ಜಿಲ್ಲಾ ಸುದ್ದಿಗಳು
ವಿವಿಧ ಸಮಾಜಗಳ ಮುಖಂಡರಿಗೆ ದಸರಾ ಗೌರವಾರ್ಪಣೆ ತುಮಕೂರು ದಸರಾ ಸಮಿತಿಯಿಂದ ಸಮಾಜ ಸೇವಾ ಸಾಧಕರಿಗೆ ಸನ್ಮಾನ
ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದ ಶನಿವಾರದ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಮಾಜಗಳ ಮುಖಂಡರಿಗೆ ‘ಸಮಾಜ ಸಾಮರಸ್ಯ ಸುಧಾರಕರು’ ಎಂದು ಪ್ರಶಂಸಿಸಿ ಗೌರವಿಸಲಾಯಿತು. ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರ ಆವರಣದಲ್ಲಿ ನಡೆದಿರುವ ದಸರಾ ಉತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಸಮಿತಿಯ ಮುಖಂಡರು ನಾನಾ ಸಮಾಜಗಳ ಮುಖಂಡರನ್ನು ಸನ್ಮಾನಿಸಿ ಅಭಿನಂದಿಸಿದರು. ವಿವಿಧ ಸಮಾಜಗಳ ಮುಖಂಡರುಗಳಾದ ಟಿ.ಕೆ.ನರಸಿಂಹಮೂರ್ತಿ, ಜಿ.ಎಂ.ಸಣ್ಣಮುದ್ದಯ್ಯ, ತುಂಗೋಟಿ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಎಸ್.ಪುಟ್ಟೀರಪ್ಪ, ಮಹದೇವಯ್ಯ, ಪ್ರೊ.ಕೆ.ಚಂದ್ರಣ್ಣ, ಸೀತಾರಾಮ್, ಹೆಚ್.ಪಿ.ವಿಶ್ವಜ್ಞಾನಚಾರ್ಯ, ತಾಂಡವಮೂರ್ತಿ, ಸಕ್ಕರೆ ಕುಮಾರಸ್ವಾಮಿ, ಟಿ.ಹೆಚ್.ಶಿವಾನಂದ್,…
ಸಮೀಕ್ಷೆಯಲ್ಲಿ ‘ವೀರಶೈವ ಲಿಂಗಾಯಿತ’ ಎಂದು ಬರೆಸಿ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‍ನಿಂದ ಮನವಿ
ತುಮಕೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ವೀರಶೈವ ಲಿಂಗಾಯಿತ ಬಂಧುಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ನಮೂದಿಸಬೇಕು ಎಂದು ಜಗದುರು ಪಂಚಾಚಾರ್ಯ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮನವಿ ಮಾಡಿದ್ದಾರೆ. ಸಮೀಕ್ಷಾ ಕಾರ್ಯದಲ್ಲಿ ಗಣತಿದಾರರ ಪ್ರಶ್ನೆಗಳಿಗೆ ನಿಖರ ಮಾಹಿತಿಯನ್ನು ನೀಡುವುದು ಪ್ರಮುಖ ಜವಾಬ್ದಾರಿಯಾಗಿದೆ. ನಮ್ಮ ಸಮಾಜದ ಎಲ್ಲರೂ ಸಹ ನಾಡಿನ ಹಿರಿಯರು, ಗುರುಗಳು ನೀಡಿರುವ ಸಂದೇಶದಂತೆ ಧರ್ಮ- ಹಿಂದೂ, ಜಾತಿ-ವೀರಶೈವ ಲಿಂಗಾಯತ(ಅoಜe:ಂ-1524)…
ರೋಮಾಂಚಕಾರಿ ಮಲ್ಲಕಂಬ ಪ್ರದರ್ಶನ ತುಮಕೂರು ದಸರಾ ಸಮಿತಿ ಉತ್ಸವದ ಆಕರ್ಷಣೆ
ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದಲ್ಲಿ ಈ ನೆಲದ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನ ಆಕರ್ಷಣೀಯವಾಗಿತ್ತು. ನಗರದ ಶ್ರೀರಾಮ ಮಂದಿರದ ಆವರಣದಲ್ಲಿ ನಡೆದ ಮಲ್ಲಕಂಬ ಕ್ರೀಡೆ ಪ್ರದರ್ಶನದಲ್ಲಿ ಬೆಂಗಳೂರಿನ ಜಿಗಣಿ ವಿವೇಕಾನಂದ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಲ್ಲಕಂಬ ಮೇಲೆ ವಿವಿಧ ಕಸರತ್ತಿನ ರೋಮಾಂಚಕಾರಿ ಪ್ರದರ್ಶನ ನೀಡಿದರು. ಮಲ್ಲಕಂಬ ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಹೆಸರೇ ಸೂಚಿಸುವಂತೆ ಗರಡಿಯಲ್ಲಿ ಕಸರತ್ತು ಮಾಡುವ ಕುಸ್ತಿಪಟುಗಳು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಮಲ್ಲಕಂಬ ಪ್ರತ್ಯೇಕ…
ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯ ಅನುದಾನಿತ ಶಾಲಾಕಾಲೇಜು ಸಿಬ್ಬಂದಿ ಸಂಘದಿಂದ ಹೋರಾಟದ ಎಚ್ಚರಿಕೆ
ತುಮಕೂರು: ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಪ್ರಕಾರ ಸರ್ಕಾರ ರಾಜ್ಯದ ಎಲ್ಲಾ ಅನುದಾನಿತ ಶಾಲಾಕಾಲೇಜು ಸಿಬ್ಬಂದಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಲೇಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸುವುದಾಗಿ ರಾಜ್ಯ ಅನುದಾನಿತ ಶಾಲಾಕಾಲೇಜು ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಶನಿವಾರ ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ರಾಜ್ಯ ಅನುದಾನಿ ಶಾಲಾಕಾಲೇಜು ಪಿಂಚಣಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ ಹೋರಾಟದಲ್ಲಿ ತಾವು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಆಕ್ರೋಶಗೊಂಡು ಭಾವುಕರಾಗಿ ಹೇಳಿದರು….
ಸ್ತ್ರೀ ಶಕ್ತಿ ಮೆರೆಸುವ ಹಬ್ಬವೇ ದಸರಾ ಆಚರಣೆ: ಹೆಚ್.ಜಿ.ಚಂದ್ರಶೇಖರ್
ತುಮಕೂರು: ನಮ್ಮದು ಪುರುಷ ಪ್ರಧಾನ ಸಮಾಜ ಎಂದು ಮೇಲ್ನೋಟಕ್ಕೆ ಹೇಳಲಾದರೂ ಒಳನೋಟದಲ್ಲಿ ಸ್ತ್ರೀ ಪ್ರಧಾನವೇ. ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸ್ತ್ರೀ ಪಾತ್ರವೇ ಹೆಚ್ಚು. ದಸರಾ ಉತ್ಸವವೂ ಸ್ತ್ರೀ ಶಕ್ತಿ ಮೆರೆಯುವ ಹಬ್ಬ. ಹೀಗಾಗಿ ಶಕ್ತಿ ದೇವತೆಗಳ ಆರಾಧನೆಯೊಂದಿಗೆ ದಸರಾವನ್ನು ದೇಶದಲ್ಲಿ ವಿಶೇಷವಾಗಿ ಆಚರಿಸುತ್ತೇವೆ ಎಂದು ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹೇಳಿದರು. ನಗರದ ಶ್ರೀರಾಮ ಮಂದಿರದಲ್ಲಿ ನಡೆದಿರುವ ತುಮಕೂರು ದಸರಾ ಸಮಿತಿಯ ಶುಕ್ರವಾರದ ದಸರಾ ಉತ್ಸವದಲ್ಲಿ ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು,…
ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
ಪಾವಗಡ: ಪಳವಳ್ಳಿ ಕೆರೆಯಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಕೆರೆಯಲ್ಲಿ ಬೆಳೆದಿರುವ ನೂರಾರು ಗಿಡಮರಗಳು ಬೀಳುವ ಹಂತ ತಲುಪಿದ್ದರು ಸಹಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ. ತಾಲ್ಲೂಕಿನ ಪಳವಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ, ಹಾಡಹಗಲೇ ರಾಜಾರೋಷವಾಗಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಅನುಮತಿ ಪಡೆಯದೆ ಟ್ಯಾಕ್ಟರ್ ನಂಬರ್ KA 64 T 4103 ಹಾಗೂ ಜೆಸಿಬಿ ಬಳಸಿ ಸುಮಾರು…
ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ಶಾಸಕ ಕೆ.ಎನ್.ರಾಜಣ್ಣ
ಮಧುಗಿರಿ: ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ನಮ್ಮನಿಮ್ಮ ಬೆಡಗುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ನಮ್ಮ ಎರಡು ಜಾತಿಗಳಲ್ಲಿ ಮಾತ್ರ ಬೆಡಗುಗಳು ಒಂದೆಯಾಗಿರುವುದನ್ನು ಕಾಣಬಹುದು ಪುರಾತನ ಕಾಲದಲ್ಲಿ ನಾವೆಲ್ಲರೂ ಒಟ್ಟಿಗೆ ಬದುಕುತ್ತಿದ್ದೆವು ಈಗಲೂ ಅದನ್ನೆ ಮುಂದುವರೆಸಿಕೊಂಡು ಸಹಬಾಳ್ವೆ ನಡೆಸೋಣ ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು. ಮಧುಗಿರಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿ ತಾಲ್ಲೂಕಿನ ಪೋಲೆನಹಳ್ಳಿ ಹಾಗೂ ಪಾವಗಡದ ಬೆಳ್ಳಿಬಟ್ಲು ಗ್ರಾಮಗಳಲ್ಲಿ ನಡೆದ ದಲಿತರ ಕಗ್ಗೊಲೆ ಘಟನೆಗಳನ್ನು ಖಂಡಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ,…
ಮನೆಗಳಲ್ಲಿ ಗೊಂಬೆ ಅಲಂಕಾರ ಮಾಡಿದವರಿಗೆ ಬಹುಮಾನ
ತುಮಕೂರು ದಸರಾ ಸಮಿತಿಯಿಂದ ಗೊಂಬೆಗಳ ಪ್ರದರ್ಶನ ಸ್ಪಧೆ ತುಮಕೂರು: ಈ ನವರಾತ್ರಿಯಲ್ಲಿ ಮನೆಗಳಲ್ಲಿ ಗೊಂಬೆ ಅಲಂಕಾರ ಮಾಡಿರುವವರಿಗೆ ತುಮಕೂರು ದಸರಾ ಸಮಿತಿ ವಿಶೇಷ ಬಹುಮಾನ ಪಡೆಯುವ ಅವಕಾಶ ನೀಡಿದೆ. ದಸರಾದ ಸಾಂಪ್ರದಾಯಕ ಗೊಂಬೆ ಪ್ರದರ್ಶನವನ್ನು ಪ್ರೋತ್ಸಾಹಿಸಲು ಹೊಸ ತಲೆಮಾರಿನವರಿಗೆ ಅದರ ವಿಶೇಷತೆ ಪರಿಚಯಿಸಲು ಈ ಬಾರಿ ಮನೆಗಳಲ್ಲಿ ಬೊಂಬೆ ಅಲಂಕಾರ ಮಾಡಿರುವವರಿಗೆ ಸಮಿತಿಯ ದಸರಾ ಉತ್ಸವದ ಸಮಾರಂಭಕ್ಕೆ ಆಹ್ವಾನಿಸಿ ಬಹುಮಾನ ನೀಡಲಾಗುವುದು ಎಂದು ಈ ಉಪಸಮಿತಿಯ ರೇಖಾ ಮಹೇಶ್ ಹೇಳಿದ್ದಾರೆ. ಗೊಂಬೆ ಪ್ರದರ್ಶನದ ಸ್ಪರ್ಧೆಯಲ್ಲಿ ಆಕಷರ್ಣೀಯವಾಗಿ…
ಜಿಎಸ್‍ಟಿ ದರ ಇಳಿಕೆ: ಸಚಿವ ಸೋಮಣ್ಣ ಅಭಿಯಾನ ಗುಲಾಬಿ ಹೂ ಕೊಟ್ಟು ಹೊಸ ತೆರಿಗೆ ಬಗ್ಗೆ ಸಾರ್ವಜನಿಕ ಪ್ರಚಾರ
ತುಮಕೂರು: ಕೇಂದ್ರ ಸರ್ಕಾರದ ಜಿಎಸ್‍ಟಿ ಸುಧಾರಣೆ ನಿರ್ಧಾರವು ಭಾರತದ ಹಿತದೃಷ್ಟಿಯಿಂದ ನಿರಂತರ ಸುಧಾರಣೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಸಕ್ರಿಯ ಬದ್ಧತೆಯನ್ನು ತೋರಿಸುತ್ತದೆ. ಸೋಮವಾರದಿಂದ ದೇಶಾದ್ಯಂತ ಜಾರಿಯಾಗಿರುವ ಹೊಸ ಜಿಎಸ್‍ಟಿ ಪದ್ದತಿಯಿಂದ ಜನಸಾಮಾನ್ಯರಿಗೆ ಬಹಳಷ್ಟು ಸಹಾಯವಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಸುಧಾರಿತ ಜಿಎಸ್‍ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಸಚಿವ ಸೋಮಣ್ಣ ನಗರದ ವಿವಿಧೆಡೆ ಜಿಎಸ್‍ಟಿ ಸುಧಾರಣೆಗಳ ಪ್ರಚಾರ ಅಭಿಯಾನ ನಡೆಸಿ ಸಾರ್ವಜನಿಕರನ್ನು ಭೇಟಿ ಮಾಡಿ ಗುಲಾಬಿ…
ರಂಗಗೀತೆ ಹಾಡಿ ರಂಜಿಸಿದ ಸಚಿವ ಡಾ.ಪರಮೇಶ್ವರ್ 11 ದಿನಗಳ ರಂಗ ದಸರಾ ನಾಟಕೋತ್ಸವಕ್ಕೆ ಸಚಿವರಿಂದ ಚಾಲನೆ
ತುಮಕೂರು: ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಾಟಾಗಿರುವ 11 ದಿನಗಳ ತುಮಕೂರು ರಂಗ ದಸರಾ ನಾಟಕೋತ್ಸವವನ್ನು ಸೋಮವಾರ ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಕುರುಕ್ಷೇತ್ರದ ಶ್ರೀಕೃಷ್ಣ ಪಾತ್ರದ ರಂಗಗೀತೆ ಹಾಡಿ ರಂಜಿಸಿದರು. ಸಚಿವರ ರಂಗಗೀತೆಗೆ ಮನಸೋತ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಆನಂದಿಸಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ಸಚಿವವ ಡಾ.ಪರಮೇಶ್ವರ್, ಅನೇಕ ಕಲಾವಿದರನ್ನು ನಾಡಿಗೆ ಕೊಡುಗೆ…