ರಂಗಭೂಮಿ ಕ್ಷೇತ್ರದಲ್ಲಿ ಒಬ್ಬ ಕಲಾವಿದ ಸಾಧನೆ ಮಾಡಬೇಕಾದರೆ ಕಲಾ ಪ್ರೋತ್ಸಾಹಕರ ಸಹಕಾರ ಪ್ರಮುಖವಾದದ್ದು ಎಂದು ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ವಿಶ್ವೇಶ್ವರಯ್ಯ ನವರು ತಿಳಿಸಿದರು.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಗಡ್ಡೋಬನಹಳ್ಳಿ ಗ್ರಾಮದಲ್ಲಿ ದಿನಾಂಕ 16/4/2026 ರಂದು ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಮಾರಮ್ಮ ದೇವಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಲಾಗಿದ್ದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಸುಂದರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ ರಂಗಭೂಮಿಗೆ ತನ್ನದೇ ಆದ ವೈಶಿಷ್ಟ್ಯತೆ ಇದ್ದು ಈ ಕ್ಷೇತ್ರವನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮನಿಮ್ಮನೆಲ್ಲರ ಜವಾಬ್ದಾರಿ ಆಗಿರುತ್ತದೆ ರಂಗಭೂಮಿಯ ಕ್ಷೇತ್ರದಲ್ಲಿ ಒಬ್ಬ ಕಲಾವಿದ ಸಾಧನೆ ಮಾಡಬೇಕಾದರೆ ಕಲಾ ಪೋಷಕರ ಸಹಕಾರ ಅತಿ ಮುಖ್ಯವಾದದ್ದು ಕಲಾವಿದನನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರಂಗಭೂಮಿಯ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಾನು ಒಬ್ಬ ಸಂಗೀತ ನಿರ್ದೇಶಕನಾಗಿ ನನ್ನ ತಾಯಿಯವರ ಆಶಯದಂತೆ ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ನ್ನು ಸ್ಥಾಪಿಸುವ ಮೂಲಕ ರಾಜ್ಯದ ಹಲವಾರು ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳನ್ನು ನಮ್ಮ ಟ್ರಸ್ಟ್ ನ ಅಡಿಯಲ್ಲಿ ಪ್ರದರ್ಶನ ಮಾಡುತ್ತಾ ರಂಗಭೂಮಿಯ ಕಲೆಗೆ ಹೆಚ್ಚು ಹೊತ್ತು ನೀಡುತ್ತಿರುವುದು ನಮ್ಮ ಕುಟುಂಬದ ಸದಸ್ಯರಿಗೆ ಮತ್ತು ನನಗೆ ಸಂತಸ ತಂದಿದೆ ಇನ್ನೂ ಹೆಚ್ಚು ಹೆಚ್ಚು ರಂಗಭೂಮಿಯ ಕಲೆಯನ್ನು ಪ್ರೋತ್ಸಾಹಿಸಲು ನನಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಕಲಾಪೋಷಕರಲ್ಲಿ ಮತ್ತು ಕಲಾಭಿಮಾನಿಗಳಲ್ಲಿ ಮನವಿ ಮಾಡಿದರು.
ಪೌರಾಣಿಕ ನಾಟಕದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಎಲೆ ರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ, ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ತುಮಕೂರು ಜಿಲ್ಲೆ ಕಲೆಯ ತವರೂರು ರಂಗಭೂಮಿಯ ಭೀಷ್ಮ ಡಾ. ಗುಬ್ಬಿ ವೀರಣ್ಣನವರು ಜನಿಸಿದ ಈ ಕಲ್ಪತರು ನಾಡಿನಲ್ಲಿ ಹೆಚ್ಚು ಹೆಚ್ಚು ರಂಗಭೂಮಿಯ ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದು ಪ್ರೇಕ್ಷಕರು ಈ ನಾಟಕಗಳನ್ನು ನೋಡುವ ಮೂಲಕ ತಮ್ಮ ನಿಜ ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ದ್ವೇಷ ಅಸೂಯೆಯನ್ನು ದೂರ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಆಗ ಮಾತ್ರ ಈ ನಾಟಕಗಳ ಪ್ರದರ್ಶನಕ್ಕೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ನೆರೆದಿದ್ದ ಸಾವಿರಾರು ಕಲಾಪ್ರೆಕ್ಷಕರಿಗೆ ಆಶೀರ್ವಚನ ನೀಡಿದರು.
ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಕಲಾವಿದರು ಕಲೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ ಅದೆಷ್ಟೋ ಕಲಾವಿದರ ಬದುಕು ಕಷ್ಟಕರವಾಗಿದೆ ರಾಜ್ಯ ಸರ್ಕಾರ ಕಲಾವಿದರ ಬದುಕಿಗೆ ಶಾಶ್ವತ ನೆಲೆಯನ್ನು ನೀಡುವಂತೆ ಯೋಜನೆಗಳನ್ನು ರೂಪಿಸುವತ್ತ ಚಿಂತನೆಗಳನ್ನು ಮಾಡಬೇಕಾಗಿದೆ ರಾಜ್ಯದ ಕಲಾವಿದರು ಸರ್ಕಾರದ ಯೋಜನೆಗಳನ್ನು ಹೇಚ್ಚು ಹೇಚ್ಚು ಪಡೆಯಬೇಕೆಂದರೆ ನಾವು ಒಗ್ಗಟ್ಟಿನಿಂದ ಸಂಘಟಿತರಾಗಬೇಕಾಗಿದೆ ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ರಾಜ್ಯದ್ಯಂತ ಉತ್ತಮ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ ಕಲಾವಿದರ ಉಳಿವಿಗಾಗಿ ಸಾಕಷ್ಟು ಸರ್ಕಾರದ ಗಮನ ಸೆಳೆಯುವಂತಹ ಕಾರ್ಯಕ್ರಮಗಳನ್ನು ಮಾಡುತ್ತ ಬರುತಿದೆ ಹೆಸರಾಂತ ಸಂಗೀತ ನಿರ್ದೇಶಕರು ಹಾಗೂ ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿಗಳು ಆದಂತಹ ವಿಶ್ವೇಶ್ವರಯ್ಯನವರು ರಂಗಭೂಮಿಯ ಕಲೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುವಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಆದ್ದರಿಂದ ನಾವುಗಳು ಎಂದೆಂದಿಗೂ ಅವರ ಉತ್ತಮ ಕಾರ್ಯಗಳಿಗೆ ಸಹಕಾರ ನೀಡುವ ಮೂಲಕ ಅವರ ಈ ಕಲಾ ಸೇವೆಗೆ ಪ್ರೋತ್ಸಾಹ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ಸಂಸ್ಥಾನ ಶ್ರೀ ಕಮಲಮ್ಮನವರ ಮೊಮ್ಮಗಳಾದ ಶ್ರೀ ಲಕ್ಷ್ಮಿ,
ಸುಬ್ರಮಣ್ಯ ಸ್ವಾಮಿ, ಹಿರಿಯ ಕಲಾ ಪೋಷಕರು ಹಾಗೂ ಸಂಗೀತ ನಿರ್ದೇಶಕರಾದ ವಿಶ್ವೇಶ್ವರಯ್ಯನವರ ತಾಯಿಯವರಾದ ಕಾಮಕ್ಕ, ರಂಗಸ್ವಾಮಯ್ಯ, ಚಂದ್ರಶೇಖರ ಆಚಾರ್, ಸಾಹಿತಿಗಳಾದ ದುಗ್ಗೆನಹಳ್ಳಿ ಸಿದ್ದೇಶ್, ಮಹಾಲಕ್ಷ್ಮಿ ವಿದ್ಯಾ ಸಂಸ್ಥೆಯ ಶಿಕ್ಷಕರಾದ ಸೋಮಶೇಖರಯ್ಯ ಮುಂತಾದವರು ಉಪಸ್ಥಿತರಿದ್ದರು