ಜಿಲ್ಲಾಧಿಕಾರಿಗಳಿಗೆ ಸವಿತಾ ಸಮಾಜದ ಮುಖಂಡರಿಂದ ಮನವಿ
ತುಮಕೂರು : ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ವತಿಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿನ ಕ್ಷೌರಿಕರಿಗೆ ಆಗುತ್ತಿರುವ ಕುಂದುಕೊರತೆ ಮತ್ತು ತರಬೇತಿ ಶಿಬಿರಗಳನ್ನು ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರದಲ್ಲಿ ನಡೆಸುವಂತೆ ಕೋರಿ ಮನವಿಯನ್ನು ಅಧ್ಯಕ್ಷರಾದ ಕಟ್ವೆಲ್ ರಂಗನಾಥ್ರವರು ಇಂದು ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್ರವರಿಗೆ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್ವೆಲ್ ರಂಗನಾಥ್ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಕ್ಷೌರಿಕ ವೃತ್ತಿಗೆ ಸಂಬಂಧಿಸಿದಂತೆ…