ತೆಂಗಿನ ಬೆಳೆಗೂ ಸರಿಯಾದ ಪೋಷಕಾಂಶ ಒದಗಿಸಿ : ಟಿ.ಬಿ. ಜಯಚಂದ್ರ.
ತೆಂಗು ಬೆಳೆಯನ್ನು ಮೊದಲಿನಿಂದಲೂ ಯಾವುದೇ ರೀತಿಯ ಗೊಬ್ಬರವನ್ನು ಬಳಸದೆ ಬೆಳೆಸಿಕೊಂಡು ಬರಲಾಗುತ್ತಿದೆ. ಆದರೆ ಇತರೆ ಬೆಳೆಗಳಿಗೆ ನೀಡುವಂತೆ ತೆಂಗಿನ ಬೆಳೆಗೂ ಸಹ ಅವಶ್ಯಕ ಪೋಷಕಾಂಶಗಳನ್ನು ಒದಗಿಸಬೇಕು ಎಂದು ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅಭಿಪ್ರಾಯ ಪಟ್ಟರು. ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಶಿರಾ ತಾಲೂಕಿನ ಮುದುಗೆರೆ ತೋಟಗಾರಿಕಾ ಕ್ಷೇತ್ರದಲ್ಲಿಂದು ಆಯೋಜಿಸಿದ್ದ ತೆಂಗು ಸಂಯೋಜಿತ ಬೇಸಾಯ ಯೋಜನೆಯಡಿಯಲ್ಲಿ ತೆಂಗು ಬೆಳೆಗಾರರಿಗೆ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು…