- ಗುಬ್ಬಿ : ಭಾರತೀಯ ಸನಾತನ ಧರ್ಮ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶ್ರೀಮಠವು ನಿರಂತರವಾಗಿ ದಾರ್ಮಿಕ ಕೆಲಸ ಮಾಡುತ್ತಿದೆ ಎಂದು ಡಾ, ನಾಗರಾಜ ಸ್ವಾಮೀಜಿ ತಿಳಿಸಿದರು.
ಗುಬ್ಬಿ ಹಾಗೂ ತುಮಕೂರು ಗಡಿಭಾಗದ ಸಿದ್ದಪ್ಪನ ಪಾಳ್ಯ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಸಮೇತ ಉಮಾಮಹೇಶ್ವರಿ ಸನ್ನಿಧಾನ ಹಾಗೂ ಶ್ರೀ ಶಿವ ಶನೇಶ್ವರ ಮಠದಲ್ಲಿ ಶ್ರೀ ಶಿವ ಶನೇಶ್ವರ ಜಯಂತಿ ಮತ್ತು ಮಠದ ಧರ್ಮಾಧಿಕಾರಿಗಳಾದ ಡಾ,ನಾಗರಾಜ ಗುರೂಜಿ ರವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಶ್ರೀಗಳಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ನಾಗರಾಜು ಸ್ವಾಮೀಜಿ ರಕ್ತದಾನ ನೇತ್ರದಾನ ಹಾಗೂ ಅನ್ನದಾನ ಬಹಳ ಪ್ರಮುಖವಾದ ಅಂಶಗಳಾಗಿದ್ದು ಕಳೆದ 15 ವರ್ಷಗಳಿಂದ ದೇವರ ಪ್ರೇರಣೆಯಿಂದ ಶ್ರೀಮಠವು ನಡೆಯುತ್ತಿದೆ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸಿಕೊಂಡಿದ್ದಾರೆ. ಇಂತಹ ಪುಣ್ಯಕ್ಷೇತ್ರದಲ್ಲಿ ಸಾಕಷ್ಟು ಪವಾಡಗಳು ಸಹ ನಡೆದಿದ್ದು, ಮುಂದಿನ ದಿನದಲ್ಲಿ ನಿರಂತರ ದಾಸೋಹ ಸೇರಿದಂತೆ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಎಲ್ಲ ರೀತಿಯ ಯೋಜನೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಠದ ಭಕ್ತರು ಮಾತನಾಡಿ ನಾವು ಬಳ್ಳಾರಿ ಯಿಂದ ಆಗಮಿಸಿದ್ದು ಅಪಘಾತ ವಾದಂತಹ ಸಂದರ್ಭದಲ್ಲಿ ಇಲ್ಲಿಗೆ ಬಂದು ನಡೆದುಕೊಂಡಾಗ ನಮ್ಮೆಲ್ಲ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಕ್ತದಾನ ಮಾಡಿದಂತ ಭಕ್ತದಿಗಳಿಗೆ ಶ್ರೀ ಮಠದಿಂದ ಡಾ ನಾಗರಾಜು ಸ್ವಾಮಿಗಳು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ರೇಣುಕ ಪ್ರಸಾದ್, ಪರಮೇಶ್ವರಪ್ಪ ಚನ್ನಬಸವಯ್ಯ, ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು.