ಇತಿಹಾಸದ ಮರು ಸೃಷ್ಟಿಯತ್ತ ದಿಟ್ಟ ಹೆಜ್ಜೆ: ಮಹೇಶ್ ಪದವಿ ಪೂರ್ವ ಕಾಲೇಜು
ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟ ಶೈಕ್ಷಣಿಕ ಸುಧಾರಣೆಯಿಂದ ತುಮಕೂರು ಜಿಲ್ಲೆಯಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಇತಿಹಾಸ ಸೃಷ್ಟಿಸಿದ ಮಹೇಶ್ ಪಿಯು ಕಾಲೇಜು ಮತ್ತೆ ಇತಿಹಾಸದ ಮರು ಸೃಷ್ಟಿಯತ್ತ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. 2012 ರಲ್ಲಿ ಕೇವಲ 173 ವಿದ್ಯಾರ್ಥಿಗಳ ಮೂಲಕ ಪ್ರಾರಂಭವಾದ ಮಹೇಶ್ ಪಿಯು ಕಾಲೇಜು 2019ರಲ್ಲಿ ತುಮಕೂರು ಜಿಲ್ಲೆಯಲ್ಲಿಯೇ 1200 ವಿದ್ಯಾರ್ಥಿಗಳನ್ನೊಳಗೊಂಡ ಎರಡು ಶಾಖೆಗಳು ಶೈಕ್ಷಣಿಕ ಕ್ರಾಂತಿಯನ್ನು ಮಾಡಿತು. ತದನಂತರದಲ್ಲಿ ಗುಪ್ತಗಾಮಿನಿಯಂತೆ ತನ್ನ ಸೇವೆಯನ್ನು ಮಾಡುತ್ತಾ…