ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗುಬ್ಬಿ ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ

 

ತುಮಕೂರು: ಅತಿ ಹೆಚ್ಚು ಅವಧಿಯಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ನರೇಂದ್ರ ಮೋದಿಯವರನ್ನು ಅಭಿನಂದಿಸಿ, ಅವರಿಗೆ ಆಯುಷು, ಆರೋಗ್ಯ, ಮತ್ತಷ್ಟು ಸೇವೆ ಮಾಡುವ ಶಕ್ತಿ ದೊರೆಯಲೆಂದು ಪ್ರಾರ್ಥಿಸಿ ತಾಲೂಕು ಬಿಜೆಪಿಯಿಂದ ಗುಬ್ಬಿ ನಗರದ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ನಂತರ S,D ದಿಲೀಪ್ ಕುಮಾರ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷ ಕಾಲ ಆಡಳಿತ ನಡೆಸಿ ಅತಿ ಹೆಚ್ಚು ಅವಧಿಯ ಆಡಳಿತದ ದಾಖಲೆ ಮಾಡಿದ್ದಾರೆ. ದೂರದೃಷ್ಟಿ ಚಿಂತನೆಯ ಮೋದಿಯವರು ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲಾ ವರ್ಗದವರಿಗೂ ನೆರವಾಗಿ ದೇಶದ ಅಭಿವೃದ್ಧಿಗೆ ಕಾರಣರಾಗಿದ್ದರೆ. ಮೋದಿಯವರ ಆಡಳಿತಾವಧಿ ಭಾರತದ ಪಾಲಿಗೆ ಸುವರ್ಣಯುಗ ಎಂದು ಹೇಳಿದರು.
ಮೋದಿಯವರ ಆಡಳಿತದ ಪರಿಣಾಮದಿಂದ ದೇಶದ ಆರ್ಥಿಕ ವ್ಯವಸ್ಥೆ ಜಗತ್ತಿನಲ್ಲಿ ಮೂರನೆ ಸ್ಥಾನಕ್ಕೆ ಬರುತ್ತಿದೆ. ಆರ್ಥಿಕ, ಕೈಗಾರಿಕಾ ಬೆಳವಣಿಗೆಯಲ್ಲಿ ಮೋದಿಯವರ ಯೋಜನೆಗಳು ಸಫಲವಾಗಿವೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಉತ್ಪಾದನೆ, ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಬಿಕ್ಕಟ್ಟು ಎದುರಾಗಿದ್ದರೂ ಭಾರತದಲ್ಲಿ ಅಂತಹ ಯಾವುದೇ ಆತಂಕ ಎದುರಾಗದಂತೆ ಮೋದಿ ಸರ್ಕಾರ ರಕ್ಷಣೆ ಮಾಡಿ ದೇಶದ ಸುಭದ್ರತೆ ಕಾಪಾಡಿದೆ. ಹಿಂದೆ ಶತ್ರು ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಿ ಭಾರತೀಯರನ್ನು ಕೊಂದಾಗ ಮೇಣದ ಬತ್ತಿ ಹಚ್ಚಿ ಶೋಕ ವ್ಯಕ್ತಪಡಿಸಲಾಗುತ್ತಿತ್ತು. ಆದರೆ ಮೋದಿ ಸರ್ಕಾರ ಶತ್ರುಗಳ ಮೇಲೆ ಬಾಂಬ್ ಹಾಕಿ ಪ್ರತಿಕಾರ ತೀರಿಸಿಕೊಂಡು ದೇಶ ರಕ್ಷಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು. ಪಿ.ಬಿ. ಚಂದ್ರಶೇಕರ್ ಬಾಬು ಮಾತನಾಡಿ, ಜಗತ್ತೇ ಭಾರತದತ್ತ ತಿರುಗಿ ನೋಡುವಂತಹ ಆಡಳಿತ ನೀಡಿದ ವಿಶ್ವನಾಯಕ ನರೇಂದ್ರ ಮೋದಿಯವರು ಪ್ರಧಾನಿಯಾಗಿ 4399 ದಿನಗಳ ಸುದೀರ್ಘ ಕಾಲ ಆಡಳಿತ ನಡೆಸಿ ದಾಖಲೆ ಮಾಡಿದ್ದಾರೆ. ಬಡವರು, ದೀನದಲಿತರು, ಮಹಿಳೆಯರು, ರೈತರ ಪರವಾದ ಅನೇಕ ಯೋಜನೆಗಳನ್ನು ತಂದು ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಬಲಿಷ್ಠ, ಸಂಪತ್ಭರಿತ ರಾಷ್ಟ್ರ ನಿರ್ಮಾಣ ಮಾಡಿರುವ ಪ್ರಧಾನಿ ಮೋದಿವರಿಗೆ ಆಯುಷು, ಆರೋಗ್ಯ ಕೊಡಲಿ, ಅವರು ಮತ್ತಷ್ಟು ಸೇವೆ ಮಾಡುವ ಶಕ್ತಿ ನೀಡಲಿ ಎಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಲರಾಮಣ್ಣ. ಭೈರಪ್ಪ,N c ಪ್ರಕಾಶ್. ಪಂಚಾಕ್ಷರಿ,ನಂಜೇಗೌಡ್ರು,ಸಿದ್ದರಾಮಣ್ಣ,ಅಣ್ಣಪ್ಪ ಸ್ವಾಮಿ.ವಿದ್ಯಾಸಾಗರ್. ಶಿವಕುಮಾರ್. ಯತೀಶ್ . ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!