ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಣೆ

ತುಮಕೂರು : ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸಂಘ, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ತುಮಕೂರು ಗ್ರಾಮಾಂತರದ ನರಸಾಪುರ ಗ್ರಾಮದ ಊರಿನ ಮುಖಂಡರುಗಳು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು ಸೇರಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನವನ್ನು ಬಾಬಾ ಸಾಹೇಬರ ಭಾವಚಿತ್ರದ ಮುಂಭಾಗ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಸಮಾನತೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಅಂಬೇಡ್ಕರ್ ರವರ ಬಗ್ಗೆ ಮಾತನಾಡುತ್ತಾ ಇಂದು ಅಂಬೇಡ್ಕರ್ ಅವರನ್ನು ಸ್ಮರಿಸುವುದಲ್ಲ ಮನಸ್ಸಲ್ಲಿ ಅನುಕರಣೆ ಮಾಡುತ್ತಾ ಅವರನ್ನು ಮರಳಿ ಪಡೆಯಬೇಕಿದೆ. ವಿಶ್ವದಲ್ಲಿ ಮೊದಲ ಬಾರಿಗೆ 32 ಪದವಿಯನ್ನು ಪಡೆದಂತಹ ವ್ಯಕ್ತಿ, ಆರ್.ಬಿ.ಐ. ಬ್ಯಾಂಕ್ ರುವಾರಿ, ಮಹಿಳಾ ವಿಮೋಚರು, ಈಗಿನ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಬುನಾಧಿ ಹಾಕಿದ ಮಹಾಜ್ಞಾನಿ, 50000+ ಪುಸ್ತಕಗಳನ್ನು ಅಧ್ಯಯನ ಮಾಡಿರುವ ಏಕೈಕ ವ್ಯಕ್ತಿ ಬಿ.ಆರ್. ಅಂಬೇಡ್ಕರ್ ಅವರನ್ನು ಕೇವಲ ದಲಿತ ಐಕಾನ್ ಆಗಿ ಸ್ಮರಿಸಿಕೊಳ್ಳಬಾರದು, ಬದಲಾಗಿ ಭಾರತದ ಸಾಂವಿಧಾನಿಕ ನೈತಿಕತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರಮುಖ ಶಿಲ್ಪಿಯಾಗಿ ಸ್ಮರಿಸಬೇಕು ಎಂದರು.
ಮುಂದುವರೆದು ಮಾತನಾಡುತ್ತಾ ಅಂದು ಅವರು ಓದುತ್ತಿದ್ದ ಪುಸ್ತಕ ಕಿತ್ತುಕೊಂಡ ವರ್ಗವೊಂದು ಈ ದಿನ ಅಂಬೇಡ್ಕರ್ ಅವರು ಬರೆದ ಪುಸ್ತಕವನ್ನು ಅಪ್ಪಿಕೊಂಡು ಶಕ್ತಿಶಾಲಿಯಾಗಿದೆ ಎಂದು ಹೇಳುತ್ತಿದೆ, ನಮ್ಮ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಆಡಳಿತಕ್ಕಾಗಿ ಅಂಬೇಡ್ಕರ್ ಅವರ ಪ್ರಸ್ತುತತೆ ಅತ್ಯಂತ ಅವಶ್ಯಕತೆ ಇದೆ ಎಂದರು. ಈಗಿನ ಸಂವಿಧಾನದ ಸಮಾನತೆಯು ಆಡಳಿತವನ್ನು ಮಾರ್ಗದರ್ಶಿಸಬೇಕು, ಸರ್ವರಿಗೂ ಸಮಪಾಲು ಸಮಾನವಾಗಿ ಹಂಚಿಕೆಯಾಗಬೇಕೇ ಹೊರತು ಘೋಷಣೆಯಾಗಿ ಉಳಿಯಬಾರದು ಎಂದು ಅಂಬೇಡ್ಕರ್ ನಂಬಿದ್ದರು ಅದನ್ನೇ ಪ್ರತಿಪಾದಿಸುತ್ತಿದ್ದರು, ಆದರೆ ಇಂದಿನ ಸಮಾಜದಲ್ಲಿ ಅದು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಕಾರ್ಯದರ್ಶಿ ಕೆ.ಎನ್.ಸಿದ್ಧಲಿಂಗಯ್ಯ ಮಾತನಾಡುತ್ತಾ ಸಾರ್ವಜನಿಕ ನೀತಿಯನ್ನು ದಾನದ ಸಾಧನವಾಗಿಯಲ್ಲ, ಘನತೆಯ ಸಾಧನವಾಗಿ ನೋಡಬೇಕು ಅವರು ಎಲ್ಲಾ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಸಾಮಾನ್ಯ ವರ್ಗವೂ ಸೇರಿದಂತೆ 3000ಕ್ಕೂ ಜಾತಿಗಳಿಗೂ ಸಾಮಾಜಿಕ ನ್ಯಾಯವನ್ನು ಸಂವಿಧಾನದ ಮೂಲಕ ಕಲ್ಪಿಸಿದ್ದಾರೆ. ಮನುಸ್ಮೃತಿಯು ಮಹಿಳೆಯರನ್ನು ಅಡುಗೆ ಮನೆಗೆ ಮಾತ್ರ ಸೀಮಿತ ಮಾಡಿತ್ತು ಆದರೆ ಬಾಬಾ ಸಾಹೇಬ್ ರ ಸಂವಿಧಾನ ಮಹಿಳೆಯನ್ನು ಬಾನೆತ್ತರಕ್ಕೆ ಏರುವಂತೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಉಪಾಧ್ಯಕ್ಷರಾದ ಎಸ್.ಲಕ್ಷ್ಮೀನಾರಯಣ, ಗ್ರಾ.ಪಂ. ಮಾಜಿ ಸದಸ್ಯರಾದ ಗಂಗಣ್ಣ, ಮುಖಂಡರುಗಳಾದ ಹರೀಶ್ ಎನ್. ಸಿ, ನರಸಿಂಹರಾಜು ಎನ್ ಎಂ, ಅಣ್ಣಪ್ಪ ಎನ್. ಸಿ, ಮೋಹನ್ ಎನ್. ಸಿ, ರವೀಶ್ ಎನ್. ಎಂ, ಎನ್.ಬಿ. ನವೀನ್ ಕುಮಾರ್, ದಯಾನಂದ್, ಮೋಹನ್ ಎನ್. ಆರ್, ನರಸಿಂಹಮೂರ್ತಿ ಎನ್. ಎಲ್, ಮನೋಹರ್ ಎನ್. ಎಂ, ಶ್ರೀಧರ್, ಮಾರುತಿ, ಅನಿಲ್, ಲಿಖಿತಾ, ಚಂದನ್, ನವೀನ್ ಎನ್. ಹೆಚ್. ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!