ತುಮಕೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ವತಿಯಿಂದ ವಿಪ್ರೋ, ಅಸೆಂಚರ್, ಟೀಮ್ ವೇರ್ ಸಲ್ಯೂಷನ್ಸ್, ಪಾಲಿಸಿ ಬಜಾರ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಮೂಲಕ ಪ್ಲೇಸ್ಮೆಂಟ್ ಗೆ ಆಯ್ಕೆಯಾದ MBA, MCA ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾಶ್ರೀ.S, ಪ್ರಶಾಂತ್. T.U, ಸಹನ N, ಅಜಿತ್ M, ಲಕ್ಷ್ಮೀರಾಯ್, ಗೀತಾಂಜಲಿ T.N. ಇತರೇ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವತಿಯಿಂದ ಪ್ಲೇಸ್ಮೆಂಟ್ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.


ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಮ್ಮ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ N.B. ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ “ವಿದ್ಯಾರ್ಥಿಗಳು ಉದ್ಯೋಗವಕಾಶಗಳನ್ನು ಕುರಿತಂತೆ ಬಹು ರಾಷ್ಟ್ರೀಯ ಸಂಸ್ಥೆಗಳಿಂದ ತುಮಕೂರಿನ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ದೊರೆಯುವಂತೆ ಮಾಡುವಲ್ಲಿ ಪ್ರಗತಿಪರ ಯೋಜನೆಗಳನ್ನು ಅಳವಡಿಸಿಕೊಂಡಿರುವುದರ ಬಗ್ಗೆ, ಈ ನೆಲೆಯಲ್ಲಿ ತಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿ ಸದುಪಯೋಗವಾಗುವಂತೆ ಮಾಡುವಲ್ಲಿ ಯಶಸ್ವಿ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಪ್ರಸ್ತುತ ಭಾರತದಲ್ಲಿನ ಉದ್ಯೋಗವಕಾಶಗಳ ಸ್ಥಿತಿಗತಿಗಳನ್ನು ಕುರಿತು ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆ ಹಾಗೂ ಸಮಕಾಲಿನ ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು. ಅದಕ್ಕಾಗಿ ಶಿಕ್ಷಣವು ನಮಗೆ ಸಾಮಾಜಿಕ ಜವಾಬ್ದಾರಿ ಮತ್ತು ನಿಸ್ವಾರ್ಥ ಸೇವೆಯ ಮನೋಭಾವನೆ ಬೆಳೆಸುವಂತಾಗಬೇಕು. ಜೊತೆಗೆ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ, ನಾವಿನ್ಯತೆ, ಸೃಜನಶೀಲತೆಯ ಮಹತ್ವವನ್ನು ತಿಳಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಯಶಸ್ಸನ್ನು ಸಾಧಿಸಬೇಕಾದಲ್ಲಿ ದೊರೆತಂತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಮುತುವರ್ಜಿ ವಹಿಸಿ ಸಕ್ರಿಯತೆಯಿಂದ ಪಾಲ್ಗೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಔದ್ಯೋಗಿಕ ಮಹತ್ವಾಕಾಂಕ್ಷೆ ಕುರಿತು ನಿಜವಾದ ವ್ಯವಹಾರ ಮತ್ತು ಉದ್ಯಮಶೀಲತೆಯ ನೈಜ ಸಮಸ್ಯೆಗಳನ್ನು ಕುರಿತು ಹೇಳಿದರು.
ದೇಶ – ವಿದೇಶಗಳ ನಡುವಿನ ಕೌಶಲ್ಯತೆಯ ವ್ಯತ್ಯಾಸವನ್ನು ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ನಮ್ಮಲ್ಲಿ ಆಗಬೇಕಾಗಿರುವಂತಹ ಬದಲಾವಣೆಗಳು ಅವುಗಳಿಗೆ ಬೇಕಾಗಿರುವಂತ ಅವಶ್ಯಕ ಶಿಕ್ಷಣವನ್ನು ನೀಡುವ ಪ್ರಯತ್ನ ಹಾಗೂ ಪ್ರಗತಿಯನ್ನು ಕುರಿತು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈಸಿರಿ ಕಾಲೇಜಿನ ಪ್ರಾಂಶುಪಾಲರಾದ ಹುಮೇರ ಪರ್ವಿನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು ಮತ್ತು ನಮ್ಮ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅಚಲ್. S ಅವರು ಈಗ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇವರು ಅಸೆಂಚರ್ ಕಂಪನಿಯ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ದೊರೆಯುವಲ್ಲಿ ಸಹಕಾರ ನೀಡಿದ್ದಾರೆ.