ಸಮೀಕ್ಷೆಯಲ್ಲಿ ‘ವೀರಶೈವ ಲಿಂಗಾಯಿತ’ ಎಂದು ಬರೆಸಿ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‍ನಿಂದ ಮನವಿ

ತುಮಕೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ವೀರಶೈವ ಲಿಂಗಾಯಿತ ಬಂಧುಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ನಮೂದಿಸಬೇಕು ಎಂದು ಜಗದುರು ಪಂಚಾಚಾರ್ಯ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮನವಿ ಮಾಡಿದ್ದಾರೆ.

 

ಸಮೀಕ್ಷಾ ಕಾರ್ಯದಲ್ಲಿ ಗಣತಿದಾರರ ಪ್ರಶ್ನೆಗಳಿಗೆ ನಿಖರ ಮಾಹಿತಿಯನ್ನು ನೀಡುವುದು ಪ್ರಮುಖ ಜವಾಬ್ದಾರಿಯಾಗಿದೆ. ನಮ್ಮ ಸಮಾಜದ ಎಲ್ಲರೂ ಸಹ ನಾಡಿನ ಹಿರಿಯರು, ಗುರುಗಳು ನೀಡಿರುವ ಸಂದೇಶದಂತೆ ಧರ್ಮ- ಹಿಂದೂ, ಜಾತಿ-ವೀರಶೈವ ಲಿಂಗಾಯತ(ಅoಜe:ಂ-1524) ಮತ್ತು ಉಪಜಾತಿ-ತಮ್ಮ ಪೂರ್ವಜರು, ಮನೆತನ ಅನುಸರಿಸಿರುವ ಸಂಪ್ರದಾಯಗಳಂತೆ ನಮೂದಿಸಲು ಕೋರಿದ್ದಾರೆ.

 

 

ಯಾವುದೇ ರೀತಿಯಲ್ಲಿ ಗೊಂದಲಕ್ಕೀಡಾಗದೆ, ಯಾವುದೇ ವಿಚಾರಗಳಿಗೆ ಪ್ರಭಾವಿತರಾಗದೆ, ಸಮಾಜದ ಹಿರಿಯರು, ಗುರುಗಳು ತಿಳಿಸಿರುವ ಸೂಚನೆಯಂತೆ ನಮೂದಿಸಿ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಭವಿಷ್ಯಕ್ಕೆ ಸುಭದ್ರತೆಗೆ ಸಹಕರಿಸಬೇಕು ಎಂದು ಟಿ.ಆರ್.ಸದಾಶಿವಯ್ಯ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!