ಜಿಲ್ಲಾ ಸುದ್ದಿಗಳು
ತುಮಕೂರು ದಸರಾ- ಸನ್ಮಾನಕ್ಕೆ ಸ್ಥಳೀಯ ಉತ್ಪನ್ನಗಳ ಖರೀದಿಗೆ ಆದ್ಯತೆ: ಸೋನಿಯಾ ವರ್ಣೇಕರ್
ಗಣ್ಯರು, ಅತಿಥಿಗಳಿಗೆ ಸನ್ಮಾನ; ಸ್ಥಳೀಯ ಉತ್ಪಾದಕರಿಂದ ಶಾಲು, ಸ್ಮರಣಿಕೆಗಳ ಖರೀದಿಗೆ ಆಸಕ್ತಿ ತುಮಕೂರು: ಈ ಬಾರಿ ತುಮಕೂರು ದಸರಾ ಉತ್ಸವದಲ್ಲಿ ಗಣ್ಯರಿಗೆ, ಸನ್ಮಾನಿತರಿಗೆ ನೀಡುವ ಸ್ಮರಣಿಕೆ, ಸನ್ಮಾನದ ಹಾರ, ಶಾಲು ಇತ್ಯಾದಿಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಹಾಗೂ ವೇದಿಕೆಗಳ ನಿರ್ವಹಣೆ ಮತ್ತು ಸನ್ಮಾನ ಸಮಿತಿಯ ಅಧ್ಯಕ್ಷೆ ಸೋನಿಯಾ ವರ್ಣೇಕರ್ ತಿಳಿಸಿದರು. ನಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ತುಮಕೂರು…
ಕ್ಲಸ್ಟರ್ ವಿವಿ ವತಿಯಿಂದ ಒಂದು ದಿನದ ಅಂಬೇಡ್ಕರ್ ರವರ ಉಪನ್ಯಾಸ ಯಶಸ್ವಿ
ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶಕ್ಕಾಗಿ ನೀಡಿದ ಕೊಡುಗೆಗಳ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಎಂದರೆ ದಲಿತ ಕೆಳಜಾತಿ, ಮೀಸಲಾತಿ ಕಲ್ಪಿಸಿಕೊಟ್ಟವರು ಎಂಬುದಷ್ಟೇ ಸಾಕಷ್ಟು ಮಂದಿಗೆ ತಿಳಿದಿದೆ. ಆದರೆ, ಇವರ ಹಲವು ವಿಭಿನ್ನ ವಿಚಾರಗಳ…
ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಬಿ.ಆರ್.ಅಂಬೇಡ್ಕರ್ ರವರ ವಿಚಾರ ಸಂಕಿರಣ ಆಯೋಜನೆ
ಬೆಂಗಳೂರು: ನಗರದ ಅರಮನೆ ರಸ್ತೆಯ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ನಾಳೆ ಬೆಳಗ್ಗೆ 10.30ಕ್ಕೆ ಗುರುವಾರ ಸೆ.17ರಂದು ವಿಜ್ಞಾನ ವಿಭಾಗದ ಸಮ್ಮೇಳನ ಸಭಾಂಗಣದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರವರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವರು ಹಾಗೂ ಮಾನವಿಕ ಮತ್ತು ಕಲಾ ವಿಭಾಗದ ನಿರ್ದೇಶಕರಾದ ಪ್ರೊ. ವೈ. ರಮೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಚಾರ ಸಂಕಿರಣವನ್ನು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಮತ್ತು ಆರ್ ಪಿಐ ಉಪಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಅವರು…
ಎಸ್.ಐ.ಟಿ.ಯಲ್ಲಿ 17ನೇ ಪದವಿ ಸಮಾರಂಭ 144 ವಿದ್ಯಾರ್ಥಿಗಳಿಗೆ ಪದವಿ, ಪದಕ ಪ್ರದಾನ
ತುಮಕೂರು: ನಗರದ ಸಿದ್ಧಗಂಗಾ ತಾಂತ್ರಿ ಮಹಾವಿದ್ಯಾಲಯದಲ್ಲಿ ಈ ತಿಂಗಳ 12ರಂದು ಬೆಳಿಗ್ಗೆ 11 ಗಂಟೆಗೆ 17ನೇ ಪದವಿ ಪ್ರದಾನ ಸಮಾರಂಭ ಏರ್ಪಾಟಾಗಿದೆ. ವಿವಿಧ ಸುಮಾರು 1400ಕ್ಕೂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಡಾ. ಶಿವಕುಮಾರಯ್ಯ ಹೇಳಿದರು. ಶುಕ್ರವಾರ ಎಸ್ಐಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಶ್ರೀಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಪ್ರದವಿ ಪ್ರದಾನ ಸಮಾರಂಭದಲ್ಲಿ ಮಾರ್ವೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ…
ಡಾ ಯೋಗೀಶ್ ಗೆ ‘ವಿದ್ಯಾಭೂಷಣ’ ರಾಜ್ಯ ಪ್ರಶಸ್ತಿ!
ಜ್ಞಾನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತುಮಕೂರಿನ ಡಾ. ಯೋಗೀಶ್ ಡಿ.ಪಿ. ಅವರಿಗೆ ‘ವಿದ್ಯಾಭೂಷಣ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ನ ಶ್ರೀ ಕೃಷ್ಣರಾಜ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅವರು ನಿರಂತರವಾಗಿ ಸಲ್ಲಿಸುತ್ತಿರುವ ಗಣನೀಯ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಟ್ರಸ್ಟ್ ವಿಶೇಷವಾಗಿ ಪರಿಗಣಿಸಿದೆ.
ನಗರದಲ್ಲಿ ಬೀದಿಬದಿ ವ್ಯಾಪಾರಿಗಳು ಪರ್ಯಾಯ ಜಾಗದ ವ್ಯವಸ್ಥೆಗೆ ಒತ್ತಾಯಿಸಿ ತಮಟೆ ಚಳವಳಿ
ತುಮಕೂರು: ಸುಪ್ರೀಂ ಕೋರ್ಟ್ ಆದೇಶದಂತೆ ನಗರಪಾಲಿಕೆ ಅಧಿಕಾರಿಗಳು ನಗರದೆಲ್ಲೆಡೆ ಫುಟ್ಪಾತ್ ಅಂಗಡಿಗಳನ್ನು ತೆರವು ಮಾಡಿಸಿರುವುದನ್ನು ವಿರೋಧಿಸಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಸೋಮವಾರ ತಮಟೆ ಚಳವಳಿ ನಡೆಸಿದರು. ವಿವಿಧ ಕನ್ನಡಪರ ಸಂಘಟನೆಗಳು, ಜಿಲ್ಲಾ ಜೆಡಿಎಸ್, ದಲಿತ ಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳ ಮುಖಂಡರು ಚಳವಳಿಯನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗುಬ್ಬಿ ತಾಲ್ಲೂಕು ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಪ್ರತಿಭಟನೆಗೆ…
ಸೂರಿಲ್ಲದವರಿಗೆ 15 ಲಕ್ಷಕ್ಕೂ ಹೆಚ್ಚು ನಿವೇಶನ : ಡಾ: ಜಿ.ಪರಮೇಶ್ವರ
ತುಮಕೂರು : ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾ ಸೇವಾ ಇಲಾಖೆಯನ್ನು ಇಂದಿನಿಂದ ಹೊಸದಾಗಿ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ.ಪರಮೇಶ್ವರ ಹೇಳಿದರು. ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ ಪ್ರಜಾ ಸೇವಾ ಅಭಿಯಾನ…
ವೈಸಿರಿ ಕಾಲೇಜಿನಲ್ಲಿ “ವಿ-ನೂತನ” ಸಂಭ್ರಮ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ. ತುಮಕೂರು:- ‘ವೈಸಿರಿ ಇನ್ ಸ್ಟಿಟ್ಯೂಟ್ ಆಫ್
ತುಮಕೂರು:- ‘ವೈಸಿರಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಾಲಜಿ’ ಕಾಲೇಜು ಆವರಣದಲ್ಲಿ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಬಿ.ಬಿ.ಎ ಮತ್ತು ಬಿ.ಸಿ.ಎ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ವಿ-ನೂತನ’ ಎಂಬ ವಿಶೇಷ ಪ್ರವೇಶಾತಿ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿತ್ತು. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವಾತಾವರಣ, ನಿಯಮಗಳು ಮತ್ತು ಸೌಲಭ್ಯಗಳ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಎನ್. ಬಿ. ಅವರು “ವೈಸಿರಿ ಸಂಸ್ಥೆಯು ಕೇವಲ…
ವಿದ್ಯಾನಿದಿ ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ ಎನ್. ನೀಟ್-2026 ರ ಆಲ್ಇಂಡಿಯಾ 738 ನೇ ರ್ಯಾಂಕ್ ಪಡೆದು ಕಾಲೇಜಿನ ಕಿರ್ತಿ ಹೇಚ್ಚಿಸಿದ್ದಾರೆ
ತುಮಕೂರು : ನೀಟ್–2026ರ ಫಲಿತಾಂಶದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ ಎನ್. ಅವರು ಆಲ್ ಇಂಡಿಯಾ 738ನೇ ಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ರೋಹಿತ್ ವೈ. ಜಿ. 618 ಅಂಕಗಳೊಂದಿಗೆ 2266 ರ್ಯಾಂಕ್ ಪಡೆದಿದ್ದಾರೆ. ರಚನಾ ಎಸ್. 591 ಅಂಕ, ನಿಹಾರಿಕಾ ಎ. 553 ಅಂಕ, ವಸುಧೇಂದ್ರ 544 ಅಂಕ, ವರ್ಷಿಣಿ ಎಸ್. 518 ಅಂಕ, ಹರ್ಷನ್ ಗೌಡ 516 ಅಂಕ ಹಾಗೂ ಹೇಮಾ ಟಿ.ಎಸ್. 510…
ವಿಪ್ರೋ, ಅಸೆಂಚರ್ ಕಂಪನಿಗಳಿಗೆ ಆಯ್ಕೆಯಾದ MBA – MCA ವಿದ್ಯಾರ್ಥಿಗಳು
ತುಮಕೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ವತಿಯಿಂದ ವಿಪ್ರೋ, ಅಸೆಂಚರ್, ಟೀಮ್ ವೇರ್ ಸಲ್ಯೂಷನ್ಸ್, ಪಾಲಿಸಿ ಬಜಾರ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಮೂಲಕ ಪ್ಲೇಸ್ಮೆಂಟ್ ಗೆ ಆಯ್ಕೆಯಾದ MBA, MCA ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾಶ್ರೀ.S, ಪ್ರಶಾಂತ್. T.U, ಸಹನ N, ಅಜಿತ್ M, ಲಕ್ಷ್ಮೀರಾಯ್, ಗೀತಾಂಜಲಿ T.N. ಇತರೇ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವತಿಯಿಂದ ಪ್ಲೇಸ್ಮೆಂಟ್ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದಲ್ಲಿ…