ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್ ಗರಿಮೆ
ತುಮಕೂರು: ಮಾಧ್ಯಮ ಶಿಕ್ಷಣ ಕ್ಷೇತ್ರದ ಗುಣಮಟ್ಟದ ಪ್ರಗತಿ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಪಠ್ಯಕ್ರಮ ಹಾಗೂ ಪ್ರಾಯೋಗಿಕ ಕಲಿಕೆ ಅವಕಾಶ ಸೇರಿದಂತೆ ಸರ್ವಾಂಗೀಣ ಕೊಡುಗೆಗಳನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಮಾಧ್ಯಮ ಕಾಲೇಜುಗಳಲ್ಲಿ ಕರ್ನಾಟಕದಿಂದ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರಕ್ಕೆ ಪ್ರಸಕ್ತ ಸಾಲಿನ ‘ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್-2025 ಪ್ರಶಸ್ತಿ ಸಂದಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಇತ್ತೀಚಿಗೆ ನಟ ರಘು ಭಟ್ ನೇತೃತ್ವದಲ್ಲಿ ಆಯೋಜಿಸಲಾದ ಟಿಎನ್‍ಐಟಿ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿಗಳು ವಿತರಣಾ…