
ಜಿಲ್ಲಾ ಸುದ್ದಿಗಳು
ಜಿಎಸ್‍ಟಿ ದರ ಪರಿಷ್ಕರಣೆ: ಬಿಜೆಪಿ ಸ್ವಾಗತ
ತುಮಕೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ದರಗಳನ್ನು ಪರಿಷ್ಕರಿಸುವ ಮೂಲಕ ತೆರಿಗೆ ಹೊರೆ ಕಡಿತಗೊಳಿಸಿ ಎಲ್ಲಾ ವರ್ಗದ ಜನರ ಬದುಕನ್ನು ಸರಳ ಹಾಗೂ ಸುಲಭಗೊಳಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಿಎಸ್‍ಟಿ ಪರಿಷ್ಕರಣೆ ಜನಸಾನ್ಯರ ತೆರಿಗೆ ಹೊರೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ಗರಿಷ್ಠ ವಸ್ತುಗಳ ಮೇಲೆ ಗಮನಾರ್ಹ ಪರಿಹಾರವನ್ನು ನೀಡಿದೆ. ರೈತರು, ವ್ಯಾಪಾರಿಗಳು ಮತ್ತು ವ್ಯವಹಾರಗಳಿಗೆ ಇದರಿಂದ ಪ್ರಯೋಜನವಾಗಿದೆ….
ಜಿಲ್ಲಾಡಳಿತದ ದಸರಾದಲ್ಲಿ ಲಕ್ಷಾಂತರ ರೂ. ಹಣ ದುರುಪಯೋಗ ಖರ್ಚು- ವೆಚ್ಚಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಒತ್ತಾಯ
ತುಮಕೂರು: ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರ ತೆರಿಗೆ ಹಣ ಬಳಸಿಕೊಂಡು ಕಳೆದ ವರ್ಷ ಜಿಲ್ಲಾಡಳಿತ ನಗರದಲ್ಲಿ ಆಚರಿಸಿದ ದಸರಾ ಮಹೋತ್ಸವದಲ್ಲಿ ಲಕ್ಷಾಂತರ ರೂ. ಸಾರ್ವಜನಿಕರ ಹಣ ದುರುಪಯೋಗವಾಗಿದೆ. ಆಗಿನ ಲೆಕ್ಕ ನೀಡದೆ ಸಮಿತಿಯವರು ಯಾವ ಮುಖ ಹೊತ್ತು ಈ ಬಾರಿ ಮತ್ತೊಂದು ದಸರಾ ಉತ್ಸವ ಆಚರಿಸಲು ಹೊರಟಿದ್ದಾರೆ? ಎಂದು ತುಮಕೂರು ದಸರಾ ಸಮಿತಿ ಖಜಾಂಚಿ ಜಿ.ಎಸ್.ಬಸವರಾಜು ಪ್ರಶ್ನಿಸಿದರು. ಜಿಲ್ಲಾಡಳಿತ ಕಳೆದ ಬಾರಿ ನಡೆಸಿದ ದಸರಾ ಆಚರಣೆಯಲ್ಲಿ ಆಗಿರುವ ಹಣದ ಅಕ್ರಮಗಳ ಬಗ್ಗೆ ದಾಖಲಾತಿಗಳನ್ನು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ…
ನಾಳೆ ಎಸ್‌ಐಟಿ ಕಾಲೇಜಿನಲ್ಲಿ 16ನೇ ಪದವಿ ಪ್ರದಾನ ಸಮಾರಂಭ
ತುಮಕೂರು: ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ 16ನೇ ಪದವಿ ಪ್ರದಾನ ಸಮಾರಂಭ ನಗರದ ಎಸ್‌ಐಟಿ ಕಾಲೇಜಿನ ಆವರಣದಲ್ಲಿ ಸೆ.6 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿರವರ ಕೃಪಾಶೀರ್ವಾದ ಹಾಗೂ ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ 16ನೇ ಪದವಿ ಪ್ರದಾನ ಸಮಾರಂಭಜರುಗಲಿದ್ದು, ಒಟ್ಟು 820 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಜಂಟಿ…
ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು”
ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷಟು ವಿಷಯಗಳು ಹರಿದಾಡುತ್ತದೆ ಆದರೆ ನಮಗೆ ಸರಿ ಎನಿಸಿದ ವಿಷಯಗಳನ್ನು ಮಾತ್ರ ಪಡೆದುಕೊಳ್ಳಬೇಕು ಸಾಮಾಜಿಕ ಮಾಧ್ಯಮಗಳಲ್ಲಿ ಯೂಟೂಬರ್ಗಳು ಎಚ್ಚರಿಕೆಯಿಂದ ಸಾಮಾಜಿಕ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ವಿಡಿಯೋಗಳನ್ನು ಮಾಡಬೇಕು ಎಂದು ಪ್ರಜಾಪ್ರಗತಿಯ ಸಂಪಾದಕರಾದ ಎಸ್ ನಾಗಣ್ಣ ಸಲಹೆ ನೀಡಿದರು. ನಗರದ ಶ್ರೀ ಸಿದ್ಧಾಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದಾರ್ಥ ಸಂಕಲ್ಪ 2025 ಕಾರ್ಯಕ್ರಮದಲ್ಲಿ ತುಮಕೂರಿನಲ್ಲಿ ಹೆಸರು ಮಾಡಿರುವಂತಹ ಬ್ಲಾಗರ್ಸ್ ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ನಾಡಿನ ಸಾಮಾಜಿಕ ಸ್ವಾಸ್ಥ್ಯವನ್ನು…
ವಕೀಲ ಸುಧಾಕರ್ ಮೇಲಿನ ಹಲ್ಲೆಗೆ ವಕೀಲರ ಸಂಘ ಖಂಡನೆ
ವಕೀಲರ ರಕ್ಷಣಾ ಕಾಯಿದೆ ಕಠಿಣಗೊಳಿಸಲು ಸರ್ಕಾರಕ್ಕೆ ಒತ್ತಾಯ ತುಮಕೂರು: ಪಾವಗಡ ತಾಲ್ಲೂಕು ವಕೀಲ ಟಿ.ಹೆಚ್.ಸುಧಾಕರ್ ಮೇಲಿನ ಹಲ್ಲೆ ಖಂಡಿಸಿ, ಅವರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಲು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಕೀಲ ಧರ್ಮ ಪಾಲನೆ ಮಾಡುವ ವಕೀಲರಿಗೆ ರಕ್ಷಣೆ ದೊರೆಯುತ್ತಿಲ್ಲ, ವಕೀಲರ ರಕ್ಷಣಾ ಕಾಯಿದೆಯನ್ನು ಕಠಿಣವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರಿಗೆ ಮನವಿಪತ್ರ ಸಲ್ಲಿಸಿದರು. …
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್ ಗರಿಮೆ
ತುಮಕೂರು: ಮಾಧ್ಯಮ ಶಿಕ್ಷಣ ಕ್ಷೇತ್ರದ ಗುಣಮಟ್ಟದ ಪ್ರಗತಿ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಪಠ್ಯಕ್ರಮ ಹಾಗೂ ಪ್ರಾಯೋಗಿಕ ಕಲಿಕೆ ಅವಕಾಶ ಸೇರಿದಂತೆ ಸರ್ವಾಂಗೀಣ ಕೊಡುಗೆಗಳನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಮಾಧ್ಯಮ ಕಾಲೇಜುಗಳಲ್ಲಿ ಕರ್ನಾಟಕದಿಂದ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರಕ್ಕೆ ಪ್ರಸಕ್ತ ಸಾಲಿನ ‘ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್-2025 ಪ್ರಶಸ್ತಿ ಸಂದಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಇತ್ತೀಚಿಗೆ ನಟ ರಘು ಭಟ್ ನೇತೃತ್ವದಲ್ಲಿ ಆಯೋಜಿಸಲಾದ ಟಿಎನ್‍ಐಟಿ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿಗಳು ವಿತರಣಾ…
ಅಪ್ರಾಪ್ತ ಚಾಲಕನಿಗೆ ಬಿತ್ತು 25,000 ದಂಡ
ತಿಪಟೂರು: ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟಂತಹ ವಾಹನ ಮಾಲೀಕನಿಗೆ 25000 ರೂ ಗಳ ದಂಡವನ್ನು ವಿಧಿಸಿದ CJ & JMFC ಕೋರ್ಟ್ ತಿಪಟೂರು. ಅಪ್ರಾಪ್ತರು ವಾಹನ ಚಾಲನೆ ಮಾಡುವುದು & ವಾಹನ ಚಾಲನೆಗೆ ನೀಡುವುದು ಕಾನೂನುಗೆ ವಿರುದ್ಧವಾದುದ್ದು. ಅರಸೀಕೆರೆ ತಾಲೂಕಿನ ಬಾಣಾವರದ ಹೋಬಳಿಯ ಬಸವರಾಜಪುರ ಮೂಲದ ಜಯಂತ್ ಗೌಡ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೆಂಗಳೂರು- ಹೊನ್ನಾವರ ಹೆದ್ದಾರಿಯ 206ರ ಕೊನೇಹಳ್ಳಿ ಸಮೀಪ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದನ್ನು…
ಒಳ ಮೀಸಲಾತಿ : ಅಲೆಮಾರಿಗಳಿಗಾಗಿರುವ ಅನ್ಯಾಯ ಸರಿ ಪಡಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ
ತುಮಕೂರು. : ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ತುಮಕೂರು ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತು ಗೌರವ ಅಧ್ಯಕ್ಷರಾದ ಚಿಂತಕ ಕೆ.ದೊರೈರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ‘ಒಳ ಮೀಸಲಾತಿ’ಯ ಮೂಲ ಉದ್ದೇಶವೇ ಮೀಸಲಾತಿಯ ಸವಲತು ಮತ್ತು ಪ್ರಾತಿನಿಧ್ಯ್ತ ಎಲ್ಲರಿಗೂ ಸಮನಾಗಿ ದೊರೆಯಬೇಕು ಎಂಬುದಾಗಿದೆ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೂ ಸಮಪಾಲು…
ಒಳಮೀಸಲಾತಿ ಹಂಚಿಕೆ: ಸದ್ಯಕ್ಕೆ ಸಮಾಧಾನಕರ ಮಾದಿಗ ಸಮುದಾಯಕ್ಕೆ ನಿರಾಳ ಸ್ಥಿತಿ: ಡಾ.ಲಕ್ಷ್ಮೀಕಾಂತ್
ತುಮಕೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಉಪಜಾತಿಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿ ಪ್ರಮಾಣ ಸಮಾಧಾನ ತಂದಿದೆ. ಇದೂವರೆಗೆ ಉಸಿರು ಕಟ್ಟಿದ ಪರಿಸ್ಥಿತಿಯಲ್ಲಿದ್ದ ಮಾದಿಗ ಸಮಾಜ ಈ ನಿರ್ಧಾರದಿಂದ ತಕ್ಕಮಟ್ಟಿಗೆ ಉಸಿರಾಡುವಷ್ಟು ನಿರಾಳವಾಗಿದೆ ಎಂದು ಒಳಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಮಾದಿಗ ಸಮುದಾಯದ ಮುಖಂಡ ನಗರದ ಡಾ.ಲಕ್ಷ್ಮೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಮಾದಿಗ ಸಮುದಾಯಕ್ಕೆ ಶಕ್ತಿ ಸಿಕ್ಕಿದಂತಾಗಿದೆ. ಪರಿಶಿಷ್ಟ ಜಾತಿಗಾಗಿ ಶಾಶ್ವತ ಆಯೋಗ ರಚನೆ ಮಾಡಬೇಕೆಂಬ ಸರ್ಕಾರದ ತೀರ್ಮಾನವೂ ಸ್ವಾಗತಾರ್ಹ. ಮುಂದೆ ಜಾತಿ ಜನಗಣತಿ ನಂತರ ಜನಸಂಖ್ಯೆ,…
ವೈಸಿರಿ ಕ್ಯಾಂಪಸ್‍ನಲ್ಲಿ79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ.
ತುಮಕೂರು: ಭಾರತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸಮರ್ಪಣೆಯನ್ನು ಸ್ಮರಿಸುವಜೊತೆಗೆ, ಶಿಕ್ಷಣದ ಮೂಲಕ ರಾಷ್ಟ್ರದ ಪ್ರಗತಿಗೆಕೊಡುಗೆ ನೀಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಭರಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎನ್.ಬಿ.ಪ್ರದೀಪ್‍ಕುಮಾರ್ ಹೇಳಿದರು. ನಗರದ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಟೆಕ್ನಾಲಜಿ ಹಾಗೂ ವೈಸಿರಿ ಪದವಿ ಪೂರ್ವಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿಸುವ ಗುರಿಯತ್ತ ದೃಢವಾದ ಕಾರ್ಯೋನ್ಮುಖ ಕ್ರಮಗಳು ಸಾಗುತ್ತಿವೆ. ಈ…