ತಾಂತ್ರಿಕ ದೋಷದಿಂದಾಗಿ ಜಾತಿಗಣತಿ ವಿಳಂಬ ಸಮುದಾಯಕ್ಕೆ ಅನ್ಯಾಯ: ಕಾಲಾವಕಾಶ ಹೆಚ್ಚಿಸಲು ಮುಖಂಡರಿಂದ ಜಿಲ್ಲಾಡಳಿತಕ್ಕೆ ಒತ್ತಾಯ.
ಮಧುಗಿರಿ: ಸರ್ಕಾರ ಮಾಡಿರುವ ಒಳ ಮೀಸಲಾತಿ ವರ್ಗೀಕರಣದ ಮನೆ ಮನೆ ಭೇಟಿ ಗಣತಿ ಕಾರ್ಯಕ್ರಮ ಜಿಲ್ಲಾಡಳಿತದ ವತಿಯಿಂದ ಕಾಟಾಚಾರದ ಜಾತಿ ಗಣತಿಯಾಗಿದೆ ನಿಖರವಾದ ಗಣತಿಯಾಗಿಲ್ಲವೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಆರೋಪಿಸಿದ್ದಾರೆ. ಪಟ್ಟಣದ ಪ್ರವಾಸಿಮಂದಿರದಲ್ಲಿ ದಲಿತ ಸಂಘಟನೆ ಹಾಗೂ ಆದಿಜಾಂಭವ ಮಹಾಸಭಾ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಟಾಚಾರಕ್ಕೆ ಒಳಮೀಸಲಾತಿ ಜಾತಿಗಣತಿ ನಡೆಸುತ್ತಿದ್ದು ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯವನ್ನು…