ಉದ್ಯೋಗ, ಅಧಿಕಾರ ಯಾವತ್ತೂ ಅಳತೆಗೋಲಾಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಶ್ರೀ ಸಿದ್ದಲಿಂಗ ಸ್ವಾಮೀಜಿ
ತುಮಕೂರು- ಉದ್ಯೋಗ, ಅಧಿಕಾರ ಯಾವತ್ತೂ ಕೂಡ ಅಳತೆಗೋಲಾಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದರು. ನಾವು ಮಾಡುವ ಉದ್ಯೋಗದಲ್ಲಿ ದಿವಾನ ಆದರೂ ಸರಿ, ಜವಾನ ಆದರೂ ಸರಿ ಎಲ್ಲರಿಗೂ ಸಮಾನವಾದಂತಹ ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ಬಸವಣ್ಣನ ಸಮಾನತೆ ಸಂದೇಶ ಸಾರ್ಥಕತೆ ಪಡೆಯುತ್ತದೆ ಎಂದು ಅವರು ಹೇಳಿದರು. ನಗರದ ಎಸ್ಐ ಟಿ ಯ ಬಿರ್ಲಾ ಆಡಿಟೋರಿಯಂನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬೋಧಕೇತರ ಸಂಘದ ವತಿಯಿಂದ ಏರ್ಪಡಿಸಿದ್ದ ಬಸವ…