ತುಮಕೂರಿನಲ್ಲಿ ಬಿರ್ಲಾ ಓಪಸ್ ಪೇಂಟ್ಸ್‍ನ 7 ಹೊಸ ಫ್ರಾಂಚೈಸಿ ಮಳಿಗೆಗಳ ಆರಂಭ : ಸಚಿನ್ ಸಹಾಯ್

ತುಮಕೂರು: ಕರ್ನಾಟಕವು ಸಂಸ್ಥೆಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ರಾಜ್ಯದಲ್ಲಿ 200 ಮಳಿಗೆಗಳ ಮೈಲಿಗಲ್ಲು ತಲುಪಿರುವುದು ಸಂತಸದ ಸಂಗತಿಯಾಗಿದೆ. ಒಂದೇ ದಿನದಲ್ಲಿ 50 ಮಳಿಗೆಗಳನ್ನು ಆರಂಭಿಸಿರುವುದು ಸಂಸ್ಥೆಯ ವೇಗದ ಬೆಳವಣಿಗೆ ಹಾಗೂ ವಿತರಣಾ ಪಾಲುದಾರರು ಬ್ರ್ಯಾಂಡ್ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಗ್ರಾಹಕರಿಗೆ ನವೀನ ಉತ್ಪನ್ನಗಳು ಮತ್ತು ಉತ್ತಮ ಗುಣಮಟ್ಟದ ಪೇಂಟಿಂಗ್ ಪರಿಹಾರಗಳನ್ನು ಇನ್ನಷ್ಟು ಹತ್ತಿರವಾಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಬಿರ್ಲಾ ಓಪಸ್ ಪೇಂಟ್ಸ್‍ನ ಸಿಇಒ ಸಚಿನ್ ಸಹಾಯ್‍ರವರು ತಿಳಿಸಿದರು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಎಸ್.ಎಸ್.ಐ.ಟಿ. ಹಿಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಮಳಿಗೆಯಾದ ಸನ್ಮತಿ ಬಿಲ್ಡ್ ಪ್ರೊ. ಉದ್ಘಾಟನಾ ಸಮಾರಂಭವನ್ನು ನ.11 ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಸಚಿನ್ ಸಹಾಯ್‍ರವರು ಮಾತನಾಡಿ, ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್ ಇಂಡಸ್ಟ್ರೀಸ್‍ನ ಅಂಗಸಂಸ್ಥೆಯಾಗಿರುವ ಬಿರ್ಲಾ ಓಪಸ್ ಪೇಂಟ್ಸ್, ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ 50 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಸಂಸ್ಥೆಯ ಒಟ್ಟು ಫ್ರಾಂಚೈಸಿ ಮಳಿಗೆಗಳ ಸಂಖ್ಯೆ 200ಕ್ಕೆ ತಲುಪಿದ್ದು, ಪೇಂಟ್ ಉದ್ಯಮದಲ್ಲಿ ತನ್ನ ರಿಟೇಲ್ ಜಾಲವನ್ನು ಮತ್ತಷ್ಟು ಬಲಪಡಿಸಿದೆ.
ಬೆಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಹೊಸಪೇಟೆ, ವಿಜಯಪುರ, ದಾವಣಗೆರೆ ಹಾಗೂ ಹಾಸನ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೊಸ ಮಳಿಗೆಗಳನ್ನು ಆರಂಭಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 11, ತುಮಕೂರಿನಲ್ಲಿ 7, ಮೈಸೂರು ಮತ್ತು ಹೊಸಪೇಟೆಯಲ್ಲಿ ತಲಾ 5 ಹೊಸ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಹೊಸ ಮಳಿಗೆಗಳ ಮೂಲಕ ಗ್ರಾಹಕರಿಗೆ ಗುಣಮಟ್ಟದ ಅಲಂಕಾರಿಕ ಪೇಂಟ್ಸ್, ಪ್ರೀಮಿಯಂ ಫಿನಿಶ್‍ಗಳು, ವಾಲ್‍ಪೇಪರ್‍ಗಳು ಹಾಗೂ ವಿವಿಧ ನವೀನ ಪೇಂಟಿಂಗ್ ಪರಿಹಾರಗಳು ಸುಲಭವಾಗಿ ಲಭ್ಯವಾಗಲಿವೆ. ಗ್ರಾಹಕರ ಮನೆ ಮತ್ತು ಕಟ್ಟಡಗಳ ಅಗತ್ಯಕ್ಕೆ ಅನುಗುಣವಾಗಿ ಬಣ್ಣಗಳ ಆಯ್ಕೆ, ಪರಿಣಿತ ಸಲಹೆ ಹಾಗೂ ವೈಯಕ್ತಿಕ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನೂ ಮಳಿಗೆಗಳಲ್ಲಿ ಕಲ್ಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಸನ್ಮತಿ ಬಿಲ್ಡ್ ಪ್ರೊ ಸಂಸ್ಥೆಯ ಆಶಿμï ಮಾತನಾಡಿ, ಬಿರ್ಲಾ ಓಪಸ್ ಪೇಂಟ್ಸ್‍ನೊಂದಿಗೆ ಪಾಲುದಾರಿಕೆ ಹೊಂದಿರುವುದು ಸಂತಸ ತಂದಿದೆ. ಸಂಸ್ಥೆಯ ಗುಣಮಟ್ಟದ ಪೇಂಟ್ಸ್, ವೈವಿಧ್ಯಮಯ ಉತ್ಪನ್ನಗಳು ಹಾಗೂ ನಿರಂತರ ಸಹಕಾರದಿಂದ ತುಮಕೂರಿನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರ ಜೊತೆಗೆ ನಮ್ಮ ವ್ಯವಹಾರವನ್ನೂ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಹೊಸದಾಗಿ ಆರಂಭಿಸಿರುವ ಫ್ರಾಂಚೈಸಿ ಮಳಿಗೆಗಳು ಗ್ರಾಹಕರಿಗೆ ಪೇಂಟಿಂಗ್‍ಗೆ ಸಂಬಂಧಿಸಿದ ಎಲ್ಲ ಅಗತ್ಯಗಳಿಗೂ ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಅತ್ಯಾಧುನಿಕ ಉತ್ಪಾದನಾ ಘಟಕಗಳು ಹಾಗೂ ದೇಶಾದ್ಯಂತ ವಿಸ್ತರಿಸುತ್ತಿರುವ ವಿತರಣಾ ಜಾಲದ ಬೆಂಬಲದೊಂದಿಗೆ ಸಂಸ್ಥೆಯು ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿರುವ ಬಿರ್ಲಾ ಓಪಸ್ ಪೇಂಟ್ಸ್, ಡೀಲರ್‍ಗಳು, ಫ್ರಾಂಚೈಸಿ ಪಾಲುದಾರರು ಹಾಗೂ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸುವ ಮೂಲಕ ಪೇಂಟ್ ಉದ್ಯಮದಲ್ಲಿ ತನ್ನ ಬೆಳವಣಿಗೆಯ ಪಯಣವನ್ನು ಮುಂದುವರಿಸಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ಮಳಿಗೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!