ಪ್ರಮುಖ ಸುದ್ದಿಗಳು
ಜನಪದ ಸಂಸ್ಕಾರದಿಂದ ಮಾತ್ರ ಸಂಸ್ಕೃತಿ ಉಳಿಯಲಿದೆ: ಕುಲಪತಿ ಪ್ರೊ. ಬಿ.ಕೆ. ರವಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಡಾ. ಬಿ.ಕೆ. ರವಿ ಅವರು ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸ್ನಾತಕೋತ್ತರ ವಿದ್ಯಾಭ್ಯಾಸ ಕೈಗೊಳ್ಳುತ್ತಿರುವ ಹಲವಾರು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು ನಮ್ಮ ನೆಲ, ಜಲದ ಸೊಗಡನ್ನು ಸಾರುವ ಈ ರೀತಿಯ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ ಎಂದರು. ಪ್ರಸ್ತುತ ರಾಷ್ಟ್ರ ಉಳಿಯಬೇಕು ಹಾಗೂ ಭವಿಷ್ಯದ ಉತ್ತಮ ರಾಷ್ಟ್ರ ನಿರ್ಮಾಣ…
ಡಿಜಿಟಲ್ ಆರ್ಥಿಕತೆಯ ಅರಿವು ಅಗತ್ಯ: ಎನ್. ಬಿ. ಪ್ರದೀಪ್ ಕುಮಾರ್
ವೈಸಿರಿ ಕಾಲೇಜಿನಲ್ಲಿ ‘ಬಿಟ್ಕಾಯಿನ್ ಮೂಲಭೂತ ಅಂಶಗಳು’ ಕುರಿತು ವಿಶೇಷ ಉಪನ್ಯಾಸ ತುಮಕೂರು: “ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಡಿಜಿಟಲ್ ಕರೆನ್ಸಿಗಳು ಮತ್ತು ಉದಯೋನ್ಮುಖ ಹಣಕಾಸು ತಂತ್ರಜ್ಞಾನಗಳ ಪಾತ್ರ ದಿನೇ ದಿನೇ ಹೆಚ್ಚುತ್ತಿದೆ. ಇಂದಿನ ಸ್ಪರ್ಧಾತ್ಮಕ ವಾಣಿಜ್ಯ ಜಗತ್ತಿನಲ್ಲಿ ವಿದ್ಯಾರ್ಥಿಗಳು ಇಂತಹ ನವೀನ ಹಣಕಾಸು ವ್ಯವಸ್ಥೆಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯ,” ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಎನ್. ಬಿ. ಪ್ರದೀಪ್ ಕುಮಾರ್ ಅವರು ಹೇಳಿದರು. ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ಎಂಬಿಎ ವಿಭಾಗದ…
ಇಂದು ಬೆಂಗಳೂರು ವಿವಿಯ ಶಿಕ್ಷಣ ವಿಭಾಗದಲ್ಲಿ ಸುಗ್ಗಿ ಸಂಭ್ರಮ ಆಯೋಜನೆ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಶಿಕ್ಷಣ ವಿಭಾಗದಿಂದ ಆಯೋಜಿಸಿರುವ ‘ಸುಗ್ಗಿ ಸಂಭ್ರಮ’, ಸಂಸ್ಕೃತಿ, ಶ್ರಮ ಮತ್ತು ಸಡಗರ ಕಾರ್ಯಕ್ರಮವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಶಿಕ್ಷಣ ವಿಭಾಗದಲ್ಲಿ ಆಚರಿಸಲಾಗುತ್ತದೆಂದು ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಗ್ಗಿ ಸಂಭ್ರಮದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳಾದ ಇದೇ ಮಂಗಳವಾರದಂದು ಹಿರಿಯ ಪ್ರಶಿಕ್ಷಾಣಾರ್ಥಿಗಳಿಂದ ಕಿರಿಯ ಪ್ರಶಿಕ್ಷಾಣಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ, ಬುಧವಾರದಂದು ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಈ ಕಾರ್ಯಕ್ರಮವನ್ನು ಗೌರವ…
ಶಶಿಕುಮಾರ್ ವಿ. ಅವರಿಗೆ ಪಿಎಚ್.ಡಿ ಪದವಿ ಪ್ರದಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕನಕಪುರದ ಎಸ್. ಕರಿಯಪ್ಪ ರೂರಲ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ್ ವಿ. ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗರಹಳ್ಳಿ ಗ್ರಾಮದ ಗ್ರಾಮದ ರೈತಾಪಿ ಕುಟುಂಬಕ್ಕೆ ಸೇರಿದ ಲೇಟ್ ವೆಂಕಟಸ್ವಾಮಪ್ಪ ಹಾಗೂ ಶ್ರೀಮತಿ ರತ್ನಮ್ಮ ದಂಪತಿಯ ಪುತ್ರರಾದ ಶಶಿಕುಮಾರ್ ವಿ. ರವರು ಪ್ರಸ್ತುತ ಬೆಂಗಳೂರು ವಿವಿಯಲ್ಲಿ ಬಿಎ ಆನರ್ಸ್ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ…
ಸ್ವಾಮಿ ವಿವೇಕಾನಂದರ ಜಯಂತೋತ್ಸವ ಆಚರಣೆ
ವಿವೇಕಾನಂದರ ಆದರ್ಶ, ಬೋಧನೆಗಳು ಯುವ ಸಮೂಹಕ್ಕೆ ಮಾದರಿ: ವಿಧಾನ ಪರಿಷತ್ತಿನ ಸದಸ್ಯ ಕೇಶವ ಪ್ರಸಾದ್ ಅಭಿಮತ ಕರ್ನಾಟಕ ಆರ್ಟ್ಸ್ ಫೌಂಡೇಶನ್ ವತಿಯಿಂದ 163ನೇ ವಿವೇಕಾನಂದ ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಮೂವರು ಸಾಧಕರಿಗೆ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕಾರ ಗೌರವ. ಬೆಂಗಳೂರು: ನಿನ್ನೆ ಸಂಜೆ ಆಯೋಜಿಸಿದ್ದ ಕರ್ನಾಟಕ ಆರ್ಟ್ಸ್ ಫೌಂಡೇಶನ್ ವತಿಯಿಂದ 163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವು ಬೆಂಗಳೂರು ನಗರ ಕೆಂಗೇರಿ ಉಪನಗರದ ರಾಮಕೃಷ್ಣ ಶಾಲೆಯಲ್ಲಿ ಸೋಮವಾರ ಸಂಜೆ ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ…
163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮ
ಕರ್ನಾಟಕ ಆರ್ಟ್ಸ್ ಫೌಂಡೇಶನ್ ದಿಂದ 163ನೇ ವಿವೇಕಾನಂದ ಜಯಂತೋತ್ಸವ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಂಗಳೂರು: 163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ನಗರದ ಕೆಂಗೇರಿ ಉಪನಗರದಲ್ಲಿರುವ ರಾಮಕೃಷ್ಣ ಸ್ಕೂಲ್, ಕೆಹೆಚ್ ಬಿ, ನೇತಾಜಿ ಬಡಾವಣೆಯಲ್ಲಿ ಇದೇ ಸೋಮವಾರ ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಅಧ್ಯಕ್ಷರಾದ ಶ್ರೀಮತಿ ಸರೋಜರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೇಶವ…
ಮೈಸೂರು ವಿವಿಯ ಸೃಷ್ಠಿ ರಿಸರ್ಚ್ ಸೆಂಟರ್ನ ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ‘ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಸೆಂಟರ್’ನ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಸೆಂಟರ್ನ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಗೋಪಾಲ ಕೃಷ್ಣ ಡಿ. ಹಾಗೂ ವಿವಿಧ ವಿಭಾಗದ ಮಾರ್ಗದರ್ಶಕಗಳಾದ ಡಾ. ಕೃಷ್ಣ ಬಿ.ಎಸ್, ಡಾ. ಜಿ.ಎನ್.ಕೆ ಸುರುಶ್ ಬಾಬು, ಡಾ. ಮಹೇಶ್…
ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಪ್ರಶಿಕ್ಷಾಣಾರ್ಥಿಗಳು ಭೇಟಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಎಂ.ಎಡ್ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ದಿನಾಂಕ ೦೭.೦೧.೨೦೨೬ ರಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಬೆಂಗಳೂರು ನಗರ ಜಿಲ್ಲೆ ಇಲ್ಲಿಗೆ,ಕ್ಷೇತ್ರ ಅಧ್ಯಯನ ಅಡಿಯಲ್ಲಿ ಭೇಟಿ ನೀಡಿ, ವಿವಿಧ ವಿಭಾಗಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು, ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿ, ಡಯಟ್ ನ ಪ್ರಾಂಶುಪಾಲರು…
ಶಿಕ್ಷಣದಜೊತೆ ಕಲೆ,ಸಂಗೀತ, ಸಾಹಿತ್ಯವಿರಲಿ ಕಂಬದರಂಗಯ್ಯ
ಗುಬ್ಬಿ : ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ಕೊಡಿಸಿ ಅದರಲ್ಲಿ ಸಂಗೀತ, ಕಲೆ ದೈಹಿಕ ಚಟುವಟಿಕೆ ಜೊತೆಗೆ ಮಕ್ಕಳಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೊ ಅಂತಹ ಶಿಕ್ಷಣವನ್ನು ಕೊಡಿಸಿ ಎಂದು ಜ್ಹೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕ ಕಂಬದರಂಗಯ್ಯ ಹೇಳಿದರು. ಅವರು ಗುರುವಾರ ಸಂಜೆ ನಡೆದ ಹೊಸಕೆರೆ ಸನ್ ರೈಸ್ ಇಂಟರ್ ನ್ಯಾಷನಲ್ ಶಾಲೆಯ ಸನ್ ರೈಸ್ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನನ್ನ ಜೀವನದ ಓದುವ ಸಮಯದಲ್ಲಿ ಕಷ್ಟವನ್ನು ಅನುಭವಿಸಿದ್ದೇನೆ, ಅಂತಹ ಕಾಲದಲ್ಲೂ…
208 ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ
ತುಮಕೂರು : ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಜನವರಿ ೦೧ ರಂದು ಸಂಜೆ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ೨೦೮ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಅಮಾನಿಕೆರೆ ಉದ್ಯಾನವನದಲ್ಲಿರುವ ಯೋಧರ ಧ್ವಜ ಸ್ಥಂಭಕ್ಕೆ ಕ್ಯಾಂಡಲ್ ದೀಪ ಬೆಳಗಿಸಿ, ಪುಷ್ವರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ, ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಕೋರೆಗಾಂವ್ ಯುದ್ಧ. ಸಮಾನತೆ ಮತ್ತು ಸ್ವಾಭಿಮಾನದ ಅಮರ…