ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಮಳೆರಾಯ
ರಾಜ್ಯದ ಜನತೆ ಒಂದೆಡೆ ಬಿಸಿಲಿನ ಬೇಗೆಗೆ ಬೆಂದು ಬಸವಳಿದು ಬಿಸಿಲಿನ ಬೇಗೆಯನ್ನು ತಾಳಲಾರದೆ ದಂಡ ತಂಡ ಕೂಲ್ ಕೂಲ್ ಗೆ ಮೊರೆ ಹೋದ ನಿದರ್ಶನಗಳನ್ನು ನಾವು ಇತ್ತೀಚೆಗೆ ಕಾಣುತ್ತಿದ್ದೆವು ರೈತರು ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಮೋಡದತ್ತ ಮುಖ ಮಾಡಿ ವರುಣನ ಆಗಮನವನ್ನು ಕಾಯುತ್ತಿದ್ದ ದೃಶ್ಯಗಳನ್ನು ನಾವು ಕಂಡಿದ್ದೆವು ಇತ್ತೀಚಿನ ದಿನಗಳಲ್ಲಿ ರೈತನು ತಾನು ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆದಾರಿ ಹಿಡಿದ ನಿದರ್ಶನಗಳನ್ನು ನಾವು ಮಾಧ್ಯಮಗಳಲ್ಲಿ ಕಂಡಿದ್ದೇವೆ ಮೂಕ ಪ್ರಾಣಿಗಳ…