ಆಗಸ್ಟ್ 1 ರೊಳಗೆ ಆಟೋ ರಿಕ್ಷಾಗಳಿಗೆ ಸಮವಸ್ತ್ರ ಸೇರಿದಂತೆ ದಾಖಲಾತಿಗಳು ಕಡ್ಡಾಯ ಸಿ, ಪಿ, ಐ,ಸುರೇಶ್ ಖಡಕ್ ಎಚ್ಚರಿಕೆ
ತುಮಕೂರು : ಆಗಸ್ಟ್ 1 ರೊಳಗೆ ಆಟೋ ರಿಕ್ಷಾಗಳಿಗೆ ಸಂಬಂದಿಸಿದ ಚಾಲನ ಪರವಾನಗಿ, ಎಫ್ ಸಿ,ವಿಮಾ, ಪರ್ಮಿಟ್, ಸಮವಸ್ತ್ರ ಇನ್ನಿತರೆ ದಾಖಲಾತಿಗಳು ಕಡ್ಡಾಯವಾಗಿ ಆಟೋ ಚಾಲಕರು ಹೊಂದಿರಬೇಕು ಇಲ್ಲವಾದಲ್ಲಿ ದಂಡದ ಬದಲು ಕೇಸು ದಾಖಲಿಸಿ ಆಟೋವನ್ನು ಸೀಜ್ ಮಾಡಲಾಗುವುದೆಂದು ಆಟೋ ಚಾಲಕರಿಗೆ ಪಾವಗಡ ಪೊಲೀಸ್ ಠಾಣೆಯ ಸಿ.ಪಿ,ಐ. ಸುರೇಶ್ ಖಡಕ್ ಎಚ್ಚರಿಕೆ ನೀಡಿದರು. ಪಾವಗಡ ಪಟ್ಟಣದ ಎಸ್ ಎಸ್ ಕೆ ಹಳೆ ಛತ್ರದಲ್ಲಿ ತುಮಕೂರು ಜಿಲ್ಲಾ ಪೊಲೀಸ್, ಮಧುಗಿರಿ ಉಪವಿಭಾಗ, ಪಾವಗಡ ಪೊಲೀಸ್ ಠಾಣೆ ವತಿಯಿಂದ…