ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ತುಮಕೂರು : ತುಮಕೂರು ತಾಲ್ಲೂಕು, ಹೆಬ್ಬೂರು ಹೋಬಳಿಯ ಸಿದ್ಧಪ್ಪನಪಾಳ್ಯದಲ್ಲಿರುವ ಶ್ರೀ ಮಹಾಲಕ್ಷ್ಮೀ ಸಮೇತ ಉಮಾಮಹೇಶ್ವರಿ ಸನ್ನಿಧಾನದ ಶ್ರೀ ಶಿವಶನೈಶ್ಚರ ಸ್ವಾಮಿಯ ಜಯಂತಿ ಹಾಗೂ ಶ್ರೀ ಮಠದ ಧರ್ಮಾಧಿಕಾರಿ ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜಾ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಅಂಗವಾಗಿ ದಿನಾಂಕ 20-05-2026 ಗುರುವಾರ ಶ್ರೀ ಮಹಾಲಕ್ಷ್ಮೀ ಸಮೇತ ಉಮಾಮಹೇಶ್ವರಿ ದೇವರಿಗೆ ಬೆಳಿಗ್ಗೆ ವಿಶೇಷ ಪುಷ್ಪಾಲಂಕಾರ ಪೂಜೆ, ಶ್ರೀ ಶನೈಶ್ಚರ ಪ್ರಕೋಷ್ಠ ಹೋಮ, ಬೆಳಿಗ್ಗೆ 11 ಕ್ಕೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು, ಅಂದು ಸಂಜೆ 8 ಗಂಟೆಗೆ ಅರಿಯೂರು ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಜೊತೆಗೆ ಇದೇ ಸಂಜೆ 7 ಕ್ಕೆ ನಾಡಿನ ಹೆಸರಾಂತ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ ಮತ್ತು ಮಡೆನೂರು ಮನು ಇವರುಗಳಿಂದ ವಿಶೇಷ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ. ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳ ಭಾಗವಾಗಿ ಷ|| ಬ್ರ|| ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು, ಚನ್ನಬಸವೇಶ್ವರ ಗದ್ದುಗೆ ಮಠ, ತವಡೇಹಳ್ಳಿ, ಶ್ರೀ ಬಸವಬೃಂಗೇಶ್ವರ ಶ್ರೀ ಬೃಂಗೇಶ್ವರ ಮಹಾಮಠ ಬಿ.ಕೋಡಿಹಳ್ಳಿ ಗುಬ್ಬಿ ತಾಲ್ಲೂಕು, ಡಾ. ಶ್ರೀ ಪಾಪ್ಪಣ್ಣ ಸ್ವಾಮಿಗಳು, ಧರ್ಮದರ್ಶಿಗಳು ಶ್ರೀ ಚಿಕ್ಕಣ್ಣಸ್ವಾಮಿ ಕ್ಷೇತ್ರ, ಶ್ರೀ ಗುರುಬಸಪ್ಪ, ಧರ್ಮದರ್ಶಿಗಳು, ಶ್ರೀ ವೈದ್ಯನಾಥೇಶ್ವರ ಸ್ವಾ,ಮಿ ದೇವಸ್ಥಾನ, ಅರಿಯೂರು, ಶ್ರೀ ಚಿ.ನಿ.ಪುರುಷೋತ್ತಮ್, ಉದಯವಾಣಿ ಜಿಲ್ಲಾ ವರದಿಗಾರರು ಹಾಗೂ ನಾಡಿನ ಹಲವಾರು ಭಾಗಗಳಿಂದ ಬಂದಂತಹ ನಿರಾಶ್ರಿತರಿಗೆ ಆಶ್ರಯರಾಗಿರುವ ಜನಶ್ರೀ ಯೋಗೀಶ್, ಸಂಸ್ಥಾಪಕರು, ಜನಶ್ರೀ ಚಾರಿಟಬಲ್ ಟ್ರಸ್ಟ್, ದಾಸನಪುರ ಇವರುಗಳು ಆಗಮಿಸಲಿದ್ದು, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಶ್ರೀ ಶಿವಶನೈಶ್ಚರ ಸ್ವಾಮಿ ಜಯಂತಿಯ ಪ್ರಯುಕ್ತ ಮತ್ತು ನಾಡಿನ ಸಮಸ್ತ ಜನತೆಯ ಒಳತಿಗಾಗಿ ವಿವಿಧ ಪೂಜಾ ಮತ್ತು ಹೋಮ ಹವನಾದಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಮಸ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಲು ಸಿದ್ಧಪ್ಪನ ಪಾಳ್ಯದ ಅಕ್ಕ-ಪಕ್ಕದ ಗ್ರಾಮದವರು ಮತ್ತು ಶ್ರೀಕ್ಷೇತ್ರದ ಭಕ್ತಾದಿಗಳ ಪರವಾಗಿ ಚನ್ನಬಸಯ್ಯ ಪ್ರಕಟಣೆಯ ಮೂಲಕ ಮನವಿ ಮಾಡಿರುತ್ತಾರೆ.