ಕೆ.ಎನ್.ಆರ್.ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ
ಸಿಎಂ ಬಳಿಗೆ ಹಿಂದುಳಿದ ವರ್ಗಗಳ ಮುಖಂಡರ ನಿಯೋಗ ತುಮಕೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆ.ಎನ್.ರಾಜಣ್ಣನವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು, ಅವರ ಆಸಕ್ತಿಯ ಹಾಗೂ ಪರಿಣತಿ ಹೊಂದಿರುವ ಸಹಕಾರ ಖಾತೆಯನ್ನೇ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜಗಳ ಮುಖಂಡರು ಇನ್ನೆರಡು ದಿನಗಳನ್ನು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಿದ್ದಾರೆ. ತುಮಕೂರು ಜಿಲ್ಲೆಯ ಪ್ರಭಾವಿ ನಾಯಕ, ಹಿಂದುಳಿದ ವರ್ಗಗಳ ಆಶಾಕಿರಣವಾಗಿರುವ ಕೆ.ಎನ್.ರಾಜಣ್ಣನವರು ಯಾವುದೇ ತಪ್ಪು, ಭ್ರಷ್ಟಾಚಾರ ಮಾಡದಿದ್ದರೂ ಕ್ಷುಲ್ಲಕ ಕಾರಣವೊಡ್ಡಿ ಅವರನ್ನು ಸಚಿವ ಸ್ಥಾನದಿಂದ…