ಪ್ರಮುಖ ಸುದ್ದಿಗಳು
ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ
ಸಾಮಾಜಿಕ ಕ್ರಾಂತಿ ಮೂಲಕ ಸಮಾಜದ ಮೇಲೆ ಪ್ರಭಾವದ ಮೇರು ಶಿಖರ: ಕುಲಪತಿ ಪ್ರೊ. ಜಯಕರ ಬೆಂಗಳೂರು: ಬಿ. ಬಸವಲಿಂಗಪ್ಪನವರು ದಮನಿತರು, ಶೋಷಿತ ಸಮುದಾಯಗಳ ಬದುಕಿನ ದಿಕ್ಕನ್ನು ಬದಲಿಸಿದವರು. ಅವರ ಕುರಿತು ಶೈಕ್ಷಣಿಕ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸುವುದು ಅಗತ್ಯವಾಗಿದೆಂದು ಬಿ.ಬಸವಲಿಂಗಪ್ಪನವರ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಂಯೋಜಕರಾದ ಪ್ರೊ.ಬಿ.ಎಲ್.ಮುರುಳೀಧರ್ ಅಭಿಮತ ವ್ಯಕ್ತಪಡಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಬಿ.ಬಸವಲಿಂಗಪ್ಪನವರ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕ್ರಾಂತಿಕಾರಿ ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿ….
ಸಮಾಜ ಸೇವಕ ಬಿ. ಶರಣಬಸವ ಅವರಿಗೆ ಚಿತ್ರಸಂತೆ ‘ರಾಜ್ಯೋತ್ಸವ ಪುರಸ್ಕಾರ’ ಪ್ರಶಸ್ತಿ ಪ್ರದಾನ
ಕನ್ನಡ ನಾಡಿನ ಹೆಮ್ಮೆಯ ಸಾಧಕ: ಬಿ. ಶರಣಬಸವ ಅವರಿಗೆ ಚಿತ್ರಸಂತೆ ‘ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಬೆಂಗಳೂರು: ಗುರುವಾರ ಸಂಜೆ ನಡೆದ ಹೈಡ್ ಪಾರ್ಕ್ ಅಪಾರ್ಟ್ ಹೋಟೆಲ್ ನಲ್ಲಿ ಚಿತ್ರಸಂತೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ 2025 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರು, ರಾಜ್ಯೋತ್ಸವ ಪುರಸ್ಕಾರ 2025 ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದುಗುಪ್ಪ ಗ್ರಾಮದ ನಿವಾಸಿ ಪ್ರಸ್ತುತ ವಿಸಿಎನ್ ಟಿವಿಯ ವ್ಯವಸ್ಥಾಪಕರು ಮತ್ತು ಸಮಾಜ ಸೇವಕರು ಇವರು ಕಳೆದ…
ಶಿಕ್ಷಣ ಕೇವಲ ಹಣ ಸಂಪಾದನೆ ಮಾಡುವ ಮಾರ್ಗವಲ್ಲ ಬದಲಾಗಿ ವ್ಯಕ್ತಿಯ ಜ್ಞಾನವನ್ನು ಬಲಪಡಿಸಬೇಕಿದೆ : ಗವಿಮಠದ ಶ್ರೀಗಳು
ಚೇಳೂರು : ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆ ಮಾಡುವ ಕಾಯಕವಾಗದೇ ಮಕ್ಕಳ ಬೌಧಿಕ ಮತ್ತುವ ಮಾನಸಿಕ ಜ್ಞಾನವನ್ನು ಬಲಪಡಿಸುವ ಮಾರ್ಗವಾದಾಗ ಮಾತ್ರ ಶಿಕ್ಷಣದ ಮೂಲ ಗುರಿಯನ್ನು ತಲುಪಿಸಲು ಸಾಧ್ಯ ಬೆಟ್ಟದಹಳ್ಳಿ ಗವಿಮಠದ ಶ್ರೀ ನಿ.ಪ.ಸ್ವ ಚಂದ್ರಶೇಖರ ಸ್ವಾಮೀಜಿಗಳು ತಿಳಿಸಿದರು. ಅವರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸಂಸ್ಕೃತ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಪೋಷಕರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸುಮಾರು 35 ವರ್ಷಗಳಿಂದ ಮಕ್ಕಳ ಬೌಧಿಕ ಹಾಗೂ ಶಿಕ್ಷಣಿಕ ಚಟುವಟಿಕೆಗಳ ಮೂಲಕ…
ಜಾಗತೀಕರಣ ಯುಗದಲ್ಲಿ ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆ ಅತ್ಯಗತ್ಯ
ಗುಬ್ಬಿ : ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಲು ಮತ್ತು ಹೊಸ ಮಾರುಕಟ್ಟೆಗಳನ್ನು ಗುರುತಿಸಲು ಸಹಾಯ ಮಾಡುವ ಕಾರ್ಯವನ್ನು ಅಪೆಡಾ ಮಾಡುತ್ತಿದೆ ಎಂದು ಅಪೆಡಾ ವಲಯ ಸಹಾಯಕ ವ್ಯವಸ್ಥಾಪಕ ಯು.ಧರ್ಮರಾವ್ ತಿಳಿಸಿದರು. ತಾಲ್ಲೂಕಿ ಸಿ.ಎಸ್ ಪುರ ಹೋಬಳಿಯ ನೆಟ್ಟೇಕೆರೆ ಗ್ರಾಮದಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ) ಮತ್ತು ತೋಟಗಾರಿಕೆ ಇಲಾಖೆ ತುಮಕೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಡಿಕೆ ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಸಮಗ್ರ…
ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ
ತುಮಕೂರು :- ಜಿಲ್ಲೆಯ ಲಂಬಾಣಿ (ಬಂಜಾರ) ಸಮುದಾಯ ಭವನದ ಕನಸು ಅನೇಕ ವರ್ಷಗಳ ಹೋರಾಟದ ಫಲವಾಗಿ, ತುಮಕೂರು ನಗರದ ಸರಸ್ವತಿಪುರಂನಲ್ಲಿ ಬೃಹತ್ ಮತ್ತು ಭವ್ಯವಾದ ಜಿಲ್ಲಾ ಬಂಜಾರ ಭವನ ನಿರ್ಮಾಣಗೊಳ್ಳುವುದರೊಂದಿಗೆ ಸಕಾರಗೊಂಡಿದೆ. ಸುಸಜ್ಜಿತ ಸಮುದಾಯ ಭವನ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯಲ್ಲಿ ತನ್ನದೆಯಾದ ಆದ ವೈಶಿಷ್ಟತೆ ಹೊಂದಿರುವ ಲಂಬಾಣಿ ಸಮುದಾಯದ ಬುಡಕಟ್ಟು ಸಂಸ್ಕøತಿ, ಕಲೆ, ಪರಂಪರೆ ಮತ್ತು ಐತಿಹಾಸಿಕ ಹೆಗ್ಗಳಿಕೆಯನ್ನು ಉಳಿಸಿ ಬೆಳೆಸಲು ಭವನವು ಭದ್ರ ನೆಲೆಯಾಗಲಿದೆ. ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬಂಜಾರ ಸಮುದಾಯವು ವಿಶಿಷ್ಟ ಸ್ಥಾನಪಡೆದುಕೊಂಡಿದೆ. ಸಮುದಾಯದ…
ಸವಿತಾ ಸಮಾಜದ ಅವಿವಾಹಿತರ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ.
ತುಮಕೂರು : ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ಸವಿತಾ ಸಮಾಜ ಜಿಲ್ಲಾ ಸಂಪರ್ಕ ಕೇಂದ್ರದ ವತಿಯಿಂದ ಇಂದು ಸವಿತಾ ಸಮಾಜದ ಅವಿವಾಹಿತರ ಅನುಕೂಲಕಕ್ಕಾಗಿ ವಧು-ವರರ ಅನ್ವೇಷಣಾ ಕೇಂದ್ರವನ್ನು ಇಂದು ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್ವೆಲ್ ರಂಗನಾಥ್ ಅವರ ನೇತೃತ್ವದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಕಟ್ವೆಲ್ ರಂಗನಾಥ್ರವರು ಮಾತನಾಡುತ್ತಾ ಪ್ರಸ್ತುತದ ದಿನಗಳಲ್ಲಿ ನಮ್ಮ ಸಮಾಜದಲ್ಲಿ ವಿವಾಹದ ವಯಸ್ಸಿಗೆ ಬಂದಿರುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಜಾತಕ ಹೊಂದಾಣಿಕೆ, ಪರಸ್ಪರ ಅನ್ವೇಷಣೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದೆ, ಸರಿಯಾದ ಜೋಡಿ ಸಿಗುವಲ್ಲಿ…
ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ಆರ್ಥಿಕ ನೆರವು
ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ತಿಪಟೂರಿನ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಮತ್ತು ಪತ್ರಕರ್ತ ಬಿ.ಟಿ.ಕುಮಾರ್ ನೆರವು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಮತ್ತು ಆಕಸ್ಮಿಕ ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ತಿಪಟೂರಿನ ಕೆಪಿಸಿಸಿ ಸದಸ್ಯ ವಿ.ಯೋಗೇಶ್ 25.000/-ರೂಗಳು ಮತ್ತು ಪತ್ರಕರ್ತ ಬಿ.ಟಿ.ಕುಮಾರ್ 5,000/-ರೂಗಳು ಆರ್ಥಿಕ ನೆರವು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ಸುಮಾರು 5 ತಿಂಗಳಿಂದ ಇದ್ದಕ್ಕಿದ್ದಂತೆ ದೃಷ್ಟಿ ಹೀನತೆ ಸಮಸ್ಯೆ ಎದುರಾಗಿ ಕಣ್ಣು ಕಾಣದ…
ನಶ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್
ಗುಬ್ಬಿ : ತಾಲೂಕು ಕೇಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮದ್ಯಾಹ್ನ ನಡೆದ ನಶ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಾದಕ ವಸ್ತುಗಳ ದಾಸರಾಗಿದ್ದು, ಇದರ ಅತಿಯಾದ ಬಳಕೆಯಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ತೊಂದರೆಗಳನ್ನು ಎದುರಿಸುತ್ತಿದ್ದು, ಜೀವನವನ್ನೇ ದುರಂತದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು. 2019 ರ ಅಂಕಿ ಅಂಶಗಳ ಮಾಹಿತಿ ಪ್ರಕಾರ ಭಾರತ ದೇಶದಲ್ಲಿ ಸುಮಾರು 7.2…
ಸಂವಿಧಾನ ಪಿತಾಮಹನಿಗೆ ಗೌರವ ನಮನ
ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿ ನಿಬ್ಬಾಣ ದಿನದ ಗೌರವ ಸಮರ್ಪಣೆ ತುಮಕೂರು: ಭಾರತ ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಡಾ. ಬಿ.ಆರ್ ಅಂಬೇಡ್ಕರ್. ಎಲ್ಲರೂ ಅವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗೋಣ ಎಂದು ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್, ಕೆ ನಿಧಿಕುಮಾರ್ ಅವರು…
ಅಬಕಾರಿ ಅಧಿಕಾರಿಗಳ ವಿರುದ್ಧ ಸುರೇಶ್ಗೌಡ ಗರಂ: ತನಿಖೆಗೆ ಒತ್ತಾಯ
ತುಮಕೂರು: ಅಬಕಾರಿ ಅಧಿಕಾರಿಗಳು ತುಮಕೂರು ತಾಲ್ಲೂಕಿನಲ್ಲಿ ಕಾನೂನು ಬಾಹೀರವಾಗಿ 29 ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಬಿ.ಸುರೇಶ್ಗೌಡರು ಒತ್ತಾಯಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತುಮಕೂರು ತಾಲ್ಲೂಕು ಮಟ್ಟದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕರು, ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ. ಯಾವ ನಿಯಮದಡಿಯಲ್ಲಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿದಿರಿ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ…