ಸರ್ಕಾರ ಜಮೀನು ಪಡೆಯಲು ಮುಂದಾದರೆ ಹೆಚ್ ಎ ಎಲ್ ಘಟಕದ ಮುಂದೆ ಉಗ್ರ ಹೋರಾಟ ರೈತರಿಂದ ಎಚ್ಚರಿಕೆ

ಗುಬ್ಬಿ : ಎಚ್ಎಎಲ್ ಘಟಕಕ್ಕೆ ಹೆಚ್ಚುವರಿಯಾಗಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಎಚ್ಎಎಲ್ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಪಟ್ಟಣದ ತಾಲೂಕು ಕಛೇರಿ ಮುಂಭಾಗ
ನಿಟ್ಟೂರು ಹೋಬಳಿಯ ಹೆಚ್.ಎ.ಎಲ್. ಘಟಕಕ್ಕೆ ಹೊಂದಿಕೊಂಡಿರುವ ಸಮೀಪದ ಗ್ರಾಮಸ್ಥರು ತಾಲೂಕು ಕಛೇರಿ ಮುಂಭಾಗ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧ ದಿಕ್ಕಾರ ಕೂಗುವ ಮೂಲಕ ಗ್ರಾಮಸ್ಥರು ಪ್ರತಿಭಟನೆ ನೆಡೆಸಿದರು.

ಪ್ರತಿಭಟನಾಕಾರರಾದ ಮುಖಂಡ ಶಶಿಧರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ
ತಾಲೂಕಿನ ನಿಟ್ಟೂರು ಹೋಬಳಿಯ ಹೆಚ್.ಎ.ಎಲ್ ಘಟಕಕ್ಕೆ ಜಮೀನು ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಕುಂದರನಹಳ್ಳಿ ಗೇಟ್. ಸಾಗರನಹಳ್ಳಿ. ಯಲ್ಲಾಪುರ. ಸೋಪನಹಳ್ಳಿ ಗ್ರಾಮದ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ನಮ್ಮ ರೈತರ ಜಮೀನುಗಳನ್ನು ಸರ್ಕಾರ ಪಡೆದುಕೊಳ್ಳಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ನಿಟ್ಟೂರು ಸಮೀಪ ನಿರ್ಮಾಣವಾಗಿರುವ ಹೆಚ್ ಎ ಎಲ್ ಘಟಕಕ್ಕೆ ಸ್ಥಳೀಯರ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಪುನಃ ಮತ್ತೆ ಜಮೀನು ಪಡೆಯಲು ಮುಂದಾಗಿರುವುದು ರೈತರಿಗೆ ಮರಣ ಶಾಸನವಾಗಿದೆ. ಅರಣ್ಯ ಇಲಾಖೆಯ ಜಮೀನು ಸಾಕಷ್ಟು ಇದ್ದರು ಸಹ ರೈತರ ಸಾಗುವಳಿ ಜಮೀನು ಮತ್ತೆ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಪಡೆದು ಖಾಸಗೀಕರಣ ಮಾಡಲು ಹೊರಟಿದೆ.ಕೂಡಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡಬೇಕು. ನಾವು ಯಾವುದೇ ಕಾರಣಕ್ಕೂ ಒಂದು ಇಂಚು ಜಮೀನು ಸ್ವಾಧೀನ ಪಡೆಯಲು ಬಿಡುವುದಿಲ್ಲ. ನಮ್ಮ ಪ್ರಾಣಹೋದರು ಸರಿ ಜಮೀನು ಬಿಡುವ ಪ್ರಶ್ನೇಯೆ ಇಲ್ಲ ಎಂದು ಸರ್ಕಾರ ದ ವಿರುದ್ದ ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಜಮೀನು ಪಡೆಯಲು ಮುಂದಾದರೆ ಹೆಚ್ ಎ ಎಲ್ ಘಟಕದ ಮುಂದೆ ಸಾವಿರಾರು ರೈತರು ಹಾಗೂ ಜಮೀನು ಕಳೆದುಕೊಳ್ಳುವ ಮಾಲೀಕರು ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಂತರ ಗುಬ್ಬಿ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿದರು. ಗ್ರಾಮಸ್ಥರಾದ ಉಮೇಶ್. ರಾಮಣ್ಣ. ಸಿದ್ದಲಿಂಗಯ್ಯ. ಸಿದ್ದೇಶ್. ಸೀನಪ್ಪ. ನಾಗರಾಜ್. ಕೇಶವ್. ಬಸವರಾಜು. ದಲಿತ ಮುಖಂಡ ಚೇಳೂರು ಶಿವನಂಜಪ್ಪ ಇತರೆ ಮುಖಂಡರು ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!