
ಪ್ರಮುಖ ಸುದ್ದಿಗಳು
ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು”
ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷಟು ವಿಷಯಗಳು ಹರಿದಾಡುತ್ತದೆ ಆದರೆ ನಮಗೆ ಸರಿ ಎನಿಸಿದ ವಿಷಯಗಳನ್ನು ಮಾತ್ರ ಪಡೆದುಕೊಳ್ಳಬೇಕು ಸಾಮಾಜಿಕ ಮಾಧ್ಯಮಗಳಲ್ಲಿ ಯೂಟೂಬರ್ಗಳು ಎಚ್ಚರಿಕೆಯಿಂದ ಸಾಮಾಜಿಕ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ವಿಡಿಯೋಗಳನ್ನು ಮಾಡಬೇಕು ಎಂದು ಪ್ರಜಾಪ್ರಗತಿಯ ಸಂಪಾದಕರಾದ ಎಸ್ ನಾಗಣ್ಣ ಸಲಹೆ ನೀಡಿದರು. ನಗರದ ಶ್ರೀ ಸಿದ್ಧಾಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದಾರ್ಥ ಸಂಕಲ್ಪ 2025 ಕಾರ್ಯಕ್ರಮದಲ್ಲಿ ತುಮಕೂರಿನಲ್ಲಿ ಹೆಸರು ಮಾಡಿರುವಂತಹ ಬ್ಲಾಗರ್ಸ್ ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ನಾಡಿನ ಸಾಮಾಜಿಕ ಸ್ವಾಸ್ಥ್ಯವನ್ನು…
ವಕೀಲ ಸುಧಾಕರ್ ಮೇಲಿನ ಹಲ್ಲೆಗೆ ವಕೀಲರ ಸಂಘ ಖಂಡನೆ
ವಕೀಲರ ರಕ್ಷಣಾ ಕಾಯಿದೆ ಕಠಿಣಗೊಳಿಸಲು ಸರ್ಕಾರಕ್ಕೆ ಒತ್ತಾಯ ತುಮಕೂರು: ಪಾವಗಡ ತಾಲ್ಲೂಕು ವಕೀಲ ಟಿ.ಹೆಚ್.ಸುಧಾಕರ್ ಮೇಲಿನ ಹಲ್ಲೆ ಖಂಡಿಸಿ, ಅವರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಲು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಕೀಲ ಧರ್ಮ ಪಾಲನೆ ಮಾಡುವ ವಕೀಲರಿಗೆ ರಕ್ಷಣೆ ದೊರೆಯುತ್ತಿಲ್ಲ, ವಕೀಲರ ರಕ್ಷಣಾ ಕಾಯಿದೆಯನ್ನು ಕಠಿಣವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರಿಗೆ ಮನವಿಪತ್ರ ಸಲ್ಲಿಸಿದರು. …
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್ ಗರಿಮೆ
ತುಮಕೂರು: ಮಾಧ್ಯಮ ಶಿಕ್ಷಣ ಕ್ಷೇತ್ರದ ಗುಣಮಟ್ಟದ ಪ್ರಗತಿ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಪಠ್ಯಕ್ರಮ ಹಾಗೂ ಪ್ರಾಯೋಗಿಕ ಕಲಿಕೆ ಅವಕಾಶ ಸೇರಿದಂತೆ ಸರ್ವಾಂಗೀಣ ಕೊಡುಗೆಗಳನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಮಾಧ್ಯಮ ಕಾಲೇಜುಗಳಲ್ಲಿ ಕರ್ನಾಟಕದಿಂದ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರಕ್ಕೆ ಪ್ರಸಕ್ತ ಸಾಲಿನ ‘ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್-2025 ಪ್ರಶಸ್ತಿ ಸಂದಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಇತ್ತೀಚಿಗೆ ನಟ ರಘು ಭಟ್ ನೇತೃತ್ವದಲ್ಲಿ ಆಯೋಜಿಸಲಾದ ಟಿಎನ್‍ಐಟಿ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿಗಳು ವಿತರಣಾ…
ಅಪ್ರಾಪ್ತ ಚಾಲಕನಿಗೆ ಬಿತ್ತು 25,000 ದಂಡ
ತಿಪಟೂರು: ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟಂತಹ ವಾಹನ ಮಾಲೀಕನಿಗೆ 25000 ರೂ ಗಳ ದಂಡವನ್ನು ವಿಧಿಸಿದ CJ & JMFC ಕೋರ್ಟ್ ತಿಪಟೂರು. ಅಪ್ರಾಪ್ತರು ವಾಹನ ಚಾಲನೆ ಮಾಡುವುದು & ವಾಹನ ಚಾಲನೆಗೆ ನೀಡುವುದು ಕಾನೂನುಗೆ ವಿರುದ್ಧವಾದುದ್ದು. ಅರಸೀಕೆರೆ ತಾಲೂಕಿನ ಬಾಣಾವರದ ಹೋಬಳಿಯ ಬಸವರಾಜಪುರ ಮೂಲದ ಜಯಂತ್ ಗೌಡ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೆಂಗಳೂರು- ಹೊನ್ನಾವರ ಹೆದ್ದಾರಿಯ 206ರ ಕೊನೇಹಳ್ಳಿ ಸಮೀಪ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದನ್ನು…
ಒಳ ಮೀಸಲಾತಿ : ಅಲೆಮಾರಿಗಳಿಗಾಗಿರುವ ಅನ್ಯಾಯ ಸರಿ ಪಡಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ
ತುಮಕೂರು. : ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ತುಮಕೂರು ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತು ಗೌರವ ಅಧ್ಯಕ್ಷರಾದ ಚಿಂತಕ ಕೆ.ದೊರೈರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ‘ಒಳ ಮೀಸಲಾತಿ’ಯ ಮೂಲ ಉದ್ದೇಶವೇ ಮೀಸಲಾತಿಯ ಸವಲತು ಮತ್ತು ಪ್ರಾತಿನಿಧ್ಯ್ತ ಎಲ್ಲರಿಗೂ ಸಮನಾಗಿ ದೊರೆಯಬೇಕು ಎಂಬುದಾಗಿದೆ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೂ ಸಮಪಾಲು…
ಒಳಮೀಸಲಾತಿ ಹಂಚಿಕೆ: ಸದ್ಯಕ್ಕೆ ಸಮಾಧಾನಕರ ಮಾದಿಗ ಸಮುದಾಯಕ್ಕೆ ನಿರಾಳ ಸ್ಥಿತಿ: ಡಾ.ಲಕ್ಷ್ಮೀಕಾಂತ್
ತುಮಕೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಉಪಜಾತಿಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿ ಪ್ರಮಾಣ ಸಮಾಧಾನ ತಂದಿದೆ. ಇದೂವರೆಗೆ ಉಸಿರು ಕಟ್ಟಿದ ಪರಿಸ್ಥಿತಿಯಲ್ಲಿದ್ದ ಮಾದಿಗ ಸಮಾಜ ಈ ನಿರ್ಧಾರದಿಂದ ತಕ್ಕಮಟ್ಟಿಗೆ ಉಸಿರಾಡುವಷ್ಟು ನಿರಾಳವಾಗಿದೆ ಎಂದು ಒಳಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಮಾದಿಗ ಸಮುದಾಯದ ಮುಖಂಡ ನಗರದ ಡಾ.ಲಕ್ಷ್ಮೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಮಾದಿಗ ಸಮುದಾಯಕ್ಕೆ ಶಕ್ತಿ ಸಿಕ್ಕಿದಂತಾಗಿದೆ. ಪರಿಶಿಷ್ಟ ಜಾತಿಗಾಗಿ ಶಾಶ್ವತ ಆಯೋಗ ರಚನೆ ಮಾಡಬೇಕೆಂಬ ಸರ್ಕಾರದ ತೀರ್ಮಾನವೂ ಸ್ವಾಗತಾರ್ಹ. ಮುಂದೆ ಜಾತಿ ಜನಗಣತಿ ನಂತರ ಜನಸಂಖ್ಯೆ,…
ಮೈಸೂರು ವಿವಿ: ವಿರುಪಾಕ್ಷಿ ವಿ. ಬೆಟಗೇರಿ ಅವರಿಗೆ ಪಿಎಚ್.ಡಿ ಪ್ರದಾನ
ಮೈಸೂರು: ಅ.21: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದ ನಿವಾಸಿಯಾದ ಶ್ರೀಮತಿ ಶಾಂತ ಬೆಟಗೇರಿ ಮತ್ತು ಶ್ರೀ ವೀರಪ್ಪ ಬೆಟಗೇರಿ ಅವರ ಪುತ್ರ ಮೈಸೂರು ವಿಶ್ವವಿದ್ಯಾಲಯದ ನಿರ್ವಹಣೆ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ವಿರುಪಾಕ್ಷಿ ವಿ. ಬೆಟಗೇರಿ ಅವರು ನಿರ್ವಹಣೆ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಆರ್. ಕಿರಣ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ ಎ ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಅಡ್ವರ್ಟೈಸಿಂಗ್ ಆನ್ ಕನ್ಸೂಮರ್ ಬಿಹೇವಿಯರ್ ಆಫ್ ಚಿಲ್ಡ್ರನ್ ಟೂವರ್ಡ್ಸ್ ಕಿಡ್ಸ್ ಅಪ್ಪಾರೆಲ್ಸ್…
ವೈಸಿರಿ ಕ್ಯಾಂಪಸ್‍ನಲ್ಲಿ79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ.
ತುಮಕೂರು: ಭಾರತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸಮರ್ಪಣೆಯನ್ನು ಸ್ಮರಿಸುವಜೊತೆಗೆ, ಶಿಕ್ಷಣದ ಮೂಲಕ ರಾಷ್ಟ್ರದ ಪ್ರಗತಿಗೆಕೊಡುಗೆ ನೀಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಭರಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎನ್.ಬಿ.ಪ್ರದೀಪ್‍ಕುಮಾರ್ ಹೇಳಿದರು. ನಗರದ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಟೆಕ್ನಾಲಜಿ ಹಾಗೂ ವೈಸಿರಿ ಪದವಿ ಪೂರ್ವಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿಸುವ ಗುರಿಯತ್ತ ದೃಢವಾದ ಕಾರ್ಯೋನ್ಮುಖ ಕ್ರಮಗಳು ಸಾಗುತ್ತಿವೆ. ಈ…
ಕೆಎನ್ ರಾಜಣ್ಣನವರನ್ನು ಮತ್ತೆ ಮಂತ್ರಿ ಸ್ಥಾನಕ್ಕೆ ನೆಮಿಸುವಂತೆ ಆಗ್ರಹಿಸಿ ಸಹಸ್ರಾರು ಬೆಂಬಲಿಗರ ಬೃಹತ್ ಪ್ರತಿಭಟನೆ
ತುಮಕೂರು: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಆಗಮಿಸಿದ್ದ ಸಹಸ್ರಾರು ಅಭಿಮಾನಿಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಕ್ಷದ ಹೈಕಮಾಂಡ್‍ಗೆ ತಪ್ಪು ಮಾಹಿತಿ ನೀಡಿದ ಕಾಣದ ಕೈಗಳ ಪಿತೂರಿಯಿಂದ ಕೆ.ಎನ್.ಆರ್ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆ.ಎನ್.ಆರ್, ಆರ್.ಆರ್ ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ…
ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಸಮ್ಮತಿ
ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು ನಾನ್ ಯುಜಿಸಿ ಎನ್ನದೆ, ಮಾನವೀಯತೆ ದೃಷ್ಟಿಯಿಂದ ಎಲ್ಲ ಅತಿಥಿ ಉಪನ್ಯಾಸಕರ ಒಳಿತಿಗಾಗಿ ಒಂದು ಬಾರಿ ಸೇವಾ ಸಕ್ರಮಾತಿಮಾಡಲು ಕಾನೂನು ಸಚಿವಾರದ ಡಾ.ಎಚ್.ಕೆ.ಪಾಟೀಲ್ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಭೆಯಲ್ಲಿ ಚರ್ಚೆಸಲಾಯಿತು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಧರ್ಮವೀರ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ರಾಜ್ಯ ಸರ್ಕಾರಿ ಪ್ರಧಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ…