ಪ್ರಮುಖ ಸುದ್ದಿಗಳು
ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ನಗರಕ್ಕೆ ಆಗಮನ
15-16ರಂದು ಸ್ವಾಮಿಯ ವೈಭವದ ಶೋಭಾಯಾತ್ರೆ, ಕಲ್ಯಾಣೋತ್ಸವ ತುಮಕೂರು: ಲೋಕಲ್ಯಾಣಾರ್ಥ ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿ ಈ ತಿಂಗಳ 15 ಮತ್ತು 16ರಂದು ನಗರದಲ್ಲಿ ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿಯ ಶೋಭಾಯಾತ್ರೆ ಹಾಗೂ ಕಲ್ಯಾಣೋತ್ಸವವನ್ನು ವೈಭವದಿಂದ ಹಮ್ಮಿಕೊಂಡಿದೆ. ಗುರುವಾರ ನಗರದ ಚಿಕ್ಕಪೇಟೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಅಮರ್‍ನಾಥ್, ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ಶೋಭಾಯಾತ್ರೆ ಮತ್ತು ಕಲ್ಯಾಣೋತ್ಸವದ ಅಂಗವಾಗಿ ಈ ತಿಂಗಳ 15 ಮತ್ತು 16ರಂದು…
ಭಾರತಿ ದರ್ಶ್ ಫೌಂಡೇಶನ್ ನಿಂದ ಉಚಿತ ದಂತ ಚಿಕಿತ್ಸಾ ಶಿಬಿರ
ಬೆಂಗಳೂರು ; ರಾಜಗೋಪಾಲನಗರದ ಬಸಪ್ಪನಕಟ್ಟೆಯಲ್ಲಿ ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸಿದ್ದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಎಲ್.ಬಿ.ಎಸ್ ಅಟೋಮೆಷನ್ ಸಿಸ್ಟಮ್ ನ ಮಾಲೀಕ ಬಸವರಾಜ್ ಎನ್. ಕೆ ಮತ್ತು ಶ್ರೀಮತಿ ಲೀಲಾವತಿ. ಪಿ.ಎಮ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷಕರಾದ ಭಾ ಮ ಹರೀಶ್ ಉದ್ಘಾಟಿಸಿದರು ಭಾ ಮ ಹರೀಶ್ ಮಾತನಾಡಿ ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಚಿಕಿತ್ಸೆ ಮಾಡಿಸುವ ವೆಚ್ಚ ದುಬಾರಿಯಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸುವ ವೈದ್ಯಕೀಯ ಚಿಕಿತ್ಸೆ…
ವಿಶ್ವ ರೇಬಿಸ್ ಲಸಿಕಾ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಮನವಿ
ತುಮಕೂರು : ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿಯಾಗಿದ್ದು, ಈ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಹೆಚ್.ಎಂ.ಶಿವಪ್ರಸಾದ ಅವರು ಮನವಿ ಮಾಡಿದರು. ಅವರು ಸೆಪ್ಪಂಬರ್ 28ರಂದು ಜಿಲ್ಲಾ ಪಂಚಾಯತಿ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಶು ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರೇಬಿಸ್ ದಿನಾಚರಣೆಯನ್ನು ನಾಯಿಗಳಿಗೆ ಲಸಿಕೆ ನೀಡುವ…
ವಿವಿಧ ಸಮಾಜಗಳ ಮುಖಂಡರಿಗೆ ದಸರಾ ಗೌರವಾರ್ಪಣೆ ತುಮಕೂರು ದಸರಾ ಸಮಿತಿಯಿಂದ ಸಮಾಜ ಸೇವಾ ಸಾಧಕರಿಗೆ ಸನ್ಮಾನ
ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದ ಶನಿವಾರದ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಮಾಜಗಳ ಮುಖಂಡರಿಗೆ ‘ಸಮಾಜ ಸಾಮರಸ್ಯ ಸುಧಾರಕರು’ ಎಂದು ಪ್ರಶಂಸಿಸಿ ಗೌರವಿಸಲಾಯಿತು. ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರ ಆವರಣದಲ್ಲಿ ನಡೆದಿರುವ ದಸರಾ ಉತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಸಮಿತಿಯ ಮುಖಂಡರು ನಾನಾ ಸಮಾಜಗಳ ಮುಖಂಡರನ್ನು ಸನ್ಮಾನಿಸಿ ಅಭಿನಂದಿಸಿದರು. ವಿವಿಧ ಸಮಾಜಗಳ ಮುಖಂಡರುಗಳಾದ ಟಿ.ಕೆ.ನರಸಿಂಹಮೂರ್ತಿ, ಜಿ.ಎಂ.ಸಣ್ಣಮುದ್ದಯ್ಯ, ತುಂಗೋಟಿ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಎಸ್.ಪುಟ್ಟೀರಪ್ಪ, ಮಹದೇವಯ್ಯ, ಪ್ರೊ.ಕೆ.ಚಂದ್ರಣ್ಣ, ಸೀತಾರಾಮ್, ಹೆಚ್.ಪಿ.ವಿಶ್ವಜ್ಞಾನಚಾರ್ಯ, ತಾಂಡವಮೂರ್ತಿ, ಸಕ್ಕರೆ ಕುಮಾರಸ್ವಾಮಿ, ಟಿ.ಹೆಚ್.ಶಿವಾನಂದ್,…
ಸಮೀಕ್ಷೆಯಲ್ಲಿ ‘ವೀರಶೈವ ಲಿಂಗಾಯಿತ’ ಎಂದು ಬರೆಸಿ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‍ನಿಂದ ಮನವಿ
ತುಮಕೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ವೀರಶೈವ ಲಿಂಗಾಯಿತ ಬಂಧುಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ನಮೂದಿಸಬೇಕು ಎಂದು ಜಗದುರು ಪಂಚಾಚಾರ್ಯ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮನವಿ ಮಾಡಿದ್ದಾರೆ. ಸಮೀಕ್ಷಾ ಕಾರ್ಯದಲ್ಲಿ ಗಣತಿದಾರರ ಪ್ರಶ್ನೆಗಳಿಗೆ ನಿಖರ ಮಾಹಿತಿಯನ್ನು ನೀಡುವುದು ಪ್ರಮುಖ ಜವಾಬ್ದಾರಿಯಾಗಿದೆ. ನಮ್ಮ ಸಮಾಜದ ಎಲ್ಲರೂ ಸಹ ನಾಡಿನ ಹಿರಿಯರು, ಗುರುಗಳು ನೀಡಿರುವ ಸಂದೇಶದಂತೆ ಧರ್ಮ- ಹಿಂದೂ, ಜಾತಿ-ವೀರಶೈವ ಲಿಂಗಾಯತ(ಅoಜe:ಂ-1524)…
ರೋಮಾಂಚಕಾರಿ ಮಲ್ಲಕಂಬ ಪ್ರದರ್ಶನ ತುಮಕೂರು ದಸರಾ ಸಮಿತಿ ಉತ್ಸವದ ಆಕರ್ಷಣೆ
ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದಲ್ಲಿ ಈ ನೆಲದ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನ ಆಕರ್ಷಣೀಯವಾಗಿತ್ತು. ನಗರದ ಶ್ರೀರಾಮ ಮಂದಿರದ ಆವರಣದಲ್ಲಿ ನಡೆದ ಮಲ್ಲಕಂಬ ಕ್ರೀಡೆ ಪ್ರದರ್ಶನದಲ್ಲಿ ಬೆಂಗಳೂರಿನ ಜಿಗಣಿ ವಿವೇಕಾನಂದ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಲ್ಲಕಂಬ ಮೇಲೆ ವಿವಿಧ ಕಸರತ್ತಿನ ರೋಮಾಂಚಕಾರಿ ಪ್ರದರ್ಶನ ನೀಡಿದರು. ಮಲ್ಲಕಂಬ ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಹೆಸರೇ ಸೂಚಿಸುವಂತೆ ಗರಡಿಯಲ್ಲಿ ಕಸರತ್ತು ಮಾಡುವ ಕುಸ್ತಿಪಟುಗಳು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಮಲ್ಲಕಂಬ ಪ್ರತ್ಯೇಕ…
ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯ ಅನುದಾನಿತ ಶಾಲಾಕಾಲೇಜು ಸಿಬ್ಬಂದಿ ಸಂಘದಿಂದ ಹೋರಾಟದ ಎಚ್ಚರಿಕೆ
ತುಮಕೂರು: ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಪ್ರಕಾರ ಸರ್ಕಾರ ರಾಜ್ಯದ ಎಲ್ಲಾ ಅನುದಾನಿತ ಶಾಲಾಕಾಲೇಜು ಸಿಬ್ಬಂದಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಲೇಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸುವುದಾಗಿ ರಾಜ್ಯ ಅನುದಾನಿತ ಶಾಲಾಕಾಲೇಜು ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಶನಿವಾರ ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ರಾಜ್ಯ ಅನುದಾನಿ ಶಾಲಾಕಾಲೇಜು ಪಿಂಚಣಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ ಹೋರಾಟದಲ್ಲಿ ತಾವು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಆಕ್ರೋಶಗೊಂಡು ಭಾವುಕರಾಗಿ ಹೇಳಿದರು….
ಸ್ತ್ರೀ ಶಕ್ತಿ ಮೆರೆಸುವ ಹಬ್ಬವೇ ದಸರಾ ಆಚರಣೆ: ಹೆಚ್.ಜಿ.ಚಂದ್ರಶೇಖರ್
ತುಮಕೂರು: ನಮ್ಮದು ಪುರುಷ ಪ್ರಧಾನ ಸಮಾಜ ಎಂದು ಮೇಲ್ನೋಟಕ್ಕೆ ಹೇಳಲಾದರೂ ಒಳನೋಟದಲ್ಲಿ ಸ್ತ್ರೀ ಪ್ರಧಾನವೇ. ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸ್ತ್ರೀ ಪಾತ್ರವೇ ಹೆಚ್ಚು. ದಸರಾ ಉತ್ಸವವೂ ಸ್ತ್ರೀ ಶಕ್ತಿ ಮೆರೆಯುವ ಹಬ್ಬ. ಹೀಗಾಗಿ ಶಕ್ತಿ ದೇವತೆಗಳ ಆರಾಧನೆಯೊಂದಿಗೆ ದಸರಾವನ್ನು ದೇಶದಲ್ಲಿ ವಿಶೇಷವಾಗಿ ಆಚರಿಸುತ್ತೇವೆ ಎಂದು ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹೇಳಿದರು. ನಗರದ ಶ್ರೀರಾಮ ಮಂದಿರದಲ್ಲಿ ನಡೆದಿರುವ ತುಮಕೂರು ದಸರಾ ಸಮಿತಿಯ ಶುಕ್ರವಾರದ ದಸರಾ ಉತ್ಸವದಲ್ಲಿ ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು,…
ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
ಪಾವಗಡ: ಪಳವಳ್ಳಿ ಕೆರೆಯಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಕೆರೆಯಲ್ಲಿ ಬೆಳೆದಿರುವ ನೂರಾರು ಗಿಡಮರಗಳು ಬೀಳುವ ಹಂತ ತಲುಪಿದ್ದರು ಸಹಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ. ತಾಲ್ಲೂಕಿನ ಪಳವಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ, ಹಾಡಹಗಲೇ ರಾಜಾರೋಷವಾಗಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಅನುಮತಿ ಪಡೆಯದೆ ಟ್ಯಾಕ್ಟರ್ ನಂಬರ್ KA 64 T 4103 ಹಾಗೂ ಜೆಸಿಬಿ ಬಳಸಿ ಸುಮಾರು…
ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ಶಾಸಕ ಕೆ.ಎನ್.ರಾಜಣ್ಣ
ಮಧುಗಿರಿ: ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ನಮ್ಮನಿಮ್ಮ ಬೆಡಗುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ನಮ್ಮ ಎರಡು ಜಾತಿಗಳಲ್ಲಿ ಮಾತ್ರ ಬೆಡಗುಗಳು ಒಂದೆಯಾಗಿರುವುದನ್ನು ಕಾಣಬಹುದು ಪುರಾತನ ಕಾಲದಲ್ಲಿ ನಾವೆಲ್ಲರೂ ಒಟ್ಟಿಗೆ ಬದುಕುತ್ತಿದ್ದೆವು ಈಗಲೂ ಅದನ್ನೆ ಮುಂದುವರೆಸಿಕೊಂಡು ಸಹಬಾಳ್ವೆ ನಡೆಸೋಣ ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು. ಮಧುಗಿರಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿ ತಾಲ್ಲೂಕಿನ ಪೋಲೆನಹಳ್ಳಿ ಹಾಗೂ ಪಾವಗಡದ ಬೆಳ್ಳಿಬಟ್ಲು ಗ್ರಾಮಗಳಲ್ಲಿ ನಡೆದ ದಲಿತರ ಕಗ್ಗೊಲೆ ಘಟನೆಗಳನ್ನು ಖಂಡಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ,…