ಹಂದಿಜೋಗರ ಮನವೊಲಿಸಿದ : ಉಪಲೋಕಾಯುಕ್ತ ಬಿ. ವೀರಪ್ಪ
ತುಮಕೂರು : ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ಅವರು ಇಂದು ಗುಬ್ಬಿ ಪಟ್ಟಣದ ಪೋಲೀಸ್ ಠಾಣೆ ಹಿಂಭಾಗ ವಾಸಿಸುತ್ತಿರುವ ಹಂದಿಜೋಗಿಗಳ ವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸುತ್ತಾ ಮಳೆ ನೀರಿನಲ್ಲಿಯೇ ಬದುಕು ಸವೆಸುತ್ತಿರುವ ಹಂದಿಜೋಗರಿಗೆ ಸರ್ಕಾರದಿಂದ ಗುರುತಿಸಲಾಗಿರುವ ಸಾತೇನಹಳ್ಳಿ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಮನವೊಲಿಸಿದರು. ಪ್ರಸ್ತುತ ವಾಸಿಸುತ್ತಿರುವ ಹಂದಿಜೋಗರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಮಳೆ ನೀರಿನಿಂದ ಆವೃತವಾಗಿರುವ ಗುಡಿಸಲಿನಲ್ಲಿ ಹೇಗೆ ಬದುಕುತ್ತೀರಿ? ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಮನವಿ ಮಾಡಿದರು. ಸತತ…