ಒಳಮೀಸಲಾತಿ ಹಂಚಿಕೆ: ಸದ್ಯಕ್ಕೆ ಸಮಾಧಾನಕರ ಮಾದಿಗ ಸಮುದಾಯಕ್ಕೆ ನಿರಾಳ ಸ್ಥಿತಿ: ಡಾ.ಲಕ್ಷ್ಮೀಕಾಂತ್
ತುಮಕೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಉಪಜಾತಿಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿ ಪ್ರಮಾಣ ಸಮಾಧಾನ ತಂದಿದೆ. ಇದೂವರೆಗೆ ಉಸಿರು ಕಟ್ಟಿದ ಪರಿಸ್ಥಿತಿಯಲ್ಲಿದ್ದ ಮಾದಿಗ ಸಮಾಜ ಈ ನಿರ್ಧಾರದಿಂದ ತಕ್ಕಮಟ್ಟಿಗೆ ಉಸಿರಾಡುವಷ್ಟು ನಿರಾಳವಾಗಿದೆ ಎಂದು ಒಳಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಮಾದಿಗ ಸಮುದಾಯದ ಮುಖಂಡ ನಗರದ ಡಾ.ಲಕ್ಷ್ಮೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಮಾದಿಗ ಸಮುದಾಯಕ್ಕೆ ಶಕ್ತಿ ಸಿಕ್ಕಿದಂತಾಗಿದೆ. ಪರಿಶಿಷ್ಟ ಜಾತಿಗಾಗಿ ಶಾಶ್ವತ ಆಯೋಗ ರಚನೆ ಮಾಡಬೇಕೆಂಬ ಸರ್ಕಾರದ ತೀರ್ಮಾನವೂ ಸ್ವಾಗತಾರ್ಹ. ಮುಂದೆ ಜಾತಿ ಜನಗಣತಿ ನಂತರ ಜನಸಂಖ್ಯೆ,…