ಪೋಲೀಸರು ಇರುವುದೇ ಸಾರ್ವಜನಿಕರ ರಕ್ಷಣೆಗಾಗಿ,ಪ್ರತಿ ಮನೆಯ ಮುಂದೆ ಸಿಸಿ ಕ್ಯಾಮರಾಹಾಕಿಸಿ ಪಿ.ಎಸ್.ಐ.ಪ್ರಸನ್ನಕುಮಾರ್
ತುಮಕೂರು:ಜಯನಗರ ಮಾರುಕಟ್ಟೆ ಪ್ರಾಂಗಣದ ಅಶ್ವತ್ಥಕಟ್ಟೆಯಲ್ಲಿ ಜಯನಗರ ಪೊಲೀಸ್ ಠಾಣೆಯಿಂದ ನಡೆದ ಜನ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ.ಪ್ರಸನ್ನಕುಮಾರ್.ಕೆ ರವರು ನಾಗರೀಕರು ಪೋಲೀಸರೊಂದಿಗೆ ಸದಾ ಸಹಕರಿಸಬೇಕು,ಪೋಲೀಸರು ಇರುವುದೇ ನಾಗರೀಕ ಸಮಾಜದ ರಕ್ಷಣೆಗಾಗಿ,ಕೋಟ್ಯಾಂತರ ರೂಪಾಯಿ ವ್ಯಯಿಸಿ ಸ್ವಂತ ಮನೆ ಕಟ್ಟಿಸುತ್ತೀರಿ ಆದರೆ ಅದಕ್ಕೆ ಸಿಸಿ ಕ್ಯಾಮರಾ ಹಾಕಿಸಲು ಮೀನಮೇಷ ಎಣಿಸುತ್ತೀರಿ,ನಿಮ್ಮ ರಕ್ಷಣೆಗಾಗಿ ಸಿಸಿ ಕ್ಯಾಮರಾಗಳನ್ನು ಹಾಕಿಸಿ,ಮೆನಯಿಂದ ಹೆಚ್ಚು ದಿನ ಹೊರ ಹೋಗಬೇಕೆಂದರೆ ನಿಮ್ಮ ಬಡಾವಣೆಯ ಬೀಟ್ ಪೋಲೀಸರಿಗೆ ತಿಳಿಸಿ,ಬೆಲೆಬಾಳುವ ಒಡವೆ ವಸ್ತುಗಳನ್ನು ಪೋಲೀಸರಿಗೆ ಒಪ್ಪಿಸಿ ಹೊರ ಹೋಗಿ ಬಂದ…