ಪ್ರಮುಖ ಸುದ್ದಿಗಳು
22 ಹಾಗೂ 23 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ
ಗುಬ್ಬಿ : ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಾಗೂರು ಗೇಟ್ ಸಮೀಪದಲ್ಲಿರುವ ಬಾಲಾಜಿ ಬಡಾವಣೆಯಲ್ಲಿ ಜೂನ್ 22 ಹಾಗೂ 23 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾಕ್ಟರ್ ವೀರ ಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಲಿದೆ ಎಂದು ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಎರಡು ದಿನದ ಕಾರ್ಯಕ್ರಮದಲ್ಲಿ ಜೂನ್ 22ರ ಸಂಜೆ 4ಕ್ಕೆ ರಂಭಾಪುರಿ ಶ್ರೀಗಳ ಶುಭ ಆಗಮನ ಮತ್ತು ಸಾರುಟು ಉತ್ಸವ ನೆರವೇರಲಿದ್ದು 23ರಂದು ಬೆಳಗ್ಗೆ ಷಷ್ಟಿ ಪೂರ್ತಿ, ಬೆಳಗ್ಗೆ…
ಕನ್ನಡ ಭವನದಲ್ಲಿ ಆತ್ಮಾನಂದರ ಚಿತ್ರಕಲಾ ಪ್ರದರ್ಶನ ಆಯೋಜನೆ
ಬೆಂಗಳೂರು: ಕರ್ನಾಟಕ ಆರ್ಟ್ಸ್ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ನಗರ ಜಿಲ್ಲೆ ಇವರ ಸಹಕಾರದೊಂದಿಗೆ ಚಿತ್ರಕಲಾವಿದ, ಸಮಾಜ ಸೇವಕ, ಬಹುಮುಖ್ಯ ಪ್ರತಿಭೆ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ಆತ್ಮಾನಂದ ಅವರ ಚಿತ್ರಕಲಾ ಪ್ರದರ್ಶನವನ್ನು ನಾಳೆ ಬೆಳಗ್ಗೆ 11 ಗಂಟೆಗೆ (ಗುರುವಾರ ರಿಂದ ಶುಕ್ರವಾರ) ಎರಡು ದಿನಗಳ ವರೆಗೆ ನಗರದ ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸರೋಜಾ ಅವರು ಪತ್ರಿಕಾ…
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಹುನ್ನಾರ
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಹುನ್ನಾರ ನಾಲ್ವರ ವಿರುದ್ದ ಎಫ್.ಐ.ಆರ್; ಸೂಕ್ತ ತನಿಖೆಗೆ ಒತ್ತಾಯ ತುಮಕೂರು:ಗುಬ್ಬಿ ಪಟ್ಟಣದ ಸರ್ವೆ ನಂಬರ್ 68/2ಎ ನಲ್ಲಿ ರುವ ಸುಮಾರು 1.02 ಎಕರೆ ಜಾಗವನ್ನು ಕೆಲವರು ಜಮೀನ ಮೂಲ ಮಾಲೀಕರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ,ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲು ಹೊರಟಿದ್ದು,ಇದರ ವಿರುದ್ದ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳ ವಿರುದ್ದ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಮಂಜುನಾಥ್.ಜಿ.ಎಸ್ ಒತ್ತಾಯಿಸಿದ್ದಾರೆ. ಗುಬ್ಬಿ ಪಟ್ಟಣದ…
ಗುಬ್ಬಿ ಶಾಸಕರಿಗೆ ಸಚಿವಸ್ಥಾನ ಕೈತಪ್ಪಿದ್ದಕ್ಕೆ ಲಿಂಕ್ ಕೆನಾಲ್ ವಿರುದ್ಧ ಹೇಳಿಕೆ ಸರಿಯಲ್ಲ ಬಿ,ಎಸ್ ನಾಗರಾಜು
ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಿರುವ ಅವೈಜ್ಞಾನಿಕ ಎಕ್ಸ್ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯನ್ನು ಸ್ಥಗಿತಗೋಳಿಸುವಂತೆ ಹಲವಾರು ರೈತಪರ ಹೋರಾಟಗಾರರ ಚಳುವಳಿಯ ಪ್ರತಿಫಲವಾಗಿ ಒಂದು ವರ್ಷದ ಹಿಂದೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು ಅದರೆ ಇತ್ತೀಚೆಗೆ ರಾಜ್ಯದಲ್ಲಿ ಡಿ,ಕೆ ಶಿವಕುಮಾರ್ ರವರು ನೂತನ ಮುಖ್ಯಮಂತ್ರಿಯಾದ ತಕ್ಷಣವೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅವೈಜ್ಞಾನಿಕವಾದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಪ್ರಾರಂಭಿಸಲು ಮುಂದಾಗಿರುವುದು ಖಂಡನೀಯ ಎಂದು ಜೆಡಿಎಸ್ ಮುಖಂಡ ಬಿ, ಎಸ್, ನಾಗರಾಜು ತಿಳಿಸಿದರು. ಈ ಕುರಿತಾಗಿ ಗುಬ್ಬಿ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ…
ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗುಬ್ಬಿ ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ
ತುಮಕೂರು: ಅತಿ ಹೆಚ್ಚು ಅವಧಿಯಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ನರೇಂದ್ರ ಮೋದಿಯವರನ್ನು ಅಭಿನಂದಿಸಿ, ಅವರಿಗೆ ಆಯುಷು, ಆರೋಗ್ಯ, ಮತ್ತಷ್ಟು ಸೇವೆ ಮಾಡುವ ಶಕ್ತಿ ದೊರೆಯಲೆಂದು ಪ್ರಾರ್ಥಿಸಿ ತಾಲೂಕು ಬಿಜೆಪಿಯಿಂದ ಗುಬ್ಬಿ ನಗರದ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ನಂತರ S,D ದಿಲೀಪ್ ಕುಮಾರ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷ ಕಾಲ ಆಡಳಿತ ನಡೆಸಿ ಅತಿ ಹೆಚ್ಚು…
ಸರ್ಕಾರ ಜಮೀನು ಪಡೆಯಲು ಮುಂದಾದರೆ ಹೆಚ್ ಎ ಎಲ್ ಘಟಕದ ಮುಂದೆ ಉಗ್ರ ಹೋರಾಟ ರೈತರಿಂದ ಎಚ್ಚರಿಕೆ
ಗುಬ್ಬಿ : ಎಚ್ಎಎಲ್ ಘಟಕಕ್ಕೆ ಹೆಚ್ಚುವರಿಯಾಗಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಎಚ್ಎಎಲ್ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಪಟ್ಟಣದ ತಾಲೂಕು ಕಛೇರಿ ಮುಂಭಾಗ ನಿಟ್ಟೂರು ಹೋಬಳಿಯ ಹೆಚ್.ಎ.ಎಲ್. ಘಟಕಕ್ಕೆ ಹೊಂದಿಕೊಂಡಿರುವ ಸಮೀಪದ ಗ್ರಾಮಸ್ಥರು ತಾಲೂಕು ಕಛೇರಿ ಮುಂಭಾಗ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧ ದಿಕ್ಕಾರ ಕೂಗುವ ಮೂಲಕ ಗ್ರಾಮಸ್ಥರು ಪ್ರತಿಭಟನೆ ನೆಡೆಸಿದರು. ಪ್ರತಿಭಟನಾಕಾರರಾದ ಮುಖಂಡ ಶಶಿಧರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಲೂಕಿನ ನಿಟ್ಟೂರು ಹೋಬಳಿಯ…
ಕೆಎಚ್ ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಾದಿಗ ಮುಖಂಡರಿಂದ ಒತ್ತಾಯ
ತುಮಕೂರು: ಮಾದಿಗ ಸಮುದಾಯದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ ಕೆ ಎಚ್ ಮುನಿಯಪ್ಪನವರು ಸತತವಾಗಿ ಏಳು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಸಮರ್ಥವಾದ ಅಧಿಕಾರವನ್ನು ನಿರ್ವಹಿಸಿಹಸುತ್ತ ಬಂದಿರುತ್ತಾರೆ ಅಂತಹ ಹಿರಿಯ ನಾಯಕರಿಗೆ ಕಾಂಗ್ರೆಸ್ ಪಕ್ಷ ಅವರನ್ನು ಉಪಮುಖ್ಯಮಂತ್ರಿ ಮಾಡುವಲ್ಲಿ ವಿಫಲವಾಗಿದ್ದು ಕಳೆದ ಬಾರಿಯೂ ಸಹ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಾದಿಗ ಸಮಾಜಕ್ಕೆ ಪ್ರಬಲವಾದ ಖಾತೆಯನ್ನು ನೀಡುವಲ್ಲಿ ಅನ್ಯಾಯವ್ಯಸಗಿದೆ ಇದನ್ನು ಕರ್ನಾಟಕ ಮಾದಿಗ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ಮಾದಿಗ ಮಹಾಸಭಾ ತುಮಕೂರು…
ಮಾತೃಶ್ರೀ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 91ನೇ ವರ್ಷದ ಪುಣ್ಯಸ್ಮರಣೆ
ತುಮಕೂರು : ಇಂದು ಭಾರತದ ಇತಿಹಾಸ ಕಂಡ ಅಪ್ರತಿಮ ಮಹಿಳೆ, ತ್ಯಾಗದ ಪ್ರತೀಕವಾದ ಮಾತೃಶ್ರೀ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 91ನೇ ವರ್ಷದ ಪುಣ್ಯತಿಥಿಯನ್ನು ಅಖಿಲ ಭಾರತ ಡಾ. ಅಂಬೇಡ್ಕರ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಇಂದು ತುಮಕೂರು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ…
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಕೆ ನಾಗರಾಜು
ತುಮಕೂರು : ಇತ್ತೀಚೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕೆ ನಾಗರಾಜು ಅವರನ್ನು ಇಂದು ನಗರದ ಕುಣಿಗಲ್ ಮುಖ್ಯರಸ್ತೆಯಲ್ಲಿ ಸಂಭ್ರಮ ಪಾರ್ಟಿ ಹಾಲ್ ನಲ್ಲಿ ಛಲವಾದಿ ನೌಕರರ ಬಳಗದ ವತಿಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪನವರು ಮಾತನಾಡಿ ಚುನಾವಣೆಗೆ ಆರ್ಥಿಕವಾಗಿ ವ್ಯಯವಾಗಲಿದೆ ಅದನ್ನು ತಡೆಗಟ್ಟುವುದು ಮತ್ತು ನಾಗರಾಜು ಅವರು ಮಾಡಿಕೊಂಡು ಬಂದಿರುವ ಸೇವೆಯನ್ನು ಪರಿಗಣಿಸಿ ಶಿಕ್ಷಕರುಗಳು ಅವರನ್ನು ಅವಿರೋಧವಾಗಿ…
ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರನಿಂದ ಕುತಂತ್ರ ರಾಜಕಾರಣ’
ಷಡ್ಯಂತರಗಳಿಗೆ ಜಗ್ಗುವುದಿಲ್ಲ: ಜೆಡಿಎಸ್ ಮುಖಂಡ ನಾಗರಾಜು ತಿರುಗೇಟು ತುಮಕೂರು: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ತಮ್ಮ ವಿರುದ್ಧ ಷಡ್ಯಂತರ ನಡೆಸಿ ತಮ್ಮನ್ನು ರಾಜಕೀಯವಾಗಿ ಕುಗ್ಗಿಸುವ ಕುತಂತ್ರ ನಡೆಸಿದ್ದಾರೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ಬಿ.ಎಸ್. ನಾಗರಾಜು ಆರೋಪಿಸಿದರು. ಇಂದು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮೊದಲು ತಮ್ಮ ಕಾರು ಚಾಲಕ, ಆಪ್ತ ಸಹಾಯಕರಾಗಿದ್ದು, ಈಗ ತಮ್ಮನ್ನು ಬಿಟ್ಟುಹೋಗಿರುವವರನ್ನು ಜೊತೆಯಾಗಿಸಿಕೊಂಡು ನನ್ನ…