳೆಯರು ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆಯಿಟ್ಟು ಸಾಧನೆ ಮಾಡಲಿ”: ನ್ಯಾಯಾಧೀಶೆ ನೂರುನ್ನೀಸ ಕರೆ
ವೈಸಿರಿ ಇನ್ಸ್ಟಿಟ್ಯೂಟ್ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ: ಸಾಧಕಿಯರಿಗೆ ಗೌರವ ತುಮಕೂರು: ಮಹಿಳೆಯರು ಕೇವಲ ಅದೃಷ್ಟದಿಂದ ಸಾಧನೆ ಮಾಡುವುದಿಲ್ಲ, ಬದಲಾಗಿ ತಮ್ಮ ಶ್ರಮ ಮತ್ತು ಛಲದಿಂದ ಗುರಿ ತಲುಪುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅಭಿಪ್ರಾಯಪಟ್ಟರು. ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಜೀವನದ ಕಥೆಗೆ ನೀವೇ ಹಿರೋಯಿನ್. ಸಮಾಜದಲ್ಲಿ ನಿಮ್ಮ…
ವಿದ್ಯೆ ಮಾತ್ರ ಮನುಷ್ಯನನ್ನು ಯಶಸ್ವಿ ವ್ಯಕ್ತಿಯನ್ನಾಗಿಸುತ್ತದೆ
ಮಧುಗಿರಿ,. ಪ್ರತಿಯೊಬ್ಬ ವ್ಯಕ್ತಿಯ ಜೀವನ ಉಜ್ವಲವಾಗಬೇಕೆಂದರೆ ವಿದ್ಯೆ ಬಹು ಮುಖ್ಯ. ವಿದ್ಯೆ ಮಾತ್ರ ಮನುಷ್ಯನನ್ನು ಯಶಸ್ವಿ ವ್ಯಕ್ತಿಯನ್ನಾಗಿಸುತ್ತದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿತ್ತಯ್ಯ ತಿಳಿಸಿದರು. ರಂಟವಳ ನಿವೇದಿತ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಈ ಶಾಲೆ ಗಡಿಭಾಗದಲ್ಲಿ ಉತ್ತಮ ಹೆಸರನ್ನು ಗಳಿಸಿ ವರ್ಷದಿಂದ ವರ್ಷಕ್ಕೆ ಮಕ್ಕಳ ಕಲಿಕೆಯಲ್ಲಿ ಯಶಸ್ವಿಯನ್ನು ಕಂಡಿದೆ. ಕೇವಲ ವಿದ್ಯಾವಂತರಾಗಿ ಅಂಕಗಳಿದರಷ್ಟೇ ಸಾಲದು ಸಂಸ್ಕಾರವನ್ನು ಕಲಿತು ಪೋಷಕರ ಶ್ರಮಕ್ಕೆ ತಕ್ಕ ಪ್ರತಿಫಲ ತರುವಂತೆ ಆಗಬೇಕು ಎಂದು ತಿಳಿಸಿದರು….
ಪತ್ರಕರ್ತರಿಗೆ ಗಿಗ್ ಸ್ಟಾರ್ ಖಾತೆ ತೆರೆಯುವ ಅಭಿಯಾನ ಕೆನರಾ ಬ್ಯಾಂಕಿನ ಯೋಜನೆಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಚಾಲನೆ
ತುಮಕೂರು: ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೆನರಾ ಬ್ಯಾಂಕ್ನ ಶೂನ್ಯ ಬ್ಯಾಲೆನ್ಸ್ ಗಿಗ್ ಸ್ಟಾರ್ ಉಳಿತಾಯ ಬ್ಯಾಂಕ್ ಖಾತೆ ತೆರೆಯುವ ಅಭಿಯಾನಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗಿಗ್ ಸ್ಟಾರ್ ಉಳಿತಾಯ ಖಾತೆ ತೆರೆಯುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಗಿಗ್ ಸ್ಟಾರ್ ಯೋಜನೆಯಲ್ಲಿ ಖಾತೆದಾರರಿಗೆ ಬ್ಯಾಂಕ್…
ನಾಳೆ ರಾಜ್ಯಾದ್ಯಂತ ಅಂತರ್ಯಾಮಿ ಚಲನಚಿತ್ರ ಬಿಡುಗಡೆ
ತುಮಕೂರು: ಸ್ಪರ್ಧಾತ್ಮಕ ಯುಗದಲ್ಲಿ ಯುವಕರಿಗೆ ಮಾರಕವಾಗಿರುವ ಆನ್ಲೈನ್ ಗೇಮ್, ಸಾಮಾಜಿಕ ಜಾಲತಾಣದ ಪ್ರಸ್ತುತದ ವಸ್ತು ಸ್ಥಿತಿಗಳ ಬಗ್ಗೆ ಅರಿತು ಜೀವನಕ್ಕೆ ಬೆಳಕಾಗುವ ಅಂತರಾಳಕ್ಕೆ ಕರೆದ್ಯೂಯುವ ಚಿತ್ರಕಥೆಯನ್ನಾಧಾರಿತ “ಅಂತರ್ಯಾಮಿ” ಮಾರ್ಚ್ 6.ರಂದು ರಾಜ್ಯಾದ್ಯಂತ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳ್ಳುತ್ತಿದೆ ಎಂದು ನಿರ್ದೇಶಕ ಕೆ. ಧನಂಜಯ ಅವರು ತಿಳಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರ್ಯಾಮಿ ಚಲನಚಿತ್ರದ ಕಥಾ ಹಂದರವಿದ್ದು, ಸಾಮಾಜಿಕ ಜಾಲತಾಣದ ಕರಾಳ ಮುಖವನ್ನು ತೆರದಿಡಲಿದೆ. ಈ ಚಿತ್ರ ಕುಟುಂಬ ಸಮಾಜ…
ವಿಜ್ಞಾನ ಕ್ಷೇತ್ರದಲ್ಲೂ ಹೆಚ್ಚಲಿ ನಾರಿ ಶಕ್ತಿ : ಡಾ.ವೈ ಸಿ ಕಮಲಾ
* ಜಿ.ಎಫ್.ಜಿ.ಸಿ ತಿಪಟೂರಿನಲ್ಲಿ ವಿಜ್ಞಾನ ದಿನ ಆಚರಣೆ * ವಿಜ್ಞಾನ ಮಾದರಿಗಳ ಪ್ರದರ್ಶನ ಸೇರಿ ವಿವಿಧ ಸ್ಪರ್ಧೆಗಳ ಆಯೋಜನೆ ತಿಪಟೂರು: ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಕೆಲ ಮಹಿಳಾ ಸಾಧಕರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾಲಿಡಬೇಕಾಗಿದ್ದು, ಅಂತಹವರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು: ವಿಕಸಿತ ಭಾರತಕ್ಕೆ ಪ್ರೇರಕ ಶಕ್ತಿ ಎಂಬ ಧ್ಯೇಯದೊಂದಿಗೆ ಈ ಬಾರಿಯ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ…
ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ ಅನ್ನದಾಸೋಹ ಶ್ರೇಷ್ಠ ಸೇವೆ: ಕಾರದ ವೀರಬಸವ ಸ್ವಾಮೀಜಿ
ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಸೋಮವಾರ ಇತಿಹಾಸ ಪ್ರಸಿದ್ಧ ಪ್ರಸನ್ನ ಜಗದಾಂಬ ಸಮೇತ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು. ಅಲಂಕೃತ ರಥದಲ್ಲಿ ದೇವರುಗಳನ್ನು ಪ್ರಷ್ಠಾಪಿಸಿ, ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ರಥೋತ್ಸವ ನೆರವೇರಿತು. ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಬೆಳ್ಳಾವಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದ ಅಂಗವಾಗಿ ಬೆಳ್ಳಾವಿಯ ವಿವಿಧೆಡೆ ಕೊಪ್ಪಲುಗಳಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್ ಅವರು ಇಲ್ಲಿನ ನಿಧಿಶ್ರೀ ಫಾರಂನಲ್ಲಿ…
ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ
ತುಮಕೂರು: ಮುಂಬರುವ ಬಜೆಟ್ ಅಧಿವೇಶನದಲ್ಲಿ ನೇರ ನೇಮಕಾತಿ, ಪದೊನ್ನತ್ತಿ, ಬ್ಯಾಕ್ಲಾಗ್, ಕೆಐಎಡಿಬಿ, ಬಿಡಿಎ ಹಾಗೂ ಸರಕಾರಿ ಗುತ್ತಿಗೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಾದರ ಮಹಾಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಟೌನ್ ಹಾಲ್ನಲ್ಲಿ ಸಮಾವೇಶಗೊಂಡ ಸಾವಿರಾರು ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರುಗಳು ಬಾಬಾಸಾಹೇಬರ ಪುತ್ತಳಿಗೆ ಪುಷ್ಪರ್ಚಾನೆ ಮಾಡಿ,ಬಿ.ಜಿ.ಎಸ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಚರ್ಚ್…
ಮಾದರ ಮಹಾ ಸಭಾದ ಕಡಬ ಹೋಬಳಿ ಅಧ್ಯಕ್ಷರಾಗಿ ದಾಸರಕಲ್ಲಹಳ್ಳಿ ಲಕ್ಷ್ಮಣ್ ಆಯ್ಕೆ
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಮಾದರ ಮಹಾಸಭಾದ ಅಧ್ಯಕ್ಷರಾಗಿ ದಾಸರಕಲ್ಲಹಳ್ಳಿ ಲಕ್ಷ್ಮಣ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಕಡಬ ಗ್ರಾಮದಲ್ಲಿ ಮಾದರ ಮಹಾಸಭಾ ಹೋಬಳಿ ಘಟಕ ರಚನೆಗೆ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಗುಬ್ಬಿ ತಾಲೂಕು ಘಟಕದ ತಾಲೂಕು ಅಧ್ಯಕ್ಷರು ಹಾಗು ಪದಾಧಿಕಾರಿಗಳ ಸಮ್ಮುಖದಲ್ಲಿ ಕಡಬ ಹೋಬಳಿಯ ಎಲ್ಲಾ ಗ್ರಾಮಗಳ ಮಾದಿಗ ಸಮುದಾಯದ ಮುಖಂಡರು ಸೇರಿ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾದರ ಮಹಾ ಸಭಾದ ತಾಲೂಕು ಅಧ್ಯಕ್ಷ ಕೊಡೆಯಾಲ ಮಹದೇವ್ ರವರು…
ಪಾಲನಹಳ್ಳಿ ಮಠದ ಶ್ರೀ ಶನೇಶ್ಚರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ಆಹ್ವಾನ
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಶ್ರೀ ಶನೇಶ್ಚರ ಸ್ವಾಮಿ ಕ್ಷೇತ್ರ ಪಾಲನಹಳ್ಳಿ ಮಠದ ಸಂಸ್ಥಾಪಕರು ಮಠ ಅಧ್ಯಕ್ಷರು ಆದ ಡಾ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳು ಇದೇ ತಿಂಗಳು ದಿನಾಂಕ 15 ರಿಂದ 16 ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯುವ ಶ್ರೀ ಶನೇಶ್ಚರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ತುಮಕೂರು ಜಿಲ್ಲೆಯ ಸಮಸ್ತ ಸಮುದಾಯದ ಭಕ್ತ ವೃಂದಕ್ಕೆ ಆಹ್ವಾನ ನೀಡಿದರು. ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ತುಮಕೂರಿನ ಹಲವಾರು ಸಮುದಾಯದ ಮುಖಂಡರೊಂದಿಗೆ…
ಬೆಂಗಳೂರು ವಿವಿಯಲ್ಲಿ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ನಿಗಮಗಳ, ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಗಳ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಿದ್ದ ‘ಸಂವಿಧಾನವೇ ಬೆಳಕು’ ಒಂದು ದಿನದ ವಿಚಾರ ಸಂಕಿರಣ ಮತ್ತು ವಾಕ್ ಥಾನ್ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ. ಜಯಕರ ಎಸ್.ಎಂ, ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಕಾಂತರಾಜ್, ಪ್ರಜಾವಾಣಿ ದಿನಪತ್ರಿಕೆಯ ಪ್ರದಾನ ಸಂಪಾದಕ ರವೀಂದ್ರ ಭಟ್, ಸಿಇಒ ಕಿರಣ್ ಸುಂದರರಾಜ್,…