
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಹುನ್ನಾರ
ನಾಲ್ವರ ವಿರುದ್ದ ಎಫ್.ಐ.ಆರ್; ಸೂಕ್ತ ತನಿಖೆಗೆ ಒತ್ತಾಯ
ತುಮಕೂರು:ಗುಬ್ಬಿ ಪಟ್ಟಣದ ಸರ್ವೆ ನಂಬರ್ 68/2ಎ ನಲ್ಲಿ ರುವ ಸುಮಾರು 1.02 ಎಕರೆ ಜಾಗವನ್ನು ಕೆಲವರು ಜಮೀನ ಮೂಲ ಮಾಲೀಕರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ,ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲು ಹೊರಟಿದ್ದು,ಇದರ ವಿರುದ್ದ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳ ವಿರುದ್ದ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಮಂಜುನಾಥ್.ಜಿ.ಎಸ್ ಒತ್ತಾಯಿಸಿದ್ದಾರೆ.

ಗುಬ್ಬಿ ಪಟ್ಟಣದ ದೊಡ್ಡ ತಿಮ್ಮಯ್ಯ ಎಂಬುವವರಿಗೆ ಗುಬ್ಬಿ ಗ್ರಾಮದ ಸರ್ವೆ ನಂಬರ್ 68/2ಎ ನಲ್ಲಿ ಸುಮಾರು 3.06 ಎಕೆರೆ ಭೂಮಿಯಿದ್ದು,ಸದರಿಯ ಭೂಮಿಯನ್ನು ದೊಡ್ಡ ತಿಮ್ಮಯ್ಯ ಅವರ ಮಕ್ಕಳಾದ ಹನುಮಂತರಾಯಪ್ಪ, ನಂಜುಂಡಯ್ಯ ಮತ್ತು ನರಸಿಂಹಮೂರ್ತಿ ಎಂಬುವವರು ತಲಾ 1.02 ಎಕರೆಯಂತೆ ಹಂಚಿಕೆಯಾಗಿರುತ್ತದೆ.ಹನುಮಂತರಾಯಪ್ಪ ಅವರು 2011 ರಲ್ಲಿ ಮೃತರಾಗಿದ್ದ, ಅವರ ನಂತರ ಅವರ ಹೆಂಡತಿ ಕಾಂತಮ್ಮ ಸಹ ಮೃತರಾಗಿದ್ದು, 2021 ರಲ್ಲಿ ಅವರ ಒಬ್ಬಳೆ ಮಗಳು ಪಲ್ಲವಿ ಸಹ ಕೋವಿಡ್‍ನಿಂದ ಮೃತಪಟ್ಟಿದ್ದಾರೆ.ಹಾಗಾಗಿ ಸದರಿ ಭೂಮಿಯನ್ನು ಹನುಮಂತರಾಯಪ್ಪ ಅವರ ಸಹೋದರ ನರಸಿಂಹಮೂರ್ತಿ ಅವರೇ ಉಳುಮೆ ಮಾಡಿಕೊಂಡು ಬಂದಿರುತ್ತಾರೆ.ಆದರೆ 2025ರಲ್ಲಿ ಮೃತ ಹನುಮಂತರಾಯಪ್ಪ ಅವರ ಎರಡನೇ ಹೆಂಡತಿ ಎಂದು ಹೇಳಿಕೊಂಡು ಜಯಮ್ಮ ಎಂಬುವವರು ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಜಯಮ್ಮ ಅವರಿಗೆ10-12-2025ರಲ್ಲಿ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ.ಪೌತಿ ಖಾತೆಗೆ ಅರ್ಜಿ ಸಲ್ಲಿಸುವ ವೇಳೆ ಹನುಮಂತರಾಯಪ್ಪ ಅವರ ಮಗಳು ಪಲ್ಲವಿ ಅವರ ಡೆತ್ ಸರ್ಟಿಪಿಕೇಟ್ ಸಹ ನಕಲಿ ಮಾಡಿಸಿ, ನಕಲಿ ವಂಶವೃಕ್ಷ ಸೃಷ್ಟಿಸಲಾಗಿದೆ ಎಂದು ಮಂಜುನಾಥ್ ಆರೋಪಿಸಿದರು.

ಗುಬ್ಬಿ ಪಟ್ಟಣದಲ್ಲಿ ಲಕ್ಷಾಂತರ ರೂ ಬೆಲೆಬಾಳುವ ಭೂಮಿಯನ್ನು ಲಪಟಾಯಿಸುವ ಉದ್ದೇಶದಿಂದ ಹನುಮಂತರಾಯಪ್ಪ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸಂಬಂಧವೇ ಇಲ್ಲದೆ ಜಯಮ್ಮ ಎಂಬ ಮಹಿಳೆಯ ಹೆಸರಿನಲ್ಲಿ ತುಮಕೂರು ನಗರದಲ್ಲಿ ವಂಶವೃಕ್ಷ ಸೃಜಿಸಲಾಗಿದೆ.ಆದರೆ ಜಯಮ್ಮ ಅವರ ಆಧಾರ್ ಕಾರ್ಡು ಪರಿಶೀಲಿಸಿದಾಗ, ಜಯಮ್ಮ ಅವರ ಗಂಡನ ಹೆಸರು ವೀರಭದ್ರಯ್ಯ ಎಂದಿದೆ.ಅಲ್ಲದೆ ಹನುಮಂತರಾಯಪ್ಪ ಅವರಿಗಿದ್ದ ಏಕೈಕ ಮಗಳು ಪಲ್ಲವಿ ಕೋವಿಡ್‍ನಿಂದ 02-06-2021ರಂದು ಸಾವನ್ನಪ್ಪಿದ್ದರೂ,28-12-2020ರಲ್ಲಿ ಸಾವನ್ನಪ್ಪಿದ್ದಾರೆ ಎಂದು ಡೆತ್ ಸರ್ಟಿಪಿಕೇಟ್ ಸೃಜಿಸಲಾಗಿದೆ ಎಂದು ಆರೋಪಿಸಿದರು.
ಬೆಲೆಬಾಳುವ ಭೂಮಿಯನ್ನು ಲಪಟಾಯಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ,ಪೌತಿ ಖಾತೆ ಮಾಡಿಸಿ, ಅವರಿಂದ ಜಮೀನಿನ ಕ್ರಯದ ಕಾರಾರು ಮಾಡಿಕೊಂಡಿರುವ ಜಯಮ್ಮ, ಎಂ.ಎಸ್.ದೇವರಾಜು,ಸಾಕ್ಷಿದಾರರಾದ ಅಬ್ದುಲ್ ಮತ್ತು ಕಾರ್ತಿಕ್ ಅವರುಗಳ ವಿರುದ್ದ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ,ಎಫ್.ಐ.ಆರ್. ಆಗಿದೆ. ಸೂಕ್ತ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್