ಪ್ರಮುಖ ಸುದ್ದಿಗಳು
ಮಾನವ ಸರಪಳಿ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿ – ಜಿ. ಪರಮೇಶ್ವರ
ತುಮಕೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಪ್ರಜಾ ಪ್ರಭುತ್ವ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮದವರೆಗೆ ನಿರ್ಮಿಸಲಾಗಿದ್ದ 90 ಕಿ.ಮೀ. ಉದ್ದದ ಮಾನವ ಸರಪಳಿಯು ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ತಿಳಿಸಿದರು. ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಯಶಸ್ವಿಗೆ ಪೂರ್ವಭಾವಿ ಸಭೆ
ಗುಬ್ಬಿ ಸುದ್ದಿ ಸೆ.15 ರ ಭಾನುವಾರದಂದು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿರುವ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದ ಹಿನ್ನೆಲೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಆರತಿ ಬಿ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ್ ಆರತಿ ಬಿ. ಮಾತನಾಡಿ ಪ್ರಜಾ ಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಭದ್ರ ಬುನಾದಿ ಮೇಲೆ ನಿಂತಿದೆ. ಈ ಭದ್ರ ಬುನಾದಿ ಬಲಿಷ್ಠವಾಗದಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗಲಾರದು. ಆದ್ದರಿಂದ ಸಮಾನತೆ, ಸ್ವಾಂತ್ರಂತ್ರ್ಯ ಭ್ರಾತೃತ್ವದ ಆದರ್ಶಗಳು…
ಸಾಲದ ಬಡ್ಡಿಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ವ್ಯಕ್ತಿಯ ಬಂಧನ
ದಿನಾಂಕ:-05/09/2024 ರಂದು ಮಧ್ಯ ರಾತ್ರಿ ವೇಳೆಯಲ್ಲಿ ಗುಬ್ಬಿ ತಾಲ್ಲೂಕು ಹೇರೂರು ಗ್ರಾಮದ ಸಿ.ಐ.ಟಿ ಕಾಲೇಜಿನ ಮುಂಭಾಗವಿರುವ ಕೇಕ್ ಹೌಸ್ ನಲ್ಲಿ ಬಸವರಾಜು ಬಿನ್ ನಂಜೇಗೌಡ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು. ನಂತರ ಮೃತ ಬಸವರಾಜು ರವರ ಮೊಬೈಲ್ ನ್ನು ಪರಿಶೀಲಿಸಲಾಗಿ ಆತ್ಮಹತ್ಯೆಗೆ ಕಾರಣ ಹೇರೂರು ಗ್ರಾಮದ ವಾಸಿಯಾದ ನಾಗರಾಜು @ ಬಡ್ಡಿ ನಾಗ ಈತನು ತಾನು ಕೊಟ್ಟ ಸಾಲಕ್ಕಾಗಿ ಬಸವರಾಜು ರವರಿಂದ ಚೆಕ್ ಗಳನ್ನು ಪಡೆದುಕೊಂಡಿದ್ದು, ಚೆಕ್ ಗಳನ್ನು ವಾಪಸ್ ಕೊಡುವಂತೆ ಕೇಳಿದಾಗ ಬಸವರಾಜು ರವರನ್ನು ಬೆದರಿಸಿ ಆತ್ಮಹತ್ಯೆ…
ಯಶಸ್ಸಿಗೆ ಹಠದ ಹಸಿವು ಅಗತ್ಯ : ಸಿಇಓ ಜಿ.ಪ್ರಭು
ತುಮಕೂರು: ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಏಕಾಗ್ರತೆ, ನಿರಂತರ ಪ್ರಯತ್ನದ ಜೊತೆಗೆ ಹಠದ ಹಸಿವು ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಕ್ಕಳಿಗೆ ಕಿವಿ ಮಾತು ಹೇಳಿದರು. ಜಿಲ್ಲೆಯ ಕ್ರೀಡಾ ವಸತಿ ಶಾಲಾ ಕ್ರೀಡಾಪಟುಗಳಿಗಾಗಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕ್ರೀಡಾ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಹೇಳಿದರು. …
ರಸ್ತೆ ಅಪಘಾತ ತಾಯಿ ಮಗಳ ಸಾವು.
ತಿಪಟೂರು. ಪದೇ ಪದೇ ಹೆಚ್ಚುತ್ತಿರುವ ಅಪಘಾತಗಳಿಂದ ರೋಸಿ ಹೋದ ಗ್ರಾಮಸ್ಥರಿಂದ ಶವ ತೆಗೆಯಲು ಬಿಡದೆ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ವರದಿಯಾಗಿದೆ. ಬೈಪಾಸ್ ಗೆ ಹೊಂದಿಕೊಂಡಂತಿರುವ ರಾಮಶೆಟ್ಟಿ ಹಳ್ಳಿ ಗ್ರಾಮದ ಕಮಲಮ್ಮ (35) ವೀಣಾ (14) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಇಂದು ಬೆಳಗ್ಗೆ 8:50 ರ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ,ತಾಯಿ ಮಗಳ ಹಿಂಬದಿಯಿಂದ ಬಂದ ಗಾರ್ಮೆಂಟ್ ನಾ ಮಿನಿ ಬಸ್ (kA-05 AD-4275) ನಂಬರ್ ನ ಗಾಡಿಯು ಅತಿ ವೇಗವಾಗಿ…
ಯೂಜುಡಿ ಮಿಶ್ರಿತ ನೀರು ಜನರ ಹೊಟ್ಟೆ ಸೇರುತ್ತಿದೆ.
ತಿಪಟೂರು. ತಿಪಟೂರು ಮತ್ತು ಅರಸೀಕೆರೆ ಪಟ್ಟಣಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಸರಬರಾಜು ಯೋಜನೆ ಅಡಿ 1993 ನೇ ಇಸವಿಯಲ್ಲಿ ಈಚನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಈಚನೂರು ಗ್ರಾಮದ ಸರ್ವೆ ನಂಬರ್ 65 ರ,338 ಎಕರೆ ವಿಸ್ತೀರ್ಣವುಳ್ಳ ಈಚನೂರು ಕೆರೆಗೆ ಹೇಮಾವತಿ ನೀರು ಹರಿಸಲಾಗುತ್ತಿದೆ. ಈಚನೂರು ಕೆರೆಯಿಂದ ತಿಪಟೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಹೇಮಾವತಿ ನೀರನ್ನು ಬಹಳಷ್ಟು ವರ್ಷಗಳಿಂದ ಸರಬರಾಜು ಮಾಡಲಾಗುತ್ತಿದ್ದು,ಈಚನೂರು ಕೆರೆಯ ಪಂಪ್ ಹೌಸ್ ಅಲ್ಲಿ 40 ಹೆಚ್ ಪಿ ಯ…
ಸೆ.15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ 90 ಕಿ.ಮೀ. ಮಾನವ ಸರಪಳಿ
ತುಮಕೂರು : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ 15ರಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮದವರೆಗೆ 90 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಬೇಕಾದರೆ ಪ್ರಜಾಪ್ರಭುತ್ವವಾದಿಗಳು ಈ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು. …
ಕರೀಕೆರೆ ಗ್ರಾಮದ,ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೆಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ.
ತಿಪಟೂರು ಸುದ್ದಿ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ನಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೀಕೆರೆ ಗ್ರಾಮದ,ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆಂಗಿನ ಸಸಿ ನೆಡುವ ಮೂಲಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಯೋಜನೆ ಮಾಡಲಾಗಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ 13 ಶಾಲೆಗಳಿಂದ ,150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸಿದ್ದರು. ಕಾರ್ಯಕ್ರಮದಲ್ಲಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ರವರು ಮಕ್ಕಳಿಗೆ ವಿದ್ಯಾಭ್ಯಾಸವು ಅಷ್ಟೇ ಮುಖ್ಯವಲ್ಲ,…
ಗೋಸಲ ಚನ್ನಬಸವೇಶ್ವರ ಸ್ವಾಮಿ ಯವರ ನೂತನ ಮರದ ರಥಕ್ಕೆ ಬೆಳ್ಳಿ ಕವಚ ಹೊದಿಸುವ ಕಾರ್ಯ ಶಾಸ್ತ್ರೋಕ್ತವಾಗಿನೆಡೆಯಿತು.
ಗುಬ್ಬಿ ಪಟ್ಟಣದ ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರ ಸ್ವಾಮಿ ಯವರ ಉತ್ಸವಕ್ಕೆಂದು ನೂತವಾಗಿ ನಿರ್ಮಾಣ ವಾಗಿರುವ ಮರದ ರಥಕ್ಕೆ ಬೆಳ್ಳಿ ಕವಚ ಹೊದಿಸುವ ಕಾರ್ಯ ಸೋಮವಾರ ಮಧ್ಯಾಹ್ನ 1-30 ಕ್ಕೆ ಶಾಸ್ತ್ರೋಕ್ತ ವಿದಿ ವಿಧಾನಗಳೊಂದಿಗೆ ದೇವಾಲಯದ ಆವರಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಅರ್ಚಕರಾದ ಆರಾಧ್ಯ, ಹಾಗೂ ಆಗಮಿಕರಾದ ರುದ್ರಪ್ರಸಾದ್ ನೆಡೆಸಿಕೊಟ್ಟರು.ಬೆಳಿಗ್ಗೆಯಿಂದಲೇ ಮರದ ರಥ ದ ದಾನಿಗಳಾದ ಜೈ ಭಾರತ್ ಚಿತ್ರಮಂದಿರದ ಮಾಲೀಕರಾದ ಹರೀಶ್ ದಂಪತಿಗಳು ಪೂಜಾ ಕಾರ್ಯ ಕೈಗೊಂಡಿದ್ದರು ನಂತರ ಸಾಂಕೇತಿಕವಾಗಿ ಕವಚ ದಾರಣೆಯ…
ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದ ವಕೀಲ ಕಲಾವಿದರಿಂದ ನಾಟಕ ಪ್ರದರ್ಶನ
ಕಲ್ಪತರ ನಾಡು ಎಂದರೆ ತುಮಕೂರು ತುಮಕೂರಿಗೆ ಮತ್ತೊಂದು ಹೆಸರೇ ರಂಗಭೂಮಿಯ ತವರೂರು ಡಾಕ್ಟರ್ ಗುಬ್ಬಿ ವೀರಣ್ಣನವರು ಜನಿಸಿದ ಈ ನಾಡಲ್ಲಿ ಪೌರಾಣಿಕ ನಾಟಕವೆಂದರೆ ಕಲಾವಿದರಿಗೆ ಕಲಾ ಪ್ರೋತ್ಸಾಹಕರಿಗೆ ಬಹಳ ಅಚ್ಚುಮೆಚ್ಚು ಇಂತಹ ರಂಗಭೂಮಿಯ ಇತಿಹಾಸವುಳ್ಳ ತುಮಕೂರಿನಲ್ಲಿ ತುಮಕೂರು ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದ ವಕೀಲ ಕಲಾವಿದರಿಂದ ತುಮಕೂರಿನ ಹೆಸರಾಂತ ಶ್ರೀ ಬಸವೇಶ್ವರ ಡ್ರಾಮಾ ಸೀನರಿಯ ಭವ್ಯರಂಗ ಸಜ್ಜಿಕೆಯಲ್ಲಿ ಕಲಾ ಹೊಂಗಿರಣ ಟಿ ಎಚ್ ಸುದೀಪ್ ರವರ…