ಬೆಂಗಳೂರು: ನಗರದ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋರಮಂಗಲ ನಿವಾಸಿ ಎಂ. ಶಂಕರಪ್ಪ ಮತ್ತು ಮುನಿಯಲ್ಲಮ್ಮ ದಂಪತಿಯ ಪುತ್ರರಾದ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಎಸ್. ಅಮರೇಶ್ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಕಲಾ ನಿಖಾಯದ ಡೀನ್ರಾದ ಪ್ರೊ. ಸಿ. ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಬೆಂಗಳೂರು ನಗರದಲ್ಲಿನ ಮಕ್ಕಳ ಅನಾಥಾಶ್ರಮಗಳನ್ನು ಕುರಿತು ಒಂದು ಸಾಮಾಜಶಾಸ್ತ್ರೀಯ ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
ಇದೇ ವೇಳೆಯಲ್ಲಿ ಎಸ್. ಅಮರೇಶ್ ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಹಾಗೂ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋರಮಂಗಲ ನಿವಾಸಿಗಳು ಸೇರಿದಂತೆ ಸುತ್ತಮುತ್ತಲಿನವರು ಶುಭಕೋರಿ, ಅಭಿನಂದನೆ ಸಲ್ಲಿಸಿದ್ದಾರೆ.
ವಿಶೇಷತೆವೆಂದರೆ ಎಸ್. ಅಮರೇಶ್ ಅವರು ಇದೇ ವಿವಿಯ 48ನೇ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಎ. ತತ್ವಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು, ಚಿನ್ನದ ಪದಕದೊಂದಿಗೆ ಭಾಜನರಾಗಿ ಸ್ನಾತಕೋತ್ತರ ಪದವಿಯಲ್ಲಿ ಸಾಧನೆ ಮಾಡಿದ್ದಾರೆ.