ಕಲಾವಿದನ ಸಾಧನೆಗೆ ಕಲಾ ಪ್ರೋತ್ಸಾಹಕರ ಸಹಕಾರ ಅತ್ಯಗತ್ಯ :ವಿಶ್ವೇಶ್ವರಯ್ಯ
ರಂಗಭೂಮಿ ಕ್ಷೇತ್ರದಲ್ಲಿ ಒಬ್ಬ ಕಲಾವಿದ ಸಾಧನೆ ಮಾಡಬೇಕಾದರೆ ಕಲಾ ಪ್ರೋತ್ಸಾಹಕರ ಸಹಕಾರ ಪ್ರಮುಖವಾದದ್ದು ಎಂದು ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ವಿಶ್ವೇಶ್ವರಯ್ಯ ನವರು ತಿಳಿಸಿದರು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಗಡ್ಡೋಬನಹಳ್ಳಿ ಗ್ರಾಮದಲ್ಲಿ ದಿನಾಂಕ 16/4/2026 ರಂದು ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಮಾರಮ್ಮ ದೇವಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಲಾಗಿದ್ದ ಕುರುಕ್ಷೇತ್ರ ಅಥವಾ ಶ್ರೀ…