ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ ಅನ್ನದಾಸೋಹ ಶ್ರೇಷ್ಠ ಸೇವೆ: ಕಾರದ ವೀರಬಸವ ಸ್ವಾಮೀಜಿ

ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಸೋಮವಾರ ಇತಿಹಾಸ ಪ್ರಸಿದ್ಧ ಪ್ರಸನ್ನ ಜಗದಾಂಬ ಸಮೇತ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು. ಅಲಂಕೃತ ರಥದಲ್ಲಿ ದೇವರುಗಳನ್ನು ಪ್ರಷ್ಠಾಪಿಸಿ, ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ರಥೋತ್ಸವ ನೆರವೇರಿತು. ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಬೆಳ್ಳಾವಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದ ಅಂಗವಾಗಿ ಬೆಳ್ಳಾವಿಯ ವಿವಿಧೆಡೆ ಕೊಪ್ಪಲುಗಳಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್ ಅವರು ಇಲ್ಲಿನ ನಿಧಿಶ್ರೀ ಫಾರಂನಲ್ಲಿ…

Read More

ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ

ತುಮಕೂರು: ಮುಂಬರುವ ಬಜೆಟ್ ಅಧಿವೇಶನದಲ್ಲಿ ನೇರ ನೇಮಕಾತಿ, ಪದೊನ್ನತ್ತಿ, ಬ್ಯಾಕ್‍ಲಾಗ್, ಕೆಐಎಡಿಬಿ, ಬಿಡಿಎ ಹಾಗೂ ಸರಕಾರಿ ಗುತ್ತಿಗೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಾದರ ಮಹಾಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಟೌನ್ ಹಾಲ್‍ನಲ್ಲಿ ಸಮಾವೇಶಗೊಂಡ ಸಾವಿರಾರು ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರುಗಳು ಬಾಬಾಸಾಹೇಬರ ಪುತ್ತಳಿಗೆ ಪುಷ್ಪರ್ಚಾನೆ ಮಾಡಿ,ಬಿ.ಜಿ.ಎಸ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಚರ್ಚ್…

Read More

ಮಾದರ ಮಹಾ ಸಭಾದ ಕಡಬ ಹೋಬಳಿ ಅಧ್ಯಕ್ಷರಾಗಿ ದಾಸರಕಲ್ಲಹಳ್ಳಿ ಲಕ್ಷ್ಮಣ್ ಆಯ್ಕೆ

ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಮಾದರ ಮಹಾಸಭಾದ ಅಧ್ಯಕ್ಷರಾಗಿ ದಾಸರಕಲ್ಲಹಳ್ಳಿ ಲಕ್ಷ್ಮಣ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಕಡಬ ಗ್ರಾಮದಲ್ಲಿ ಮಾದರ ಮಹಾಸಭಾ ಹೋಬಳಿ ಘಟಕ ರಚನೆಗೆ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಗುಬ್ಬಿ ತಾಲೂಕು ಘಟಕದ ತಾಲೂಕು ಅಧ್ಯಕ್ಷರು ಹಾಗು ಪದಾಧಿಕಾರಿಗಳ ಸಮ್ಮುಖದಲ್ಲಿ ಕಡಬ ಹೋಬಳಿಯ ಎಲ್ಲಾ ಗ್ರಾಮಗಳ ಮಾದಿಗ ಸಮುದಾಯದ ಮುಖಂಡರು ಸೇರಿ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾದರ ಮಹಾ ಸಭಾದ ತಾಲೂಕು ಅಧ್ಯಕ್ಷ ಕೊಡೆಯಾಲ ಮಹದೇವ್ ರವರು…

Read More

ಪಾಲನಹಳ್ಳಿ ಮಠದ ಶ್ರೀ ಶನೇಶ್ಚರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ಆಹ್ವಾನ

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಶ್ರೀ ಶನೇಶ್ಚರ ಸ್ವಾಮಿ ಕ್ಷೇತ್ರ ಪಾಲನಹಳ್ಳಿ ಮಠದ ಸಂಸ್ಥಾಪಕರು ಮಠ ಅಧ್ಯಕ್ಷರು ಆದ ಡಾ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳು ಇದೇ ತಿಂಗಳು ದಿನಾಂಕ 15 ರಿಂದ 16 ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯುವ ಶ್ರೀ ಶನೇಶ್ಚರ ಸ್ವಾಮಿಯವರ ಜಾತ್ರಾ ಮತ್ತು ಶಿವರಾತ್ರಿ ಮಹೋತ್ಸವಕ್ಕೆ ತುಮಕೂರು ಜಿಲ್ಲೆಯ ಸಮಸ್ತ ಸಮುದಾಯದ ಭಕ್ತ ವೃಂದಕ್ಕೆ ಆಹ್ವಾನ ನೀಡಿದರು. ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ತುಮಕೂರಿನ ಹಲವಾರು ಸಮುದಾಯದ ಮುಖಂಡರೊಂದಿಗೆ…

Read More

ಡಿಜಿಟಲ್ ಆರ್ಥಿಕತೆಯ ಅರಿವು ಅಗತ್ಯ: ಎನ್. ಬಿ. ಪ್ರದೀಪ್ ಕುಮಾರ್

ವೈಸಿರಿ ಕಾಲೇಜಿನಲ್ಲಿ ‘ಬಿಟ್‍ಕಾಯಿನ್ ಮೂಲಭೂತ ಅಂಶಗಳು’ ಕುರಿತು ವಿಶೇಷ ಉಪನ್ಯಾಸ ತುಮಕೂರು: “ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಡಿಜಿಟಲ್ ಕರೆನ್ಸಿಗಳು ಮತ್ತು ಉದಯೋನ್ಮುಖ ಹಣಕಾಸು ತಂತ್ರಜ್ಞಾನಗಳ ಪಾತ್ರ ದಿನೇ ದಿನೇ ಹೆಚ್ಚುತ್ತಿದೆ. ಇಂದಿನ ಸ್ಪರ್ಧಾತ್ಮಕ ವಾಣಿಜ್ಯ ಜಗತ್ತಿನಲ್ಲಿ ವಿದ್ಯಾರ್ಥಿಗಳು ಇಂತಹ ನವೀನ ಹಣಕಾಸು ವ್ಯವಸ್ಥೆಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯ,” ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಎನ್. ಬಿ. ಪ್ರದೀಪ್ ಕುಮಾರ್ ಅವರು ಹೇಳಿದರು. ನಗರದ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ಎಂಬಿಎ ವಿಭಾಗದ…

Read More

ಶಿಕ್ಷಣದಜೊತೆ ಕಲೆ,ಸಂಗೀತ, ಸಾಹಿತ್ಯವಿರಲಿ ಕಂಬದರಂಗಯ್ಯ

  ಗುಬ್ಬಿ : ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ಕೊಡಿಸಿ ಅದರಲ್ಲಿ ಸಂಗೀತ, ಕಲೆ ದೈಹಿಕ ಚಟುವಟಿಕೆ ಜೊತೆಗೆ ಮಕ್ಕಳಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೊ ಅಂತಹ ಶಿಕ್ಷಣವನ್ನು ಕೊಡಿಸಿ ಎಂದು ಜ್ಹೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕ ಕಂಬದರಂಗಯ್ಯ ಹೇಳಿದರು. ಅವರು ಗುರುವಾರ ಸಂಜೆ ನಡೆದ ಹೊಸಕೆರೆ ಸನ್ ರೈಸ್ ಇಂಟರ್ ನ್ಯಾಷನಲ್ ಶಾಲೆಯ ಸನ್ ರೈಸ್ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನನ್ನ ಜೀವನದ ಓದುವ ಸಮಯದಲ್ಲಿ ಕಷ್ಟವನ್ನು ಅನುಭವಿಸಿದ್ದೇನೆ, ಅಂತಹ ಕಾಲದಲ್ಲೂ…

Read More

208 ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ

ತುಮಕೂರು : ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಜನವರಿ ೦೧ ರಂದು ಸಂಜೆ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ೨೦೮ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಅಮಾನಿಕೆರೆ ಉದ್ಯಾನವನದಲ್ಲಿರುವ ಯೋಧರ ಧ್ವಜ ಸ್ಥಂಭಕ್ಕೆ ಕ್ಯಾಂಡಲ್ ದೀಪ ಬೆಳಗಿಸಿ, ಪುಷ್ವರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ, ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಕೋರೆಗಾಂವ್ ಯುದ್ಧ. ಸಮಾನತೆ ಮತ್ತು ಸ್ವಾಭಿಮಾನದ ಅಮರ…

Read More

ಶಿಕ್ಷಣ ಕೇವಲ ಹಣ ಸಂಪಾದನೆ ಮಾಡುವ ಮಾರ್ಗವಲ್ಲ ಬದಲಾಗಿ ವ್ಯಕ್ತಿಯ ಜ್ಞಾನವನ್ನು ಬಲಪಡಿಸಬೇಕಿದೆ : ಗವಿಮಠದ ಶ್ರೀಗಳು

ಚೇಳೂರು : ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆ ಮಾಡುವ ಕಾಯಕವಾಗದೇ ಮಕ್ಕಳ ಬೌಧಿಕ ಮತ್ತುವ ಮಾನಸಿಕ ಜ್ಞಾನವನ್ನು ಬಲಪಡಿಸುವ ಮಾರ್ಗವಾದಾಗ ಮಾತ್ರ ಶಿಕ್ಷಣದ ಮೂಲ ಗುರಿಯನ್ನು ತಲುಪಿಸಲು ಸಾಧ್ಯ ಬೆಟ್ಟದಹಳ್ಳಿ ಗವಿಮಠದ ಶ್ರೀ ನಿ.ಪ.ಸ್ವ ಚಂದ್ರಶೇಖರ ಸ್ವಾಮೀಜಿಗಳು ತಿಳಿಸಿದರು. ಅವರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸಂಸ್ಕೃತ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಪೋಷಕರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸುಮಾರು 35 ವರ್ಷಗಳಿಂದ ಮಕ್ಕಳ ಬೌಧಿಕ ಹಾಗೂ ಶಿಕ್ಷಣಿಕ ಚಟುವಟಿಕೆಗಳ ಮೂಲಕ…

Read More

ಜಾಗತೀಕರಣ ಯುಗದಲ್ಲಿ ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆ ಅತ್ಯಗತ್ಯ

  ಗುಬ್ಬಿ : ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಲು ಮತ್ತು ಹೊಸ ಮಾರುಕಟ್ಟೆಗಳನ್ನು ಗುರುತಿಸಲು ಸಹಾಯ ಮಾಡುವ ಕಾರ್ಯವನ್ನು ಅಪೆಡಾ ಮಾಡುತ್ತಿದೆ ಎಂದು ಅಪೆಡಾ ವಲಯ ಸಹಾಯಕ ವ್ಯವಸ್ಥಾಪಕ ಯು.ಧರ್ಮರಾವ್ ತಿಳಿಸಿದರು.     ತಾಲ್ಲೂಕಿ ಸಿ.ಎಸ್ ಪುರ ಹೋಬಳಿಯ ನೆಟ್ಟೇಕೆರೆ ಗ್ರಾಮದಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ) ಮತ್ತು ತೋಟಗಾರಿಕೆ ಇಲಾಖೆ ತುಮಕೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಡಿಕೆ ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಸಮಗ್ರ…

Read More

ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ

ತುಮಕೂರು :- ಜಿಲ್ಲೆಯ ಲಂಬಾಣಿ (ಬಂಜಾರ) ಸಮುದಾಯ ಭವನದ ಕನಸು ಅನೇಕ ವರ್ಷಗಳ ಹೋರಾಟದ ಫಲವಾಗಿ, ತುಮಕೂರು ನಗರದ ಸರಸ್ವತಿಪುರಂನಲ್ಲಿ ಬೃಹತ್ ಮತ್ತು ಭವ್ಯವಾದ ಜಿಲ್ಲಾ ಬಂಜಾರ ಭವನ ನಿರ್ಮಾಣಗೊಳ್ಳುವುದರೊಂದಿಗೆ ಸಕಾರಗೊಂಡಿದೆ. ಸುಸಜ್ಜಿತ ಸಮುದಾಯ ಭವನ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯಲ್ಲಿ ತನ್ನದೆಯಾದ ಆದ ವೈಶಿಷ್ಟತೆ ಹೊಂದಿರುವ ಲಂಬಾಣಿ ಸಮುದಾಯದ ಬುಡಕಟ್ಟು ಸಂಸ್ಕøತಿ, ಕಲೆ, ಪರಂಪರೆ ಮತ್ತು ಐತಿಹಾಸಿಕ ಹೆಗ್ಗಳಿಕೆಯನ್ನು ಉಳಿಸಿ ಬೆಳೆಸಲು ಭವನವು ಭದ್ರ ನೆಲೆಯಾಗಲಿದೆ. ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬಂಜಾರ ಸಮುದಾಯವು ವಿಶಿಷ್ಟ ಸ್ಥಾನಪಡೆದುಕೊಂಡಿದೆ. ಸಮುದಾಯದ…

Read More
error: Content is protected !!