22 ಹಾಗೂ 23 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ

 

ಗುಬ್ಬಿ : ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಾಗೂರು ಗೇಟ್ ಸಮೀಪದಲ್ಲಿರುವ ಬಾಲಾಜಿ ಬಡಾವಣೆಯಲ್ಲಿ ಜೂನ್ 22 ಹಾಗೂ 23 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾಕ್ಟರ್ ವೀರ ಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಲಿದೆ ಎಂದು ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಎರಡು ದಿನದ ಕಾರ್ಯಕ್ರಮದಲ್ಲಿ ಜೂನ್ 22ರ ಸಂಜೆ 4ಕ್ಕೆ ರಂಭಾಪುರಿ ಶ್ರೀಗಳ ಶುಭ ಆಗಮನ ಮತ್ತು ಸಾರುಟು ಉತ್ಸವ ನೆರವೇರಲಿದ್ದು 23ರಂದು ಬೆಳಗ್ಗೆ ಷಷ್ಟಿ ಪೂರ್ತಿ, ಬೆಳಗ್ಗೆ 9ಕ್ಕೆ ಇಷ್ಟಲಿಂಗ ಪೂಜಾ ಕಾರ್ಯಕ್ರಮ, ಧರ್ಮ ಜಾಗೃತಿ ಸಮಾರಂಭ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ನೊಣವಿನಕೆರೆ ಮಠದ ಶ್ರೀ ಕರಿ ಋಷಭ ಶಿವಯೋಗೀಶ್ವರ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ರಾಜ್ಯದ ನಲವತ್ತಕ್ಕೂ ಹೆಚ್ಚು ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸದ್ಭಕ್ತರು ಆಗಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

ವರ್ತಕ ಸಚಿನ್ ಮಾತನಾಡಿ ಒಂದೇ ವೇದಿಕೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಶ್ರೀಗಳ ಕಾರ್ಯಕ್ರಮ ಆಯೋಜನೆಯನ್ನ ಮಾಡಲಾಗಿದ್ದು ಜಿಲ್ಲೆಯ ಹಲವು ಮುಖಂಡರು, ಪೂಜ್ಯರ ಸದ್ಭಕ್ತರು, ಎಲ್ಲಾ ಸಮುದಾಯದ ಸಾರ್ವಜನಿಕ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಾಗಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!