ತುಮಕೂರು: ಮಾದಿಗ ಸಮುದಾಯದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ ಕೆ ಎಚ್ ಮುನಿಯಪ್ಪನವರು ಸತತವಾಗಿ ಏಳು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಸಮರ್ಥವಾದ ಅಧಿಕಾರವನ್ನು ನಿರ್ವಹಿಸಿಹಸುತ್ತ ಬಂದಿರುತ್ತಾರೆ ಅಂತಹ ಹಿರಿಯ ನಾಯಕರಿಗೆ ಕಾಂಗ್ರೆಸ್ ಪಕ್ಷ ಅವರನ್ನು ಉಪಮುಖ್ಯಮಂತ್ರಿ ಮಾಡುವಲ್ಲಿ ವಿಫಲವಾಗಿದ್ದು ಕಳೆದ ಬಾರಿಯೂ ಸಹ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಾದಿಗ ಸಮಾಜಕ್ಕೆ ಪ್ರಬಲವಾದ ಖಾತೆಯನ್ನು ನೀಡುವಲ್ಲಿ ಅನ್ಯಾಯವ್ಯಸಗಿದೆ ಇದನ್ನು ಕರ್ನಾಟಕ ಮಾದಿಗ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ಮಾದಿಗ ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷ ವೈಎಚ್ ಹುಚ್ಚಯ್ಯನವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು

ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಲೇ ಬರುತ್ತಿದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ ಕೆಎಚ್ ಮುನಿಯಪ್ಪನವರು ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಸಮಕಾಲೀನರು ಅವರಷ್ಟೇ ರಾಜಕೀಯದಲ್ಲಿ ಅನುಭವ ಉಳ್ಳವರು ಸಹ ಆಗಿದ್ದಾರೆ ಅಂತಹ ಹಿರಿಯ ನಾಯಕರಿಗೆ ಡಿಕೆ ಶಿವಕುಮಾರ್ ಅವರ ಸಂಪುಟ ಸಭೆಯಲ್ಲಿ ಕೆ ಎಚ್ ಮುನಿಯಪ್ಪ ನವರಿಗೆ ಉತ್ತಮ ಸ್ಥಾನಮಾನ ಕೊಡದೆ ಮಾದಿಗ ಸಮುದಾಯಕ್ಕೆ ಮಹಾ ಮೋಸವನ್ನು ಎಸೆಗಿದ್ದಾರೆ ಇದನ್ನು ರಾಜ್ಯದ ಮಾದಿಗ ಸಮುದಾಯ ಖಂಡಿಸುತ್ತದೆ ಕೂಡಲೇ ಕಾಂಗ್ರೆಸ್ ಪಕ್ಷ ಕೆಎಚ್ ಮುನಿಯಪ್ಪನವರ ಸೇವಾ ಅವಧಿಯನ್ನು ಪರಿಗಣಿಸಿ ಅವರಿಗೆ ಉಪಮುಖ್ಯಮಂತ್ರಿಯ ಸ್ಥಾನ ಕೊಡುವುದರ ಜೊತೆಗೆ ಯಾವುದಾದರು ಪ್ರಬಲವಾದ ಖಾತೆಯನ್ನು ನೀಡುವಂತೆ ಒತಾಯಿಸಿದರು.

ಹಿರಿಯ ದಲಿತ ಮುಖಂಡರಾದ ನರಸಿಯಪ್ಪನವರು ಮಾತನಾಡಿ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಕಲ್ಪಿಸಿ ಕೊಡುವುದರ ಜೊತೆಗೆ ಮೂರು ಜನ ಸಚಿವರನ್ನು ಸಹ ಮಾಡಬೇಕೆಂದು ತಿಳಿಸಿದರು ಈಗಾಗಲೇ ಡಿಕೆ ಶಿವಕುಮಾರ್ ಅವರ ಸಂಪುಟ ಸಂಪುಟದಲ್ಲಿ ಬೇರೆ ಸಮುದಾಯದ ನಾಯಕರುಗಳಿಗೆ ವಿವಿಧ ಉನ್ನತ ಮಟ್ಟದ ಖಾತೆಗಳನ್ನು ನೀಡುವ ಮೂಲಕ ಮಾದಿಗ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ರಾಜ್ಯದಲ್ಲಿ ಬಹು ಸಂಖ್ಯೆ ಹೊಂದಿರುವ
ಮಾದಿಗ ಸಮುದಾಯದ ಶಾಸಕರುಗಳಿಗೆ ಸಣ್ಣಪುಟ್ಟ ಖಾತೆಯನ್ನು ಹಂಚಿಕೆ ಮಾಡಿ ಪ್ರಬಲ ಖಾತೆಯನ್ನು ಪ್ರಬಲ ಜಾತಿಗಳಿಗೆ ಹಂಚಿಕೆ ಮಾಡಿರೋದು ಎಷ್ಟುರ ಮಟ್ಟಿಗೆ ಸರಿ ಕೆ ಎಚ್ ಮುನಿಯಪ್ಪನವರ ರಾಜಕೀಯ ಅನುಭವವನ್ನು ಪರಿಗಣಿಸಿ ಕಾಂಗ್ರೆಸ್ ಸರ್ಕಾರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ ಪ್ರಬಲವಾದ ಖಾತೆಯನ್ನು ಕೊಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಾಲಕೃಷ್ಣಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಸಂವಿಧಾನದ ಆಶಯದ ಅಡಿಯಲ್ಲಿ ಸರ್ವರಿಗೂ ಸಾಮಾಜಿಕ ನ್ಯಾಯ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಮಾದಿಗರಿಗೆ ಪಕ್ಷದಲ್ಲಿ ಆಗಲಿ ಸರ್ಕಾರದಲ್ಲಿ ಆಗಲಿ ಉತ್ತಮ ಸ್ಥಾನಮಾನ ಕೊಡುವಲ್ಲಿ ಬೇಧ ಭಾವ ಮಾಡುತ್ತಿದೆ ಕೆಎಚ್ ಮುನಿಯಪ್ಪನವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸತತವಾಗಿ ಏಳು ಬಾರಿ ಸಂಸತ್ ಸದಸ್ಯರಾಗಿದ್ದರು ಸಹ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವಲ್ಲಿ ಇತ್ತೀಚಿನ ಡಿಕೆ ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಅವರಿಗೆ ಅನ್ಯಾಯವನ್ನು ಮಾಡಿದೆ ಸರ್ಕಾರ ಕೂಡಲೇ ಕೆ ಎಚ್ ಮುನಿಯಪ್ಪನವರಿಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವುದರ ಜೊತೆಗೆ ಪ್ರಬಲವಾದ ಖಾತೆಯನ್ನು ನೀಡಿ ಸಮಾಜಮುಖಿ ಕೆಲಸ ಮಾಡಲು ಅವಕಾಶ ಮಾಡಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಮಾದಿಗ ಸಮಾಜ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಡಾ, ಕೆ, ಮುಕುಂದಪ್ಪ, ಕೊಟ್ಟ ಶಂಕರ್, ಟಿಸಿ ರಾಮಯ್ಯ, ಅಂಜಿನಪ್ಪ, ಗೂಳರಿವೆ ನಾಗರಾಜು, ಸಣ್ಣಭೂತಣ್ಣ, ಕೇಬಲ್ ರಘು, ಗುರುಮೂರ್ತಿ, ಶಿವಣ್ಣ ಕಲ್ಲಹರದಗೇರೆ, ಕೆಸ್ತೂರು ಮೂರ್ತಿ,ಗಂಗರಾಜು, ಜಲಗಿರೀಶ್, ದೂಡ್ಡಯ್ಯ ಮುಂತಾದವರು ಉಪಸ್ಥಿತರಿದ್ದರು.