ಬೆಂಗಳೂರು: ನಗರದ ಅರಮನೆ ರಸ್ತೆಯ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ನಾಳೆ ಬೆಳಗ್ಗೆ 10.30ಕ್ಕೆ ಗುರುವಾರ ಸೆ.17ರಂದು ವಿಜ್ಞಾನ ವಿಭಾಗದ ಸಮ್ಮೇಳನ ಸಭಾಂಗಣದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರವರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವರು ಹಾಗೂ ಮಾನವಿಕ ಮತ್ತು ಕಲಾ ವಿಭಾಗದ ನಿರ್ದೇಶಕರಾದ ಪ್ರೊ. ವೈ. ರಮೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಚಾರ ಸಂಕಿರಣವನ್ನು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಮತ್ತು ಆರ್ ಪಿಐ ಉಪಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅರಕೆರೆ ವೆಂಕಟೇಶ, ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯ ಅಧ್ಯಕ್ಷ ಡಾ.ಗೋವಿಂದಯ್ಯ ಜಿ, ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಡಾ. ಅರ್ಜುನ್ ಗೋಪಾಲಯ್ಯ
ಅವರು ಪಾಲ್ಗೊಳ್ಳಲಿದ್ದಾರೆ.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಎಸ್.ಬಿ ವಹಿಸಲಿದ್ದು, ಘನ ಉಪಸ್ಥಿತಿಯಲ್ಲಿ ಆಡಳಿತ ಕುಲಸಚಿವೆ ಶ್ರೀಮತಿ ಸೀಮಾ ಬಿ.ನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ.ವೈ.ರಮೇಶ್, ಉಪ ಕುಲಸಚಿವರಾದ ಪ್ರೊ.ಎಸ್.ಡಿ.ನಾಗೇಂದ್ರಶಾಸ್ತ್ರಿ, ಪ್ರೊ.ಎಲ್.ಎಸ್.ಶಿವಶಂಕರಪ್ಪ, ಶ್ರೀನಾಥ್ ರಾಜ್ ಮತ್ತು ವಿತ್ತಾಧಿಕಾರಿ ಎಂ.ಎಸ್.ಚೇತನ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ವಿಚಾರ ಸಂಕಿರಣದ ಸಂಚಾಲಕರಾಗಿ ಡಾ. ಎಸ್. ಗೋವಿಂದಪ್ಪ ಪಾವಗಡ ಹಾಗೂ ಕಾರ್ಯಕ್ರಮದ ರೂವಾರಿಗಳಾಗಿ ಡಾ. ರಾಧಾಕೃಷ್ಣ ಜಿ.ಎಸ್, ಡಾ. ನಾಗನಗೌಡರ್, ಡಾ. ಹನುಮಂತರಾಜು ಇದೇ ವೇಳೆ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅವರ “ವಿದ್ಯಾರ್ಥಿ ತೆರೆದ ಸತ್ಯ” ಎಂಬ ಪುಸ್ತಕ ಬಿಡುಗಡೆಗೊಳ್ಳಲಿದೆ. ಆಶಯ ಭಾಷಣವನ್ನು ಡಾ.ಎಂ. ವೆಂಕಟಸ್ವಾಮಿ ಮಾಡಲಿದ್ದು, ಬಹುಮುಖ್ಯವಾಗಿ ಎರಡು ಗೋಷ್ಠಿಗಳಲ್ಲಿ ಡಾ. ಎಂ.ಎಸ್. ಆಶಾದೇವಿ, ಮಾವಳ್ಳಿ ಶಂಕರ್, ಗಣಪತಿ ಗೋ ಚಲವಾದಿ, ಡಾ. ಮೀರಾ ಎಲ್.ಜಿ. ಡಾ. ಶಿವಕುಮಾರ್ ಮತ್ತು ಬಿ. ರಾಜಶೇಖರ ಮೂರ್ತಿ ಇವರುಗಳು ಮಂಡಿಸಲಿದ್ದಾರೆ.
ಕಾರ್ಯಕ್ರಮ ನಿರ್ವಹಣೆಯನ್ನು ಡಾ. ಸತ್ಯಮೂರ್ತಿ ಗೂಗಿ, ಡಾ. ಮುನಿಯಪ್ಪ ವಿ, ಮುರಳೀಧರ ಎಸ್.ಪಿ, ಮಹಮ್ಮದ್ ರಫಿ ಹಂಚಿನಾಳ, ಡಾ. ಈಶ್ವರ್ ಸಿರಿಗೇರಿ ಮತ್ತು ನಿರೂಪಣೆಯನ್ನು ಡಾ. ಸುಲೋಚನ, ಹೋರಾಟದ ಗೀತ ಗಾಯನವನ್ನು ಲಿಂಗರಾಜ ಮತ್ತಿತರರು ನಡೆಸಿಕೊಂಡಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ವಿಷಯಗಳ ಉಪನ್ಯಾಸಕರು, ವಿದ್ಯಾರ್ಥಿ ವೃಂದವರು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದುತಿಳಿಸಿದರು.