ಮಂಟೇಸ್ವಾಮಿ ಕಥಾ ಪ್ರಸಂಗದ ರೂವಾರಿ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ
ಬೆಂಗಳೂರು: ಸಿರಿವರ ಕಲ್ಟರ್ ಅಕಾಡೆಮಿ ಹಾಗೂ ಅನನ್ಯ ಕ್ರಿಯೇಷನ್ಸ್ ಅರ್ಪಿಸುವ ಹೆಸರಾಂತ ಲೇಖಕರು ಮತ್ತು ನಾಟಕಕಾರರೂ ಆದ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭವನ್ನು ಇದೇ ಸೆಪ್ಟೆಂಬರ್ 2ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆಂದು ಅನನ್ಯ ಕ್ರಿಯೇಷನ್ಸ್ ನ ಕಾರ್ಯದರ್ಶಿ ರಾಜೇಶ್ ರಾಂಪುರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾದಲ್ಲಿ ನಾಡಿನ ಖ್ಯಾತ ಹಿರಿಯ ಕವಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ…