ಪ್ರಮುಖ ಸುದ್ದಿಗಳು
ವೈಸಿರಿ ಕಾಲೇಜಿನಲ್ಲಿ “ವಿ-ನೂತನ” ಸಂಭ್ರಮ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ. ತುಮಕೂರು:- ‘ವೈಸಿರಿ ಇನ್ ಸ್ಟಿಟ್ಯೂಟ್ ಆಫ್
ತುಮಕೂರು:- ‘ವೈಸಿರಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಾಲಜಿ’ ಕಾಲೇಜು ಆವರಣದಲ್ಲಿ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಬಿ.ಬಿ.ಎ ಮತ್ತು ಬಿ.ಸಿ.ಎ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ವಿ-ನೂತನ’ ಎಂಬ ವಿಶೇಷ ಪ್ರವೇಶಾತಿ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿತ್ತು. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವಾತಾವರಣ, ನಿಯಮಗಳು ಮತ್ತು ಸೌಲಭ್ಯಗಳ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಎನ್. ಬಿ. ಅವರು “ವೈಸಿರಿ ಸಂಸ್ಥೆಯು ಕೇವಲ…
ವಿದ್ಯಾನಿದಿ ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ ಎನ್. ನೀಟ್-2026 ರ ಆಲ್ಇಂಡಿಯಾ 738 ನೇ ರ‍್ಯಾಂಕ್ ಪಡೆದು ಕಾಲೇಜಿನ ಕಿರ್ತಿ ಹೇಚ್ಚಿಸಿದ್ದಾರೆ
ತುಮಕೂರು : ನೀಟ್–2026ರ ಫಲಿತಾಂಶದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ ಎನ್. ಅವರು ಆಲ್ ಇಂಡಿಯಾ 738ನೇ ಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ರೋಹಿತ್ ವೈ. ಜಿ. 618 ಅಂಕಗಳೊಂದಿಗೆ 2266 ರ‍್ಯಾಂಕ್ ಪಡೆದಿದ್ದಾರೆ. ರಚನಾ ಎಸ್. 591 ಅಂಕ, ನಿಹಾರಿಕಾ ಎ. 553 ಅಂಕ, ವಸುಧೇಂದ್ರ 544 ಅಂಕ, ವರ್ಷಿಣಿ ಎಸ್. 518 ಅಂಕ, ಹರ್ಷನ್ ಗೌಡ 516 ಅಂಕ ಹಾಗೂ ಹೇಮಾ ಟಿ.ಎಸ್. 510…
ವಿಪ್ರೋ, ಅಸೆಂಚರ್ ಕಂಪನಿಗಳಿಗೆ ಆಯ್ಕೆಯಾದ MBA – MCA ವಿದ್ಯಾರ್ಥಿಗಳು
ತುಮಕೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ವತಿಯಿಂದ ವಿಪ್ರೋ, ಅಸೆಂಚರ್, ಟೀಮ್ ವೇರ್ ಸಲ್ಯೂಷನ್ಸ್, ಪಾಲಿಸಿ ಬಜಾರ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಮೂಲಕ ಪ್ಲೇಸ್ಮೆಂಟ್ ಗೆ ಆಯ್ಕೆಯಾದ MBA, MCA ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾಶ್ರೀ.S, ಪ್ರಶಾಂತ್. T.U, ಸಹನ N, ಅಜಿತ್ M, ಲಕ್ಷ್ಮೀರಾಯ್, ಗೀತಾಂಜಲಿ T.N. ಇತರೇ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವತಿಯಿಂದ ಪ್ಲೇಸ್ಮೆಂಟ್ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದಲ್ಲಿ…
ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಟ್ಟಾಗ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಕಾರದ ವೀರ ಬಸವೇಶ್ವರ ಸ್ವಾಮೀಜಿ.
ಗುಬ್ಬಿ : ಪ್ರತಿಯೊಬ್ಬ ಮನುಷ್ಯನು ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಟ್ಟಾಗ ಮಾತ್ರ ಅವನ ಬದುಕು ಸಾರ್ಥಕವಾಗುತ್ತದೆ ಎಂದು ಬೆಳ್ಳಾವಿ ಮಠದ ಕಾರದ ವೀರ ಬಸವೇಶ್ವರ ಸ್ವಾಮೀಜಿ ಹೇಳಿದರು. ಗುಬ್ಬಿ ಪಟ್ಟಣದಲ್ಲಿ ನಡೆದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರು ಮುಂಚಿನಿಂದಲೂ ಸಾಮಾಜಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಮತ್ತು ಹಲವು ರೀತಿಯ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಮಾಡಿಕೊಂಡು ಬಂದಿದ್ದಾರೆ. ಲಯನ್ಸ್ ಕ್ಲಬ್…
ದೇಶದ ಪ್ರಗತಿಗೆ ನಿಮ್ಮ ಸಾರ್ಥಕ ಶ್ರಮ ಇರಲಿ :ಶೋಭಾ ಕರಂದ್ಲಾಜೆ
ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮ ವಾರ್ಷಿಕೋತ್ಸವದಲ್ಲಿ ಮನವಿ ತುಮಕೂರು: ವಿದ್ಯಾರ್ಥಿಗಳು ಮುಂದೆ ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡಿ, ಏನಾದರೂ ಆಗಿ ಮೊದಲು ದೇಶ ಭಕ್ತರಾಗಿರಿ, ದೇಶಕ್ಕಾಗಿ ದುಡಿಯುತ್ತಿದ್ದೇನೆ ಎಂಬ ಭಾವನೆ ಇರಲಿ, ದೇಶದ ಪ್ರಗತಿಗೆ ನಿಮ್ಮ ಸಾರ್ಥಕ ಶ್ರಮ ಇರಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು. ಶನಿವಾರ ನಗರದ ವಿದ್ಯಾನಿಧಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ…
ಚಾಲುಕ್ಯ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆ
ಗುಬ್ಬಿ: ತಾಯಿಯ ಅಂತಃಕರಣೆ ಹಾಗೂ ಬುದ್ಧನ ಕಾರುಣ್ಯ ಎರಡನ್ನು ಯಾವ ವ್ಯಕ್ತಿ ಪಾಲಿಸುತ್ತಾನೋ ಅವರು ಸಮಾಜದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಪತ್ರಕರ್ತ ಹಾಗೂ ರಂಗಕಲಾವಿದರಾದ ಉಗಮ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಚಾಲುಕ್ಯ ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಹಾಗೂ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಸಮಾಜಿಕ ಮತ್ತು ಸಾಂಸ್ಕೃತಿಕ ಕೆಲಸಗಳನ್ನು ಮಾಡಿದರೆ ಅವನು ಸಮಾಜದಲ್ಲಿ ಗೆಲ್ಲುತ್ತಾನೆ. ಸಮಾಜದಲ್ಲಿ ಸದ್ದು ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಪ್ರಚಾರ ಮಾಡದೆ ಕೆಲಸ ಮಾಡಿದರೆ…
22 ಹಾಗೂ 23 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ
ಗುಬ್ಬಿ : ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಾಗೂರು ಗೇಟ್ ಸಮೀಪದಲ್ಲಿರುವ ಬಾಲಾಜಿ ಬಡಾವಣೆಯಲ್ಲಿ ಜೂನ್ 22 ಹಾಗೂ 23 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾಕ್ಟರ್ ವೀರ ಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಲಿದೆ ಎಂದು ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಎರಡು ದಿನದ ಕಾರ್ಯಕ್ರಮದಲ್ಲಿ ಜೂನ್ 22ರ ಸಂಜೆ 4ಕ್ಕೆ ರಂಭಾಪುರಿ ಶ್ರೀಗಳ ಶುಭ ಆಗಮನ ಮತ್ತು ಸಾರುಟು ಉತ್ಸವ ನೆರವೇರಲಿದ್ದು 23ರಂದು ಬೆಳಗ್ಗೆ ಷಷ್ಟಿ ಪೂರ್ತಿ, ಬೆಳಗ್ಗೆ…
ಕನ್ನಡ ಭವನದಲ್ಲಿ ಆತ್ಮಾನಂದರ ಚಿತ್ರಕಲಾ ಪ್ರದರ್ಶನ ಆಯೋಜನೆ
ಬೆಂಗಳೂರು: ಕರ್ನಾಟಕ ಆರ್ಟ್ಸ್ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ನಗರ ಜಿಲ್ಲೆ ಇವರ ಸಹಕಾರದೊಂದಿಗೆ ಚಿತ್ರಕಲಾವಿದ, ಸಮಾಜ ಸೇವಕ, ಬಹುಮುಖ್ಯ ಪ್ರತಿಭೆ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ಆತ್ಮಾನಂದ ಅವರ ಚಿತ್ರಕಲಾ ಪ್ರದರ್ಶನವನ್ನು ನಾಳೆ ಬೆಳಗ್ಗೆ 11 ಗಂಟೆಗೆ (ಗುರುವಾರ ರಿಂದ ಶುಕ್ರವಾರ) ಎರಡು ದಿನಗಳ ವರೆಗೆ ನಗರದ ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸರೋಜಾ ಅವರು ಪತ್ರಿಕಾ…
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಹುನ್ನಾರ
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಹುನ್ನಾರ ನಾಲ್ವರ ವಿರುದ್ದ ಎಫ್.ಐ.ಆರ್; ಸೂಕ್ತ ತನಿಖೆಗೆ ಒತ್ತಾಯ ತುಮಕೂರು:ಗುಬ್ಬಿ ಪಟ್ಟಣದ ಸರ್ವೆ ನಂಬರ್ 68/2ಎ ನಲ್ಲಿ ರುವ ಸುಮಾರು 1.02 ಎಕರೆ ಜಾಗವನ್ನು ಕೆಲವರು ಜಮೀನ ಮೂಲ ಮಾಲೀಕರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ,ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲು ಹೊರಟಿದ್ದು,ಇದರ ವಿರುದ್ದ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳ ವಿರುದ್ದ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಮಂಜುನಾಥ್.ಜಿ.ಎಸ್ ಒತ್ತಾಯಿಸಿದ್ದಾರೆ. ಗುಬ್ಬಿ ಪಟ್ಟಣದ…
ಗುಬ್ಬಿ ಶಾಸಕರಿಗೆ ಸಚಿವಸ್ಥಾನ ಕೈತಪ್ಪಿದ್ದಕ್ಕೆ ಲಿಂಕ್ ಕೆನಾಲ್ ವಿರುದ್ಧ ಹೇಳಿಕೆ ಸರಿಯಲ್ಲ ಬಿ,ಎಸ್ ನಾಗರಾಜು
ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಿರುವ ಅವೈಜ್ಞಾನಿಕ ಎಕ್ಸ್ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯನ್ನು ಸ್ಥಗಿತಗೋಳಿಸುವಂತೆ ಹಲವಾರು ರೈತಪರ ಹೋರಾಟಗಾರರ ಚಳುವಳಿಯ ಪ್ರತಿಫಲವಾಗಿ ಒಂದು ವರ್ಷದ ಹಿಂದೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು ಅದರೆ ಇತ್ತೀಚೆಗೆ ರಾಜ್ಯದಲ್ಲಿ ಡಿ,ಕೆ ಶಿವಕುಮಾರ್ ರವರು ನೂತನ ಮುಖ್ಯಮಂತ್ರಿಯಾದ ತಕ್ಷಣವೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅವೈಜ್ಞಾನಿಕವಾದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಪ್ರಾರಂಭಿಸಲು ಮುಂದಾಗಿರುವುದು ಖಂಡನೀಯ ಎಂದು ಜೆಡಿಎಸ್ ಮುಖಂಡ ಬಿ, ಎಸ್, ನಾಗರಾಜು ತಿಳಿಸಿದರು. ಈ ಕುರಿತಾಗಿ ಗುಬ್ಬಿ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ…