ಗುಬ್ಬಿ : ಪ್ರತಿಯೊಬ್ಬ ಮನುಷ್ಯನು ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಟ್ಟಾಗ ಮಾತ್ರ ಅವನ ಬದುಕು ಸಾರ್ಥಕವಾಗುತ್ತದೆ ಎಂದು ಬೆಳ್ಳಾವಿ ಮಠದ ಕಾರದ ವೀರ ಬಸವೇಶ್ವರ ಸ್ವಾಮೀಜಿ ಹೇಳಿದರು.
ಗುಬ್ಬಿ ಪಟ್ಟಣದಲ್ಲಿ ನಡೆದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರು ಮುಂಚಿನಿಂದಲೂ ಸಾಮಾಜಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಮತ್ತು ಹಲವು ರೀತಿಯ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಮಾಡಿಕೊಂಡು ಬಂದಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೇಲೆಯೂ ಗುಬ್ಬಿ ತಾಲೂಕಿನಲ್ಲಿ ನೂರಾರು ಕಾರ್ಯಕ್ರಮಗಳನ್ನ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವುದು ನಿಜವಾಗಿಯೂ ಖುಷಿ ನೀಡಿದೆ.
ಲಯನ್ಸ್ ಕ್ಲಬ್ ಬಹಳ ವರ್ಷಗಳಿಂದಲೂ ಸಹ ಸಾಮಾಜಿಕ ಸೇವೆಯನ್ನು ಮಾಡುತ್ತ ಸಾರ್ವಜನಿಕರಿಗೆ ಹಿರಿಯರಿಗೆ ನಾಗರೀಕರಿಗೆ ಸಹಕಾರವನ್ನು ನೀಡುತ್ತಾ ಬಂದಿದೆ ಮುಂದೆಯೂ ಸಹ ತಾವೆಲ್ಲರೂ ಒಟ್ಟುಗೂಡಿ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮಾಡಿ ಎಂದು ಹೇಳಿದರು.
ನೂತನ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಇಂತಹ ಸಮಾಜಸೇವೆಯನ್ನು ಮಾಡಲು ನನಗೆ ಲಯನ್ಸ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ, ನನ್ನಿಂದ ಆಗುವಂತಹ ಸಹಕಾರವನ್ನು ಸಹಾಯ ವನ್ನುಇನ್ನಿತರರಿಗೆ ಮಾಡುವುದು ನನ್ನ ಉದ್ದೇಶವಾಗಿದ್ದು, ಎರಡನೇ ಬಾರಿಗೆ ನನಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗಾಗಲೇ ಮಾಡಿರುವಂತಹ ಹಲವು ಕೆಲಸಗಳನ್ನು ಮುಂದುವರಿಸಿಕೊಂಡು ಮುಂದಿನ ದಿನದಲ್ಲೂ ಸಮಾಜಕ್ಕೆ ಉತ್ತಮವಾದಂತಹ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಲಯನ್ಸ್ ಸಂಸ್ಥೆಯ ಎರಡನೇ ಉಪ ಜಿಲ್ಲಾ ರಾಜ್ಯಪಾಲ ಟಿ ಎಸ್ ರಾಜನ್,
ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಡಾ ನಟರಾಜು,ಡಾ ಮಂಜುನಾಥ್ ಗೌಡ,ಗಾಯತ್ರಿ ಗಿರೀಶ್,ಎಸ್ ಎಲ್ ವೆಂಕಟೇಶ್, ವಿವೇಕಾನಂದ ಸ್ವಾಮಿ, ಅಶೋಕ್ ಕುಮಾರ್, ಎಲ್ ವಿ ಸಾವಂತ್, ಬಸವರಾಜು,ರಮೇಶ್ ಬಾಬು, ಸಿದ್ದಪ್ಪ ಗುಜ್ಜರಿ,ಜಯದೇವ ಕುಮಾರ್, ಗಿರೀಶ್ ಹೊಸಹಳ್ಳಿ, ವಿಶ್ವರಾಧ್ಯ, ಹುಂಡೆ ರಾಮಯ್ಯ, ಕೀರ್ತಿರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.