ಪ್ರತಿಭಟನಾಕಾರರ ಮನವಿಯನ್ನು ಆಲಿಸಿ, ಕೂಡಲೇ ನೂತನ ಬೋರ್ವೆಲ್ ಕೊರೆಸಿದ ಗುಬ್ಬಿ ತಾಲೂಕು ಆಡಳಿತ
ಗುಬ್ಬಿ ತಾಲೊಕು ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರೆಹಳ್ಳ ಕಾವಲ್ ನಲ್ಲಿ ಕಳೆದ 01 ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಕೊಳವೆ ಬಾವಿಯಲ್ಲಿ ನೀರು ಬರದೇ ಇದ್ದ ವೇಳೆ ರೀ ಬೋರ್ವೆಲ್ ಕೊರೆಸಿದರೂ ಸಹ ನೀರು ಬರುತ್ತಿರಲಿಲ್ಲ. ಕೊರೆದಿದ್ದ ಕೊಳವೆ ಬಾವಿಯಲ್ಲಿ ಯಂತ್ರೋಪಕರಣಗಳು ಕಳಚ ಬಿದ್ದ ಕಾರಣ ಕುಡಿಯುವ ನೀರಿಗೆ ಬಿದರೆಹಳ್ಳ…