ಕಡಬ ಹೋಬಳಿ ಸಿ.ಕುನ್ನಾಲ ಗ್ರಾಮದ ಗೌಸ್ ಫೀರ್ ಮನೆಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.
ಗುಬ್ಬಿ: ಭಾನುವಾರ ರಾತ್ರಿ ಗುಡುಗು ಮಿಂಚು ಸಿಡಿಲುಗಳೊಂದಿಗೆ ಸುರಿದ ಬಾರಿಮಳೆಗೆ ಹೊಲ,ಗದ್ದೆ, ತೋಟಗಳಲ್ಲಿ ನೀರು ಹರಿದಿರುವ ಜೊತೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿರುವುದು ಜನತೆಯಲ್ಲಿ ಸಂತೋಷವನ್ನು ಉಂಟು ಮಾಡಿದ್ದರೂ,ಅನೇಕ ಕಡೆ ಮನೆಗಳು,ಅಡಿಕೆ ಮತ್ತು ತೆಂಗಿನ ಮರಗಳು ಉರುಳಿವೆ. ಕಡಬ ಹೋಬಳಿ ಸಿ.ಕುನ್ನಾಲ ಗ್ರಾಮದ ಗೌಸ್ ಫೀರ್ ಮನೆಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಈರುಳ್ಳಿ ವ್ಯಾಪಾರಿಯಾಗಿದ್ದ ಅವರ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 3ಲಕ್ಷ ವೆಚ್ಚದ ಈರುಳ್ಳಿ ಸಂಪೂರ್ಣ ನೀರಿನಲ್ಲಿ ನೆಂದು ಹಾಳಾಗಿವೆ….