ಸಾಂಕ್ರಾಮಿಕ ರೋಗ ಹರಡಲು ಸಾಕ್ಷಿಯಾಗುವುದೇ ? ಸರಕಾರಿ ಬಸ್ ನಿಲ್ದಾಣ
ತಿಪಟೂರು ತಾಲೂಕಿನ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ ಮಳೆಗಾಲ ಬಂತೆಂದರೆ, ಸುದ್ದಿ ಪತ್ರಿಕೆಗಳ ಮತ್ತು ನ್ಯೂಸ್ ಚಾನಲ್ ಗಳ ಬಾಯಿಗೆ ತುತ್ತಾಗುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ನವೀಕರಣಗೊಳಿಸಲಾಗಿರುವ ತಿಪಟೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕೆಲವೊಂದಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಅರಸೀಕೆರೆ,ಚನ್ನರಾಯಪಟ್ಟಣ, ತುರುವೇಕೆರೆ,ಹುಳಿಯಾರು ಹಾಸನ ಹೀಗೆ ಹಲವಾರು ನಗರ ಪ್ರದೇಶದ ಜನ,ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ತಿಪಟೂರು…