ವೀರವನಿತೆ ಒನಕೆ ಓಬವ್ವರ 2ನೇ ತವರುಮನೆ ಸಿರುಗುಪ್ಪ ಎಂಬುದು ಹೆಮ್ಮೆಯ ಸಂಗತಿ ಬಿ.ಎಂ. ಸತೀಶ್
ಸಿರುಗುಪ್ಪ: ತಾಲೂಕು ಆಡಳಿತ ಹಾಗೂ ಛಲವಾದಿ ಮಹಾಸಭಾ ತಾಲೂಕು ಸಮಿತಿ, ಸಿರುಗುಪ್ಪ ಇವರ ಸಹಯೋಗದಲ್ಲಿ ನಗರದ ನೇತಾಜಿ ವ್ಯಾಯಾಮ ಶಾಲಾ ಆವರಣದಲ್ಲಿ ಆಯೋಜಿಸಿದ್ದ ‘ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಮಾನ್ಯ ಬಿ.ಎಂ. ನಾಗರಾಜ್ ರವರ ಸಹೋದರ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಂ. ಸತೀಶ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಚಿತ್ರದುರ್ಗದ ಪಾಳೆಯಗಾರ ವೀರ ಮದಕರಿ ನಾಯಕರ ಕೋಟೆಯನ್ನು ಕಿಂಡಿ ಮೂಲಕ
ರಕ್ಷಿಸುವಲ್ಲಿ ತಾವು ನಾಡಿನ ಸ್ವಾಭಿಮಾನ, ಅಪ್ರತಿಮ ಸಾಹಸ ಮತ್ತು ದೇಶಭಕ್ತಿಯ ಸಂಕೇತವಾಗಿರುವ ವೀರವನಿತೆ ಒನಕೆ ಓಬವ್ವ ರವರು ಪ್ರಾಣತ್ಯಾಗ ಮಾಡಿದ ಘಟನೆಯು ಇತಿಹಾಸ ಪುಟಗಳಲ್ಲಿ ಓಬವ್ವಳ ತ್ಯಾಗ, ಶೌರ್ಯ ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಕೋಟೆಯನ್ನು ರಕ್ಷಣೆಗಾಗಿ ಒನಕೆಯನ್ನು ಆಯುಧವನ್ನಾಗಿ ಹಿಡಿದುಕೊಂಡು ಹೈದರಾಲಿ ಸೈನಿಕರನ್ನು ಕಾವಲುಗಾರನ ಸದೆಬಡಿದ ಹೆಂಡತಿ ಓಬವ್ವರಾಗಿದ್ದಾರೆ. ಓಬವ್ವ ಅವರ ತವರುಮನೆ ಗುಡೇಕೋಟೆ ಮತ್ತು ಎರಡನೇ ತವರುಮನೆ ನಮ್ಮ ಸಿರುಗುಪ್ಪ ಎಂಬುದು ಹೆಮ್ಮೆಯ ವಿಷಯ ಎಂದರು.
ಬಿಜೆಪಿ ನಾಯಕ ದರಪ್ಪ ನಾಯಕ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ವಾಲ್ಮೀಕಿ, ಕನಕದಾಸ, ಜ್ಯೋತಿಬಾ ಫುಲೆ ದಂಪತಿಗಳು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶಗಳನ್ನು ಯುವಕ ಪೀಳಿಗೆಯು ಪ್ರತಿಯೊಬ್ಬರೂ ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾಷಣಕಾರರಾಗಿ ಶಿಕ್ಷಕ ರಮೇಶ ಸುಗ್ಗೇನಹಳ್ಳಿ ಅವರು
ಗುಡೇಕೋಟೆಯ ಚಿನ್ನಮ್ಮ ಮತ್ತು ಚಿನ್ನಪ್ಪ ದಂಪತಿಯ ಮಗಳಾದ ಓಬವ್ವ, ಚಿತ್ರದುರ್ಗದ ಕೋಟೆ ಕಾಯುತ್ತಿದ್ದ ಮುದ್ದಹನುಮಪ್ಪ ಅವರನ್ನು ವಿವಾಹವಾದ ನಂತರ, ಒನಕೆ ಓಬವ್ವ ಅವರ ಶೌರ್ಯ, ತ್ಯಾಗ ಹಾಗೂ ಸ್ವಾಭಿಮಾನದ ಬದುಕಿನ ಕುರಿತು ಸಮಗ್ರವಾದ ವಿಶೇಷ ಮಾಹಿತಿ ತಿಳಿಸಿದರು.
ಕೊನೆಯಲ್ಲಿ ಓಬವ್ವ ರವರ ಜಯಂತಿಯನ್ನು ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ಮೂಲಕ ಅದ್ಧೂರಿಯಾಗಿ ನಡೆಯಿತು. ಇತ್ತೀಚೆಗೆ ಛಲವಾದಿ ಸಮಾಜದ ಎಸ್ಎಸ್ಎಲ್ಸಿ, ಪಿಯುಸಿ 75% ಮೇಲ್ಪಟ್ಟ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಶಿಕ್ಷಣದಲ್ಲಿ ಡಾಕ್ಟರೇಟ್ ಪದವಿ ಪಡೆದ ಛಲವಾದಿ ಸಮುದಾಯದ ಯುವ ಪ್ರತಿಭೆ, ಉಪನ್ಯಾಸಕ, ಪತ್ರಕರ್ತರು ಹಾಗೂ ಸಮಾಜ ಸೇವಕ ಡಾ. ಈಶ್ವರ್ ಸಿರಿಗೇರಿ ರವರಿಗೆ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಮಾನ್ಯ ಬಿ.ಎಂ. ನಾಗರಾಜ ರವರ ಸಹೋದರ ಬಿ.ಎಂ. ಸತೀಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಎಂ. ಬಸಪ್ಪ, ಬಿಜೆಪಿ ನಾಯಕ ದರಪ್ಪ ನಾಯಕ, ಶ್ರೀ ತಾಯಮ್ಮ ದೇವಿ ದೇವಸ್ಥಾನ, ಕುಡುದರಹಾಳು ಪೀಠಾಧ್ಯಕ್ಷ
ಶ್ರೀ ಡಾ. ಶಿವಕುಮಾರ ತಾತನವರು, ಬಂತೇಜಿ ಕಮಲರತ್ನ ಚಿಕ್ಕು, ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯ ಹೆಚ್. ಗಣೇಶ್, ಗೌರವಾಧ್ಯಕ್ಷ ಬಿ. ಸಣ್ಣ ರಾಮಯ್ಯ, ಬೂದುಗುಪ್ಪ ಛಲವಾದಿ ಓಂಕಾರಪ್ಪ, ಯುವ ಸಮಿತಿ ಅಧ್ಯಕ್ಷ ಕರೆಂಟ್ ಮಲ್ಲಯ್ಯ, ನಗರ ಘಟಕ ಅಧ್ಯಕ್ಷ ಸೂಗೂರು ಮಲ್ಲಯ್ಯ, ಶ್ರೀಧರಗಡ್ಡೆ ಯಲ್ಲಪ್ಪ, ಛಲವಾದಿ ಪಂಪಾಪತಿ, ತೆಕ್ಕಲಕೋಟೆ ಮಲ್ಲಯ್ಯ, ಮುದ್ದೆನೂರು ಮುದಿಯಪ್ಪ, ಇಬ್ರಾಹಿಮಪುರ ಹನುಮಂತಪ್ಪ, ಹೆರಕಲ್ ವೀರೇಶ್, ಬೂದುಗುಪ್ಪ ಲಕ್ಷ್ಮಣ, ಸಿರುಗುಪ್ಪ ತಾಲೂಕು ಛಲವಾದಿ ನೌಕರರ ಸಂಘ ಸೇರಿದಂತೆ ತಾಲೂಕಿನ ಎಲ್ಲಾ ಸಮುದಾಯದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪ್ರಗತಿಪರ ಸಂಘಟನೆಯ ಅಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಸಿದ್ದಯ್ಯ, ಚಂದ್ರಶೇಖರ್, ಭಗವಂತಪ್ಪ, ನಿಲಯದ ವಿದ್ಯಾರ್ಥಿಗಳು ಸಿರಿಗೇರಿ ಗ್ರಾಮ ಸೇರಿದಂತೆ ಸಿರುಗುಪ್ಪ ತಾಲೂಕು ವ್ಯಾಪ್ತಿಯ ಛಲವಾದಿ ಸಮುದಾಯದ ಹೆಚ್ಚಿನ ಸಂಖ್ಯೆಯ ಬಂಧುಗಳ ಹಾಗೂ ವೀರವನಿತೆ ಒನಕೆ ಓಬವ್ವ ಮಹಿಳಾ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸಿರುಗುಪ್ಪ ತಾಲೂಕು ಆಡಳಿತ ಹಾಗೂ ಛಲವಾದಿ ಮಹಾಸಭಾ ತಾಲೂಕು ಸಮಿತಿ, ಸಿರುಗುಪ್ಪ ಇವರ ಸಹಯೋಗದಲ್ಲಿ ನಗರದ ನೇತಾಜಿ ವ್ಯಾಯಾಮ ಶಾಲಾ ಆವರಣದಲ್ಲಿ ಆಯೋಜಿಸಿದ್ದ ‘ವೀರವನಿತೆ ಒನಕೆ ಓಬವ್ವ ಜಯಂತಿಯ ಉದ್ಘಾಟನೆ ಮಾಡಲಾಯಿತು.
ಒನಕೆ ಓಬವ್ವ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತರಲ್ಲ, ಅವರು ಇಡೀ ದೇಶವೇ ಹೆಮ್ಮೆವಡುವಂತಹ ವೀರನಾರಿ. ಅವರ ಜಯಂತಿಯನ್ನು ಕೇವಲ ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾತ್ರವಲ್ಲದೆ ಸಾರ್ವಜನಿಕರೆಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ.
– ಬಿ.ಎಂ. ಸತೀಶ್, ಹಿರಿಯ ಕಾಂಗ್ರೆಸ್ ಮುಖಂಡರು
ಸ್ವತಂತ್ರ ಬಂದು 79 ವರ್ಷ ಕಳೆದರೂ ಎಲ್ಲಾ ಸಮುದಾಯದವರು ರಾಜಕೀಯ ಪ್ರತಿನಿತ್ಯ ಅವಕಾಶ ಸಿಕ್ಕಿದ್ದು, ಆದರೆ, ನಮ್ಮ ಛಲವಾದಿ ಸಮುದಾಯದಿಂದ ಒಬ್ಬರೂ ಕೂಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಇಲ್ಲಿವರೆಗೂ ಅವಕಾಶ ನೀಡಿರುವುದಿಲ್ಲ, ಮುಂಬರುವ ದಿನಗಳಲ್ಲಿ ಸಿರುಗುಪ್ಪ ತಾಲೂಕಿನ ವ್ಯಾಪ್ತಿಯ ಎರಡು ಕ್ಷೇತ್ರಗಳಿಗೆ ನಮ್ಮ ಸಮುದಾಯದಿಂದ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯದ ರಾಜಕೀಯ ಪ್ರತಿನಿತ್ಯಗೆ ಅವಕಾಶ ನೀಡಬೇಕು.
– ಹೆಚ್. ಗಣೇಶ್, ಅಧ್ಯಕ್ಷರು, ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭಾ ಸಮಿತಿ.
ಓಬವ್ವ ರವರ ಜಯಂತಿಯನ್ನು ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ಮೂಲಕ ಅದ್ಧೂರಿಯಾಗಿ ನಡೆಯಿತು. ಇತ್ತೀಚೆಗೆ ಛಲವಾದಿ ಸಮಾಜದ ಎಸ್ಎಸ್ಎಲ್ಸಿ, ಪಿಯುಸಿ 75% ಮೇಲ್ಪಟ್ಟ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಶಿಕ್ಷಣದಲ್ಲಿ ಡಾಕ್ಟರೇಟ್ ಪದವಿ ಪಡೆದ ಛಲವಾದಿ ಸಮುದಾಯದ ಯುವ ಪ್ರತಿಭೆ, ಉಪನ್ಯಾಸಕ, ಪತ್ರಕರ್ತರು ಹಾಗೂ ಸಮಾಜ ಸೇವಕ ಡಾ. ಈಶ್ವರ್ ಸಿರಿಗೇರಿ ರವರಿಗೆ ಸನ್ಮಾನಿಸಿದರು.