ಸರ್ಕಾರದ ಸುತ್ತೋಲೆಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಲೋಕೇಶ್ ತಾಳಿಕಟ್ಟೆ
ತುಮಕೂರು : ಇತ್ತೀಚಿಗೆ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಯಾಕೆಂದರೆ ಮೆಡಿಕಲ್ ಸೀಟ್ ಪಡೆಯಲು ನೀಟ್ ಪರೀಕ್ಷೆ ಸಹ ಅತ್ಯವಶ್ಯಕವಾಗಿದ್ದು ಯಾವ ವಿದ್ಯಾರ್ಥಿ ಸಿಇಟಿ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳದೇ ಏಕಾಏಕಿ ನೀಟ್ ಪರೀಕ್ಷೆಯನ್ನು ಎದುರಿಸಿರುತ್ತಾರೋ ಅವರಿಗೆ ಮೆಡಿಕಲ್ ಸೀಟ್ ಹಂಚಿಕೆಯನ್ನು ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ, ಇದರಿಂದ ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆಂದು ರೂಪ್ಸಾ ಅಧ್ಯಕ್ಷರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಲೋಕೇಶ್…