ಅಧಿಕಾರಿಗಳ ನಿರ್ಲಕ್ಷದಿಂದ ತುಂಡಾಗಿ ನೆಲಕ್ಕೆ ಬಿದ್ದ ವಿದ್ಯುತ್ ಕಂಬಗಳು
ತಿಪಟೂರು ಸುದ್ದಿ: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಬಿಳಿಗೆರೆ ಗ್ರಾಮದಲ್ಲಿ, ಎಲ್ ಟಿ ಎ ಬಿ ಕೇಬಲ್ ವರ್ಕ್ ನಡೆಯುವಾಗ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಘಟನೆ ನಡೆದಿದೆ. ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ, ಅವೈಜ್ಞಾನಿಕ ಕಾಮಗಾರಿಯನ್ನು ಏಕಾಏಕಿ ಗುತ್ತಿಗೆದಾರರು ಮಧ್ಯಾಹ್ನ 1:00 ಸುಮಾರಿನಲ್ಲಿ ಅಲ್ಯೂಮಿನಿಯಂ ಕೇಬಲ್ ಬದಲು ಎಲ್ ಟಿ ಎ ಬಿ ಕೇಬಲ್ ಅಳವಡಿಸುವ, ಕಾಮಗಾರಿ ನಡೆಸುವ ಸಂದರ್ಭದಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದು ಧರೆಗೂರಳಿವೆ. …