ನಾಡಹಬ್ಬದಂತೆ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ: ಧನಪಾಲ್
ತುರುವೇಕೆರೆ: ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಹೆಚ್.ಧನಪಾಲ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ವ್ಯಕ್ತಿತ್ವದ ಎಲ್ಲಾ ಸಮುದಾಯದ ಪ್ರಗತಿಗೆ ಶ್ರಮಿಸಿದ ನಾಡಪ್ರಭು ಕೆಂಪೇಗೌಡರು. ಅಂತಹ ಮಹಾನ್ ಚೇತನರ ಜಯಂತ್ಯೋತ್ಸವವನ್ನು ಜಾತಿ, ಧರ್ಮದ ಭೇಧವಿಲ್ಲದೆ ಜಾತ್ಯಾತೀತ ಮನೋಭಾವದಲ್ಲಿ ಎಲ್ಲರೊಡಗೂಡಿ ನಾಡಹಬ್ಬದ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ನಿಲುವನ್ನು ಸಂಘ ಕೈಗೊಂಡಿದೆ. ಇದಲ್ಲದೆ…