ಮಲೇಶಿಯಾ ವಿವಿ ಜೊತೆ ಸಿದ್ಧಾರ್ಥ ಮ್ಯಾನೇಜ್‌ಮೆಂಟ್ ಸ್ಟಡೀಸ್ ಒಡಂಬಡಿಕೆ

ಶೈಕ್ಷಣಿಕ -ಸಂಶೋಧನೆ ಕ್ಷೇತ್ರದಲ್ಲಿ ಪರಸ್ಪರ ವಿನಿಮಯ: ಮಲೇಶಿಯಾ ವಿವಿ ಜೊತೆ ಸಿದ್ಧಾರ್ಥ ಮ್ಯಾನೇಜ್‌ಮೆಂಟ್ ಸ್ಟಡೀಸ್ ಒಡಂಬಡಿಕೆ ತುಮಕೂರು: ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದ ಉನ್ನತ ಶಿಕ್ಷಣವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (SSIBM) ಮಲೇಶಿಯಾದ ಐಎನ್‌ಟಿಐ  ವಿಶ್ವವಿದ್ಯಾಲಯದೊಂದಿಗೆ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ. ಮಲೇಶಿಯಾದ ಕೌಲಾಲಂಪುರ್‌ದ ಯುಸಿಎಸ್‌ಐ ವಿಶ್ವವಿದ್ಯಾಲಯದಲ್ಲಿನ ಕ್ಯಾಂಪಸ್ ಹಮ್ಮಿಕೊಳ್ಳಲಾದ ೫ ದಿನಗಳ ಜಾಗತಿಕ ಶೈಕ್ಷಣಿಕ…

Read More

ತುಮಕೂರು ದಸರಾ ಉತ್ಸವ 2025 ತುಮಕೂರು ದಸರಾ ವಿಶೇಷ ಉಚಿತ ಅಂಬಾರಿ ಬಸ್ ಪ್ರಯಾಣ

ತುಮಕೂರು :ಸನ್ಮಾನ್ಯ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ತುಮಕೂರು ದಸರಾ ಉತ್ಸವ ಸಭೆಯಲ್ಲಿ ತುಮಕೂರು ದಸರಾ ಉತ್ಸವವನ್ನು ಅತ್ಯಂತ ಗೌರವಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ದಿನಾಂಕ: 22.09.2025 ರಿಂದ 02.10.2025 ರವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕೆಳಕಂಡ ಮಾರ್ಗದ ಅಂಬಾರಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸನ್ಮಾನ್ಯ ಡಾ|| ಜಿ. ಪರಮೇಶ್ವರ, ಮಾನ್ಯ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ರವರು…

Read More

ಬಲಿಜರು ತಪ್ಪದೇ 9ನೇ ಕಾಲಂನಲ್ಲಿ ಬಲಿಜ ಎಂದು ನಮೂದಿಸಿ’

ಸಮಾಜ ಬಾಂಧವರಿಗೆ ಜಿಲ್ಲಾ ಬಲಿಜ ಸಂಘದ ಮುಖಂಡರ ಮನವಿ ತುಮಕೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪೂರಕವಾಗಿ ಈ ತಿಂಗಳ 22ರಿಂದ ಆರಂಭವಾಗುವ ಜಾತಿ ಜನಗಣತಿಯಲ್ಲಿ ಜಿಲ್ಲೆಯ ಬಲಿಜ ಸಮಾಜದವರು ತಪ್ಪದೇ ನಿಖರ ಮಾಹಿತಿ ನೀಡಿ 9ನೇ ಕಾಲಂನಲ್ಲಿ ಕೋಡ್ ನಂ. ಎ-0120ರಲ್ಲಿ ಬಲಿಜ ಎಂಬುದಾಗಿ ನಮೂದಿಸಬೇಕು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ ಹಾಗೂ ಖಜಾಂಚಿ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮನವಿ ಮಾಡಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯ ಬಲಿಜ ಸಂಘದ…

Read More

22ರಿಂದ ನಗರದಲ್ಲಿ ರಂಗ ದಸರಾ ನಾಟಕೋತ್ಸವ 11 ದಿನಗಳ ನಾಟಕೋತ್ಸವದಲ್ಲಿ 15 ನಾಟಕಗಳ ಪ್ರದರ್ಶನ

ತುಮಕೂರು: ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಸಹಯೋಗದಲ್ಲಿ ಈ ತಿಂಗಳ 22ರಿಂದ 11 ದಿನಗಳ ಕಾಲ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮಾಸ್ಟರ್ ಹಿರಣ್ಣಯ್ಯ ರಂಗವೇದಿಕೆಯಲ್ಲಿ ತುಮಕೂರು ರಂಗ ದಸರಾ ನಾಟಕೋತ್ಸವ ಏರ್ಪಾಟಾಗಿದೆ. ಈ ಸಂಬಂಧ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣನವರ ಅಧ್ಯಕ್ಷತೆಯಲ್ಲಿ ಕಲಾವಿದರು ಶನಿವಾರ ಸಭೆ ಸೇರಿ ಕಾರ್ಯಕ್ರಮಗಳ ಸಿದ್ಧತೆ ಕುರಿತು ಚರ್ಚೆ ನಡೆಸಿದರು.   ಹಿರಿಯ ಕಲಾವಿದ ಎಂ.ವಿ.ನಾಗಣ್ಣ ಮಾತನಾಡಿ, ಇದೇ ಮೊದಲ ಬಾರಿಗೆ…

Read More

ವೈಸಿರಿ ಕಾಲೇಜಿನಲ್ಲಿ ಸೈಬರ್ ಭದ್ರತೆ ಕುರಿತು ವಿಶೇಷ ಉಪನ್ಯಾಸ

ತುಮಕೂರು, : ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಪ್ರಜ್ಞಾವಂತ ಜನರೇ ಸೈಬರ್ ಅಪರಾಧ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಅಥವಾ ಆನ್‍ಲೈನ್‍ನಲ್ಲಿ ಯಾವುದೇ ವಿಚಾರವನ್ನು ಹುಡುಕುವಾಗ ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಸೈಬರ್ ವಂಚಕರ ಮೋಸದ ಬಲೆಗೆ ಬೀಳುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಎಸ್‍ಇಎ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಸಿಎಸ್‍ಇ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಕುಮಾರ್ ಪಿ.ಆರ್ ಅವರು ಹೇಳಿದರು. ನಗರದ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್…

Read More

ಉಪಪಂಗಡ ಹಲವಿದ್ದರೂ ಒಕ್ಕಲಿಗರೆಲ್ಲಾ ಒಂದೇ’ ಜಾತಿ ಜನಗಣತಿಯಲ್ಲಿ ಒಕ್ಕಲಿಗ ಎಂದು ನಮೂದಿಸಲು ಸ್ವಾಮೀಜಿಗಳ ಕರೆ

ತುಮಕೂರು: ಜಾತಿ ಜನಗಣತಿ ಸಂದರ್ಭದಲ್ಲಿ ಎಲ್ಲಾ ಒಕ್ಕಲಿಗರ ಉಪ ಪಂಗಡಗಳನ್ನು ಬಿಟ್ಟು ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು. ಆ ಮೂಲಕ ಒಕ್ಕಲಿಗರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸರ್ಕಾರದಿಂದ ಹಕ್ಕು, ಸೌಕರ್ಯ ಪಡೆಯಲು ಒಕ್ಕಲಿಗರು ಸಂಘಟಿತರಾಗಿ ಜಾಗೃತರಾಗಬೇಕು ಎಂದು ಒಕ್ಕಲಿಗ ಸಮಾಜದ ಸ್ವಾಮೀಜಿಗಳು, ವಿವಿಧ ಮುಖಂಡರು ಮನವಿ ಮಾಡಿದರು. ಕೇಂದ್ರ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಗುರರುವಾರ ಹಮ್ಮಿಕೊಂಡಿದ್ದ ಒಕ್ಕಲಿಗರ ಜಾತಿ ಜನಗಣತಿ ಜಾಗೃತಿ ಸಭೆಯಲ್ಲಿ ಮಾತನಾಡಿದ…

Read More

ಪ್ರಧಾನಿ ಮೋದಿಯವರ ಜನ್ಮದಿನಾಚರಣೆ:  ಆರೋಗ್ಯ ಶಿಬಿರ, ಮಕ್ಕಳಿಗೆ ಪುಸ್ತಕ ವಿತರಣೆ, ಗಿಡ ನೆಡುವ ಕಾರ್ಯಕ್ರಮ

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಅಂಗವಾಗಿ ಈ ತಿಂಗಳ 17ರಂದು ಬುಧವಾರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ನಗರದಲ್ಲಿ ವಿವಿಧ ಸಮಾಜ ಸೇವಾ ಹಾಗೂ ಆರೋಗ್ಯ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ನಾಯಕ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ವಿವಿಧ ದೇಶಗಳಲ್ಲೂ ಆಚರಣೆ ಮಾಡಲಾಗುತ್ತಿದೆ. ಹಬ್ಬದ ರೀತಿಯಲ್ಲಿ ಮೋದಿಯವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಬೆಳಿಗ್ಗೆ 9.30ಕ್ಕೆ ನಗರದ ಸಂಸದರ ಕಚೇರಿ…

Read More

ನಿರೂಪಕರ ಜ್ಞಾನಮಟ್ಟದಿಂದ ಆ ಸುದ್ದಿವಾಹಿನಿಯ ಘನತೆ ನಿರ್ಧಾರವಾಗಿರುತ್ತದೆ” ಡಾ”ಎಂ, ಎಸ್, ರವಿಪ್ರಕಾಶ್

  ತುಮಕೂರು: ನಿರುಪಕರು ಒಂದು ಟಿವಿ ವಾಹಿನಿಯ ಪ್ರತಿನಿಧಿಯಂತೆ ಇದ್ದು ಸಮಾಜದಲ್ಲಿನ ಒಳಿತು ಕೆಡಕುಗಳ ಸುದ್ದಿಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸುವಂತಹ ಕಾರ್ಯವನ್ನು ನಿರ್ವಹಿಸುತ್ತಾರೆ. ಇವರ ಜ್ಞಾನಮಟ್ಟದಿಂದ ಆ ವಾಹಿನಿಯ ಘನತೆ ನಿರ್ಧಾರವಾಗಿರುತ್ತದೆ ಎಂದು ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಆಯೋಜಿಸಲಾಗಿದ್ದ 3 ದಿನಗಳ ಆ್ಯಂಕರಿಂಗ್ – ಸುದ್ದಿ ನಿರೂಪಣಾ ಕಾರ್ಯಗಾರವನ್ನು ಉಧ್ಘಾಟಿಸಿ ಮಾತನಾಡಿದ ಅವರು…

Read More

ಸಂವಿಧಾನದ ಆಶಯವನ್ನು ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಅರಿಯಬೇಕುಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು

ತುಮಕೂರು: ಸಂವಿಧಾನದ ಆಶಯಗಳನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಅರಿತುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವವು ಕೇವಲ ಮತದಾನಕ್ಕೆ ಸೀಮಿತವಾಗಿರದೆ, ಜನಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಒತ್ತಿ ಹೇಳುತ್ತದೆ. ಪ್ರತೀ ನಾಗರಿಕನೂ ಪ್ರಜಾಪ್ರಭುತ್ವದ ಬಲವರ್ಧನೆಗೆ ತನ್ನ ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದರು….

Read More

2006 ರಿಂದ 2009 ನೇ ಸಾಲಿನ ಬಿ.ಬಿ.ಎಂ. ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮಾಗಮ ಕಾರ್ಯಕ್ರಮ

ತುಮಕೂರು : ಪಾವಗಡ ತಾಲ್ಲೂಕಿನ ಶ್ರೀಮತಿ ಮತ್ತು ಶ್ರೀ ವೈ.ಇ.ಆರ್. ಪ್ರಥಮ ದರ್ಜೆ ಕಾಲೇಜಿನ 2006 ರಿಂದ 2009 ನೇ ಸಾಲಿನ ಬಿ.ಬಿ.ಎಂ. ವಿದ್ಯಾರ್ಥಿಗಳಿಂದ 16 ವರ್ಷಗಳ ನಂತರ ಗುರುವಂದನೆ ಹಾಗೂ ಸ್ನೇಹ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುರುಗಳಿಗೆ ವಿಶೇಷ ಪುಷ್ಪನಮನ, ಪುಷ್ಪದಿಂದಲೇ ಅವರುಗಳನ್ನು ವೇದಿಕೆಯವರೆಗೆ ಭವ್ಯ ಸ್ವಾಗತವನ್ನು ನೀಡುವುದರ ಮೂಲಕ ವಿದ್ಯೆ ಕಲಿಸಿದ ಗುರುಗಳಿಗೆ ವಿಶೇಷ ಗೌರವವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹೆಚ್.ಓ.ಡಿ ಆದ ಮಹಾಲಕ್ಷ್ಮೀ ಅವರು ವಹಿಸಿದ್ದರು.  …

Read More
error: Content is protected !!