ಜೆ.ಪಿ. ಆಂಗ್ಲಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.98.50 ಫಲಿತಾಂಶ
ತುರುವೇಕೆರೆ: 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಟ್ಟಣದ ಜೆ.ಪಿ. ಆಂಗ್ಲ ಪ್ರೌಢಶಾಲೆಗೆ ಶೇ.98.50 ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲ ತುಕಾರಾಮ್ ತಿಳಿಸಿದರು. ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಶಾಲೆಯಿಂದ 112 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 110 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 60 ಮಂದಿ ಪ್ರಥಮ, 22 ಮಂದಿ ದ್ವಿತೀಯ ಹಾಗೂ 5 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೆ.ಎ.ಗಾನವಿ(603), ಎಂ.ಜೆ. ಜಮುನಾ…